ETV Bharat / state

ಕಾಂಗ್ರೆಸ್ - ಜೆಡಿಎಸ್ ನಡುವೆ ಮೂಡದ ಒಮ್ಮತ... ಫಲ ಕಾಣದ ಸಂಧಾನ ಸಭೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೈತ್ರಿ ಧರ್ಮದ ವಿರೋಧಿ ಚಟುವಟಿಕೆಗಳು ಎರಡು ಪಕ್ಷಗಳಿಂದ ನಡೆಯುತ್ತಿದೆ. ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂಖಡರ ಕಿತ್ತಾಟ ಮೈತ್ರಿ ಅಭ್ಯರ್ಥಿ‌ಗೆ ತಲೆ ನೋವು ತಂದಿದೆ.

ಸಂಧಾನ ಸಭೆ
author img

By

Published : Apr 2, 2019, 4:51 PM IST

ನೆಲಮಂಗಲ: ಕರ್ನಾಟಕ‌ದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜಂಟಿ‌ಯಾಗಿ ಲೋಕಸಭಾ ಚುನಾವಣೆ‌ಗೆ ಹೊರಟಿದ್ದು, ಲೋಕಸಮರದಲ್ಲಿ ಬಹುದೊಡ್ಡ ಗೆಲುವಿನ ಕನಸು ಹೊತ್ತುಕೊಂಡಿದೆ.

ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೈತ್ರಿ ಧರ್ಮದ ವಿರೋಧಿ ಚಟುವಟಿಕೆಗಳು ಎರಡು ಪಕ್ಷಗಳಿಂದ ನಡೆಯುತ್ತಿದೆ. ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂಖಡರ ಕಿತ್ತಾಟ ಮೈತ್ರಿ ಅಭ್ಯರ್ಥಿ‌ಗೆ ತಲೆ ನೋವು ತಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ಮತ್ತು ಕಾಂಗ್ರೆಸ್ ಸ್ಥಳೀಯ ಮುಖಂಡರ ಜಂಟಿ ಚುನಾವಣಾ ಪ್ರಚಾರಕ್ಕೆ ಅಡೆತಡೆ‌ಗಳು ಮೊದಲಿನಿಂದಲೂ ಇತ್ತು. ವೀರಪ್ಪ ಮೊಯ್ಲಿ ನೇತೃತ್ವದ‌ದಲ್ಲಿ ಎರಡು ಪಕ್ಷಗಳ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅನಂತರ ಚುನಾವಣಾ ಪ್ರಚಾರಕ್ಕೆ ಜಂಟಿಯಾಗಿ ಹೋಗುವ ತೀರ್ಮಾನ ಮಾಡಲಾಯಿತು.

ಫಲ ಕಾಣದೆ ಮುಕ್ತಾಯವಾದ ಸಂಧಾನ ಸಭೆ

ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡ ವಿರುದ್ಧ ಬಂಡಾಯ ಎದ್ದಿದ್ದ ಕಾಂಗ್ರೆಸ್​​​​ನ ಮುದ್ದಹನುಮೇಗೌಡ ನಾಮಪತ್ರ ವಾಪಸ್​ ತೆಗೆದುಕೊಳ್ಳುವವರೆಗೂ ಜಂಟಿ ಪತ್ರಿಕಾ‌ಗೋಷ್ಠಿ‌ಗೆ ಬರುವುದಿಲ್ಲ ಎಂದು ಬೇಡಿಕೆ ಇಟ್ಪಿದ್ದರು.

ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ವಿರುದ್ಧ ಎರಡು ಭಾರಿ ಸೋಲನುಭವಿಸಿದ ಅಸಮಾಧಾನ ಮುನೇಗೌಡ‌ರಿಗೆ ಇತ್ತು ಎನ್ನಲಾಗಿದೆ. ಟಿ. ವೆಂಕಟರಮಣಯ್ಯ ಸ್ವತಃ ಪೋನ್ ಮಾಡಿ ಜಂಟಿ ಪತ್ರಿಕಾಗೋಷ್ಠಿ‌ಗೆ ಬರುವಂತೆ ಆಹ್ವಾನ ಕೊಟ್ಟರೂ ಮುನೇಗೌಡರು ತಮ್ಮ ಹಳೇ ರಾಜಕೀಯ ದ್ವೇಷ ಮುಂದುವರಿಸಿದರು.

ಇಂದು ಬೆಳಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ಅದರೆ ಇದಕ್ಕೂ ಮುನ್ನ ಜೆಡಿಎಸ್ ಕಚೇರಿಯಲ್ಲಿ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಮುನೇಗೌಡ ಮತ್ತು ಟಿ. ವೆಂಕಟರಮಣಯ್ಯ ನಡುವೆ ಸಂಧಾನ ನಡೆಸಲಾಯಿತು.

ಎರಡು ತಾಸು ನಡೆದ ಸಂಧಾನ ಸಭೆಯಲ್ಲಿ ಮುನೇಗೌಡ‌ರ ಷರತ್ತುಗಳಿಗೆ ಟಿ.ವೆಂಕಟರಮಣಯ್ಯ ಮಣಿಯದ ಪರಿಣಾಮ 10 ಗಂಟೆಗೆ ಶುರುವಾಗಬೇಕಿದ್ದ ಪತ್ರಿಕಾಗೋಷ್ಠಿ 12 ಗಂಟೆಗೆ ಶುರುವಾಯಿತು. ಮೇಲ್ನೋಟಕ್ಕೆ ಎರಡೂ ಪಕ್ಷಗಳ ಮುಂಖಡರು ಮೈತ್ರಿ ಮಂತ್ರ ಹೇಳುತ್ತಿದ್ದರೂ ಅಂತಿಮವಾಗಿ ಈ ಭಿನ್ನಾಭಿಪ್ರಾಯಗಳು ಎಲ್ಲಿಗೆ ತಲುಪಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

Intro:ಕರ್ನಾಟಕ‌ದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ‌ಗಳು ಜಂಟಿ‌ಯಾಗಿ ಲೋಕಸಭಾ ಚುನಾವಣೆ‌ಗೆ ಹೊರಟ್ಟಿ‌ದೆ‌. ರಾಜ್ಯ‌ದಲ್ಲಿ ಮೈತ್ರಿ ಅಭ್ಯರ್ಥಿಗಳ‌ನ್ನ ಕಣಕ್ಕೆ ಇಳಿಸುವ ಮುಲಕ 22 ಹೆಚ್ಚು ಲೋಕಸಭಾ ಕ್ಷೇತ್ರ ಗೆಲ್ಲುವ ರಣತಂತ್ರ‌ವನ್ನು ಮೈತ್ರಿ ಪಕ್ಷ‌ಗಳು ಎಣೆಯುತ್ತಿವೆ. ಅದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೈತ್ರಿ ಧರ್ಮದ ವಿರೋಧಿ ಚಟುವಟಿಕೆಗಳು ಎರಡು ಪಕ್ಷಗಳಿಂದ ನಡೆಯುತ್ತಿದೆ. ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂಖಡರ ಕಿತ್ತಾಟ ಮೈತ್ರಿ ಅಭ್ಯರ್ಥಿ‌ಗೆ ತಲೆ ನೋವು ತಂದಿದೆ.

