ದೇವನಹಳ್ಳಿ: ಮಸ್ಕತ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿಮಾನದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆಯ ಕರೆ ಬಂದಿದ್ದು, ಹುಸಿ ಬಾಂಬ್ ಕರೆ ಪ್ರಯಾಣಿಕರು ಮತ್ತು ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿತ್ತು.
ಇಂದು ಸಂಜೆ 4 ಗಂಟೆ ಸಮಯದಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಸ್ಕತ್ನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ 818 ವಿಮಾನ ಲ್ಯಾಂಡ್ ಆಗಿದೆ. ಈ ವೇಳೆ ವಿಮಾನದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆಯ ಕರೆ ಬಂದಿದೆ. ತಕ್ಷಣವೇ ರನ್ ವೇಯಲ್ಲಿ ನಿಂತಿದ್ದ ವಿಮಾನದಲ್ಲಿನ ಪ್ರಯಾಣಿಕರನ್ನ ಕೆಳಗಿಸಿದ ಭದ್ರತಾ ಸಿಬ್ಬಂದಿ ಮತ್ತು ಶ್ವಾನ ದಳ ತಪಾಸಣೆ ನಡೆಸಿದರು. ಈ ಸಮಯದಲ್ಲಿ ಎರಡು ಅನುಮಾನಾಸ್ಪದ ಬ್ಯಾಗ್ಗಳು ಕಂಡು ಬಂದಿವೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಅಪಘಾತಕ್ಕೊಳಗಾದ ಹೆಚ್ಡಿಕೆ ಬೆಂಗಾವಲು ವಾಹನ: ಪೊಲೀಸರಿಗೆ ಗಾಯ
ಬ್ಯಾಗ್ಗಳನ್ನ ತಪಾಸಣೆ ನಡೆಸಿದ್ದಾಗ ಬಟ್ಟೆಗಳಿರುವುದು ಪತ್ತೆಯಾಗಿದೆ ಮತ್ತು ಬ್ಯಾಗ್ ಮಾಲೀಕರು ಮಸ್ಕತ್ ನಲ್ಲಿರುವುದು ದೃಢಪಟ್ಟಿದೆ. ಅನಂತರ ಸಿಬ್ಬಂದಿ ಮತ್ತು ಪ್ರಯಾಣಿಕರು ನಿಟ್ಟಿಸಿರುಬಿಟ್ಟರು.