ದೇವನಹಳ್ಳಿ( ಬೆಂಗಳೂರು): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬನ ಪರ್ಸ್ನಲ್ಲಿ ಜೀವಂತ ಗುಂಡು ಪತ್ತೆಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾರ್ಥ್ವೆಸ್ಟ್ ದೆಹಲಿ ಮೂಲದ ಕಾರ್ತಿಕೇಯ ಭಾರಧ್ವಜ್ ಎಂಬ ಪ್ರಯಾಣಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದರು. ಈ ಸಮಯದಲ್ಲಿ ಸಿಐಎಸ್ಎಫ್ ಅಧಿಕಾರಿಗಳು ಲಗೇಜುಗಳ ತಪಾಸಣೆ ನಡೆಸಿದ್ದು, ಈ ವೇಳೆ ಆತನ ಪರ್ಸ್ನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ. 7.65 (ಕೆಎಫ್) ಎಂಎಂನ ಜೀವಂತ ಗುಂಡು ಇದಾಗಿದೆ ಎಂದು ಹೇಳಲಾಗಿದೆ.
ಓದಿ: ಬೆಂಗಳೂರು ನನಗೆ ಮನೆ ಇದ್ದಂತೆ, ನಗರ ಬಿಟ್ಟು ಎಲ್ಲೂ ಹೋಗಿಲ್ಲ: ಉಹಾಪೋಹಗಳಿಗೆ ಹಿತೇಶಾ ಚಂದ್ರಾಣಿ ಸ್ಪಷ್ಟನೆ
ಪರ್ಸ್ನಲ್ಲಿ ಜೀವಂತ ಗುಂಡು ಪತ್ತೆ ಮತ್ತು ಪರವಾನಗಿ ಇಲ್ಲದೆ ಪಿಸ್ತೂಲ್ ಹೊಂದಿದ್ದ ಹಿನ್ನೆಲೆಯಲ್ಲಿ ಸಿಐಎಸ್ಎಫ್ ಅಧಿಕಾರಿಗಳು ಪ್ರಯಾಣಿಕನನ್ನು ವಿಮಾನ ನಿಲ್ದಾಣದ ಪೊಲೀಸರ ವಶಕ್ಕೆ ನೀಡಿದ್ದಾರೆ.
ಕಾರ್ತಿಕೇಯ ಭಾರಧ್ವಜ್ ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮದ ನಂತರ ದೆಹಲಿಗೆ ಹಿಂದಿರುಗುವಾಗ ಘಟನೆ ನಡೆದಿದೆ.