Body:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ಮತ್ತು ಕಾಂಗ್ರೆಸ್ ಸ್ಥಳೀಯ ಮುಖಂಡರ ಜಂಟಿ ಚುನಾವಣಾ ಪ್ರಚಾರಕ್ಕೆ ಅಡೆತಡೆ‌ಗಳು ಇದ್ದೇ ಇತ್ತು . ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಸ್ಥಳೀಯ ಎರಡು ಪಕ್ಷ ಗಳ ಮೊದಲಿನಿಂದ್ಲೂ ರಾಜಕೀಯ ಜಿದ್ದು ಇದ್ದು. ವೀರಪ್ಪ‌ಮೊಯ್ಲಿ ನೇತೃತ್ವದ‌ದಲ್ಲಿ ಎರಡು ಪಕ್ಷಗಳ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅನಂತರ ಚುನಾವಣಾ ಪ್ರಚಾರಕ್ಕೆ ಜಂಟಿಯಾಗಿ ಹೋಗುವ ತಿರ್ಮಾನ ಮಾಡಲಾಯಿತು. ಅದರೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡ ವಿರುದ್ಧ ಬಂಡಾಯ ಎದ್ದಿದ್ದ ಕಾಂಗ್ರೆಸ್ ನ ಮುದ್ದಹನುಮಮೇಗೌಡ ನಾಮಪತ್ರ ವಾಪಸ್ಸು ತೆಗೆದು ಕೊಳ್ಳುವರೆಗೂ ಜಂಟಿ ಪತ್ರಿಕಾ‌ಗೋಷ್ಠಿ‌ಗೆ ಬರುವುದಿಲ್ಲವೆಂದು ಬೇಡಿಕೆ ಇಟ್ಪಿದ್ದರು. ಇದೇ ಬೇಡಿಕೆ ನೇಪ ಮಾಡಿಕೊಂಡು ಎರಡು ಭಾರಿ ಪತ್ರಿಕಾಗೋಷ್ಠಿ‌ಗೆ ಬಾರದೆ ಹಿಂದೆ ಸರಿದಿದ್ದರು. ದೊಡ್ಡ‌ಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ವಿರುದ್ಧ ಎರಡು ಭಾರಿ ಸೋಲು ಆನುಭವಿಸಿದ ಆಸಮಾಧನ ಮುನೇಗೌಡ‌ರಿಗೆ ಇತ್ತು. ಟಿ. ವೆಂಕಟರಮಣಯ್ಯ ಸ್ವಂತಹ ಪೋನ್ ಮಾಡಿ ಜಂಟಿ ಪತ್ರಿಕಾಗೋಷ್ಠಿ‌ಗೆ ಬರುವಂತೆ ಆಹ್ವಾನ ಕೊಟ್ಟರು ಮುನೇಗೌಡ ರು ತಮ್ಮ ಹಳೇ ರಾಜಕೀಯ ದ್ವೇಷ ಮುಂದುವರಿಸಿದು.

ಇಂದು ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ಅಯೋಜನೆ ಮಾಡಲಾಯಿತು. ಅದರೆ ಇದಕ್ಕೂ ಮುನ್ನ ಜೆಡಿಎಸ್ ಕಛೇರಿಯಲ್ಲಿ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಮುನೇಗೌಡ ಮತ್ತು ಟಿ. ವೆಂಕಟರಮಣಯ್ಯ ನಡುವೆ ಸಂಧಾನ ನಡೆಸಲಾಯಿತು. ಎರಡು ತಾಸು ನಡೆದ ಸಂಧಾನ ಸಭೆಯಲ್ಲಿ ಮುನೆಗೌಡ‌ರ ಷರತ್ತುಗಳಿಗ ಟಿ.ವೆಂಕಟರಮಣಯ್ಯ ಮಣಿದ ಪರಿಣಾಮ 10 ಗಂಟೆಗೆ ಶುರುವಾಗ ಬೇಕಿದ್ದ ಪತ್ರಿಕಾಗೋಷ್ಠಿ 12 ಗಂಟೆಗೆ ಶುರುವಾಯಿತು. ಮೇಲ್ನೋಟಕ್ಕೆ ಎರಡು ಪಕ್ಷಗಳ ಮುಂಖಡರು ಮೈತ್ರಿ ಮಂತ್ರ ಹೇಳುತ್ತಿದ್ದಾರೆ. ಅಂತಿಮವಾಗಿ ಫಲಿತಾಂಶ ದಿನ ಮೈತ್ರಿ ಧರ್ಮ‌ದ ಸತ್ಯ ಹೊರ ಬೀಳಲಿದೆ

ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡ‌ರ ಸಮ್ಮುಖದಲ್ಲಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.