ETV Bharat / state

ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಮನೆಗೆ ನುಗ್ಗಿದ ಲಾರಿ: ಇಬ್ಬರಿಗೆ ಗಂಭೀರ ಗಾಯ, ಅಂಗಡಿ ಜಖಂ

ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಅಂಗಡಿ ಮನೆಗೆ ನುಗ್ಗಿದ ಪರಿಣಾಮ ಮನೆಯಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

crime-two-people-injured-due-to-road-accident-in-anekal
ಚಾಲಕನ ನಿಯಂತ್ರಣ ತಪ್ಪಿ ಅಂಗಡಿಮನೆಗೆ ನುಗ್ಗಿದ ಲಾರಿ: ಇಬ್ಬರಿಗೆ ಗಂಭೀರ ಗಾಯ, ಅಂಗಡಿ ಜಖಂ
author img

By

Published : Jul 7, 2023, 10:43 PM IST

ಆನೇಕಲ್(ಬೆಂಗಳೂರು): ಬನ್ನೇರುಘಟ್ಟದಿಂದ ಜಿಗಣಿಗೆ ಬರುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಮನೆಗೆ ನುಗ್ಗಿದ ಪರಿಣಾಮ ಮನೆಯಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ. ಗಾಯಾಳುಗಳನ್ನು ಯಲ್ಲಪ್ಪ ಮತ್ತು ಹೇಮಾವತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣ ಬನ್ನೇರುಘಟ್ಟ ಪೊಲೀಸರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ ಡಿಕ್ಕಿಯಾದ ಪರಿಣಾಮ ಅಂಗಡಿಯಲ್ಲಿದ್ದ ಸರಕುಗಳಿಗೆ ಹಾನಿಯಾಗಿದ್ದು, ಮನೆಯ ಛಾವಣಿ ಹಾಗೂ ಗೋಡೆ ಕುಸಿದು ಬಿದಿದೆ. ಸ್ಥಳಕ್ಕೆ ಬನ್ನೇರಘಟ್ಟ ಇನ್ಸ್​ಪೆಕ್ಟರ್​ ಉಮಾಮಹೇಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಚಾಲಕ ಹಾಗೂ ಲಾರಿ ಮಾಲೀಕನ ಮೇಲೆ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಶಾಲಾ ಬಸ್​ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿ ಸಾವು: ಶಾಲಾ ಬಸ್​ ಹಿಂಬದಿ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ಎಂ.ಮೇಡಹಳ್ಳಿ ಸಾಯಿ ಪ್ಯಾರಡೈಸ್ ಬಡಾವಣೆಯಲ್ಲಿ ನಡೆದಿದೆ. ದಾವಣಗೆರೆ ಮೂಲದ ದಂಪತಿಗಳ‌ ಮಗು ದಿವ್ಯಾಂಶೂ (8) ಎರಡನೇ ತರಗತಿಯಲ್ಲಿ ಬಿದರಗೆರೆಯಲ್ಲಿರುವ ಎಸ್​ಎಸ್​ವಿ ಆಂಗ್ಲಮಾಧ್ಯಮದಲ್ಲಿ ಓದುತ್ತಿದ್ದ ಮಗು. ತರಗತಿಗಳನ್ನ ಮುಗಿಸಿ ಮನೆಗೆ ಹಿಂದಿರುವಾಗ ಮನೆ ಸಮೀಪವೇ ಬಸ್ ಚಲಿಸಿದ ವಿದ್ಯಾರ್ಥಿ ಮೇಲೆ ಚಲಿಸಿದ್ದರಿಂದ ಈ ದುರ್ಘಟನೆ ನಡೆದಿದೆ.

ಅಪಘಾತಕ್ಕೆ ಆಟೋ ಚಾಲಕರು ಬಲಿ: ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಅಂತರದಲ್ಲಿ ಪ್ರತ್ಯೇಕ ಎರಡು ಕಡೆಗಳಲ್ಲಿ ನಡೆದ ಸ್ವಯಂಪ್ರೇರಿತ ಅಪಘಾತದಲ್ಲಿ ಇಬ್ಬರು ಆಟೋ ಚಾಲಕರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿತ್ತು. ವೇಗವಾಗಿ ಆಟೋ ಚಲಾಯಿಸಿ ನಿಯಂತ್ರಣ ತಪ್ಪಿದ ಪರಿಣಾಮ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರು ಚಾಲಕರು ಸಾವನ್ನಪ್ಪಿದ್ದರು. ಗೆಳೆಯರ ಬಳಗ ಬಡಾವಣೆಯ ಯಶಸ್ವಿನಿ ಜಂಕ್ಷನ್ ಬಳಿ ಬುಧವಾರ ಮಧ್ಯರಾತ್ರಿ ವೇಗವಾಗಿ ಹೋಗುತ್ತಿದ್ದ ಆಟೋ ನಿಯಂತ್ರಣ ತಪ್ಪಿ ಡಿವೈಡರ್​ಗೆ ಗುದ್ದಿದ ಪರಿಣಾಮ ಚಾಲಕ ರಂಗನಾಥ್ (46) ಸಾವನ್ನಪ್ಪಿದ್ದರು.

ಚಂದ್ರಾಲೇಔಟ್​ನ ಮಾರುತಿನಗರದ ನಿವಾಸಿಯಾಗಿರುವ ರಂಗನಾಥ್ ಆಟೋ ಚಲಾಯಿಸಿ ಜೀವನ ಸಾಗಿಸುತ್ತಿದ್ದರು. ನಿನ್ನೆ ರಾತ್ರಿ ಯಶವಂತಪುರಕ್ಕೆ ಬಾಡಿಗೆಗಾಗಿ ಹೋಗುವಾಗ ಅಜಾಗರೂಕತೆಯಿಂದ ವಾಹನ ಚಲಾಯಿಸಿ ತನ್ನ ಸಾವಿಗೆ ತಾನೇ ಕಾರಣನಾಗಿದ್ದ. ಚಾಲಕ ಮದ್ಯಸೇವನೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿಲ್ಲ. ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಮದ್ಯಸೇವನೆ ಮಾಡಿರುವ ಬಗ್ಗೆ ಗೊತ್ತಾಗಲಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದರು.

ಲಾರಿ ಹಾಗೂ ಆಟೋ ನಡುವೆ ಭೀಕರ ರಸ್ತೆ ಅಪಘಾತ : ಇನ್ನೊಂದೆಡೆ ಕ್ಯಾಂಟರ್​ ಲಾರಿ ಹಾಗೂ ಆಟೋ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದ ಘಟನೆ (ಜೂನ್ 16-2023) ರಂದು ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿತ್ತು. ನಗರದ ಕುಂಟಮ್ಮದ ತೋಟದ ನಿವಾಸಿಗಳಾದ ಶಾಂತಲಕ್ಷ್ಮಿ (30) ಹಾಗೂ ಚಿನ್ಮಯಿ (5) ಮೃತರು ಎಂಬುದು ತಿಳಿದುಬಂದಿತ್ತು.

ಇದನ್ನೂ ಓದಿ: ಕೌಟುಂಬಿಕ ಕಲಹ: ಪತಿಯಿಂದ ಪತ್ನಿ ಹತ್ಯೆ, ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.