ಆನೇಕಲ್: ಬೈಕ್ಗೆ ಐಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ.
ಪಾಲಕೋಡ್ ನಿವಾಸಿ ವೆಂಕಟೇಶ್ ಮೃತ ವ್ಯಕ್ತಿ. ಹೊಸೂರು ಸಿಪ್ಸಕಾಟ್ಮೀ ಕೈಗಾರಿಕಾ ಪ್ರದೇಶದ ರಾಜೇಯಾ ಎಂಬ ಖಾಸಗಿ ಕಾರ್ಖಾನೆಯೊಂದರಲ್ಲಿ ಈತ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಕೆಲಸ ಮುಗಿಸಿ ಹೊಸೂರಿಗೆ ಪಲ್ಸರ್ ಬೈಕ್ನಲ್ಲಿ ಹೋಗುತ್ತಿದ್ದಾಗ ಅತ್ತಿಬೆಲೆ ಟೋಲ್ ಮುಂಭಾಗ ಎದುರಿಗೆ ಬಂದ ಐಚರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ .