ದೇವನಹಳ್ಳಿ : ದೇವನಹಳ್ಳಿ ತಾಲೂಕಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೇ ಶುಕ್ರದೆಸೆ. ಏರ್‌ಪೋರ್ಟ್‌ನಿಂದ ಇಲ್ಲಿನ ಭೂಮಿಗೆ ಹೇಗೆ ಬಂಗಾರದ ಬೆಲೆ ಇದೆಯೋ ಅದೇ ರೀತಿ ದೇವನಹಳ್ಳಿ ತಹಶೀಲ್ದಾರ್ ಹುದ್ದೆಗೂ ಭಾರಿ ಬೇಡಿಕೆ ಇದ್ದು, ಅದಕ್ಕಾಗಿ ಪೈಪೋಟಿ ನಡೆದಿದೆ.
ದೇವನಹಳ್ಳಿ ತಾಲೂಕಿನ ತಹಶೀಲ್ದಾರ್ ಸ್ಥಾನಕ್ಕೆ ಭಾರಿ ಪೈಪೋಟಿ ವ್ಯಕ್ತವಾಗಿದೆ. ಕಳೆದ ವರ್ಷ ರಾಜಣ್ಣ, ಮಂಜುನಾಥ್, ಕೆ. ಮಂಜುನಾಥ್, ಅಜಿತ್ ರೈ ನಡುವೆ ಪೈಪೋಟಿ ಇತ್ತು. ಇದೀಗ ಅನಿಲ್ ಕುಮಾರ್ ಮತ್ತು ಕೆ. ಮಂಜುನಾಥ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಕಳೆದ ಮೂರು ದಿನಗಳ ಹಿಂದೆ ಕೆಆರ್‌ಪುರಂಗೆ ಅಜಿತ್ ರೈ ಅವರ ವರ್ಗಾವಣೆ ಆಗಿತ್ತು. ಈ ಹಿನ್ನೆಲೆ ಕೆ ಮಂಜುನಾಥ್ ದೇವನಹಳ್ಳಿ ತಹಶೀಲ್ದಾರ್ ಆಗಿ ನೇಮಕವಾಗಿದ್ದರು. ಇಂದು ಅದೇ ಸ್ಥಾನಕ್ಕೆ ಅನಿಲ್ ಕುಮಾರ್ ಅವರನ್ನು ಸರ್ಕಾರ ನೇಮಕ ಮಾಡಿದೆ.
ಸದ್ಯ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದ್ದು, ಈ ರೀತಿಯ ಬೆಳವಣಿಗೆಗಳಿಂದಾಗಿ ಚುನಾವಣೆಯನ್ನು ಸೂಕ್ತ ರೀತಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರಿಗೆ ಅಸಮಾಧಾನ ತಂದಿದೆ.