ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಪ್ರೀತಿಸಿ ಯುವತಿಯನ್ನು ವಿವಾಹವಾಗಿದ್ದ ಸಿಆರ್ಪಿಎಫ್ ಕಾನ್ಸ್ಟೇಬಲ್ ಇದೀಗ ಕೈ ಕೊಟ್ಟು ಪರಾರಿಯಾಗಿದ್ದಾನೆ. ವಂಚನೆಗೊಳಗಾಗಿರುವ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ನಡೆದಿದೆ.
ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರದ ಯುವಕ ಪ್ರಮೋದ್ ಮತ್ತು ಯುವತಿ ಒಂದೇ ಗ್ರಾಮದವರಾಗಿದ್ದರು. ಇವರಿಬ್ಬರಿಗೆ ಪ್ರೇಮಾಂಕುರವಾಗಿತ್ತು. ಎರಡು ತಿಂಗಳ ಹಿಂದೆ ಪ್ರಮೋದ್ ಯಲಹಂಕದ CRPF ಕ್ಯಾಂಪ್ನಲ್ಲಿ ಯುವತಿಯನ್ನು ವಿವಾಹವಾಗಿದ್ದ. ಆದ್ರೆ ವಿವಾಹವಾದ ನಂತರ ಇದೀಗ ಯುವತಿಯನ್ನ ಬಿಟ್ಟು ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ವಂಚಿಸಿ ನಾಪತ್ತೆಯಾಗಿರುವ ಪತಿಗಾಗಿ ಕಳೆದ ರಾತ್ರಿ ನಂದಗುಡಿ ಠಾಣೆ ಎದುರು ಪತ್ನಿ ಮತ್ತು ಪೋಷಕರು ಧರಣಿ ನಡೆಸಿದ್ದಾರೆ. ಇನ್ನು ಮದುವೆ ಬಳಿಕ ಪತ್ನಿ ಬಿಟ್ಟು ಬೇರೆ ಯುವತಿ ಜತೆ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ ಎಂದು ಯುವತಿ ಆರೋಪಸಿದ್ದು, ನ್ಯಾಯ ಕೊಡಿಸುವಂತೆ ಪ್ರತಿಭಟನೆ ನಡೆಸಿದ್ದಾಳೆ. ನ್ಯಾಯಕ್ಕಾಗಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಯುವತಿ ಆರೋಪಿಸಿದ್ದಾಳೆ.
ಓದಿ:ಕೆಂಪೇಗೌಡ ಏರ್ಪೋರ್ಟ್ನಲ್ಲಿ ದೇಶದಲ್ಲೇ ಮೊದಲ ಪ್ರತ್ಯೇಕ ಎಕ್ಸ್‌ಪ್ರೆಸ್ ಕಾರ್ಗೋ ಟರ್ಮಿನಲ್
ಇದರಿಂದಾಗಿ ಯುವತಿ ಹಾಗೂ ಅವರ ಪೋಷಕರು, ಕಳೆದ ರಾತ್ರಿ ನಂದಗುಡಿ ಪೊಲೀಸ್ ಠಾಣೆಯ ಎದುರು ಪತಿ ಸಿಆರ್ಪಿಎಫ್ ಕಾನ್ಸ್ಟೇಬಲ್ ಪ್ರಮೋದ್ನನ್ನು ಹುಡುಕಿ ಕೊಡುವಂತೆ ಧರಣಿ ನಡೆಸಿದ್ದಾರೆ. ಅಲ್ಲದೇ ನನ್ನನ್ನು ಬಿಟ್ಟು ಪ್ರಮೋದ್ ಬೇರೊಬ್ಬ ಯುವತಿಯೊಂದಿಗೆ ವಿವಾಹ ಆಗೋದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿಯೂ ಪತ್ನಿ ಆರೋಪಿಸಿದ್ದಾಳೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾಳೆ.
ಈ ಸಂಬಂಧ ನಂದಗುಡಿ ಠಾಣೆಯ ಪೊಲೀಸರು, ಯುವತಿ ಹಾಗೂ ಪೋಷಕರೊಂದಿಗೆ ಮಾತುಕತೆ ನಡೆಸಿ, ಪ್ರಮೋದ್ನನ್ನು ಹುಡುಕಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಹೇಳಿದ ಹಿನ್ನೆಲೆ ಯುವತಿ ಮತ್ತು ಪೋಷಕರು ಮನೆಗೆ ಮರಳಿದ್ದಾರೆ.