ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ನಗರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೂ ಕೋವಿಡ್ ಎಫೆಕ್ಟ್ ತಟ್ಟಿದೆ. ಲಾಕ್ಡೌನ್ ಆದ ಹಿನ್ನೆಲೆ ಹುಂಡಿ ಹಣ ಸಂಗ್ರಹದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.
ಇಂದು ನಡೆದ ಹುಂಡಿ ಹಣದ ಎಣಿಕೆ ಕಾರ್ಯದಲ್ಲಿ 32, 26, 593 ರೂಪಾಯಿ ಸಂಗ್ರಹವಾಗಿದೆ. ಜೊತೆಗೆ 12,400 ರೂ. ಮೌಲ್ಯದ ಬೆಳ್ಳಿ, 3 ಗ್ರಾಂ 450 ಮಿಲಿ ಚಿನ್ನ, 20 ಸಾವಿರ ಮೌಲ್ಯದ 4 ಗ್ರಾಂ ಪ್ಲಾಟಿನಂ ಸರ ಲಭ್ಯವಿದೆ.
ಕಳೆದ ಮಾರ್ಚ್ 29 ರಂದು ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಆ ವೇಳೆ 63,83,963 ರೂಪಾಯಿ ಸಂಗ್ರಹವಾಗಿತ್ತು. ಲಾಕ್ಡೌನ್ ಹಿನ್ನೆಲೆ, ದೇಗುಲಕ್ಕೆ ಬರುತ್ತಿದ್ದ ಆದಾಯ ಗಣನೀಯವಾಗಿ ಕುಸಿದಿದೆ.
ಇದನ್ನೂ ಓದಿ : ಇಂದು ದ್ವಿತೀಯ PUC ಫಲಿತಾಂಶ ಪ್ರಕಟ.. Result ತಿಳಿಯಲು ಹೀಗೆ ಮಾಡಿ
ಹುಂಡಿ ಹಣ ಎಣಿಕೆ ಸಮಯದಲ್ಲಿ ಮುಜರಾಯಿ ತಹಶೀಲ್ದಾರ್ ಜಿ.ಜೆ. ಹೇಮಾವತಿ, ಅಧೀಕ್ಷಕ ರಘು ಹುಚ್ಚಪ್ಪ ಸೇರಿ ಹಲವರು ಉಪಸ್ಥಿತರಿದ್ದರು.