ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆಯಲ್ಲಿ ತೆಪ್ಪ ಮಗುಚಿ ಟೆಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮುಂದುವರೆದಿದೆ.
ಈ ಕುರಿತು ರಾಮಮೂರ್ತಿ ನಗರ ಪೊಲೀಸರು ಒಂದೆಡೆ ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಮಾತನಾಡಿ, ಇಬ್ಬರು ಸಾಫ್ಟ್ವೇರ್ ಟೆಕ್ಕಿಗಳು ಕೆರೆ ಬಳಿ ತೆರಳಿದ್ದರು. ಆದ್ರೆ ರಾತ್ರಿ ತೆಪ್ಪದಲ್ಲಿ ಕುಳಿತು ಕೆರೆಯ ಮಧ್ಯ ತೆರಳಿದ್ದ ವೇಳೆ 50ಮೀಟರ್ ದೂರ ಹೋಗುತ್ತಿದ್ದಂತೆ ಹರಿಗೋಲು ಕೆಳಗೆ ಬಿದ್ದಿತ್ತು. ಅದನ್ನ ಹಿಡಿಯಲು ಯತ್ನಿಸಿದಾಗ ತೆಪ್ಪ ಮಗುಚಿ ಬಿದ್ದು ಸಚಿನ್ ನೀರಲ್ಲಿ ಮುಳುಗಿದ್ದಾರೆ ಎಂದು ಮಾಹಿತಿ ನೀಡಿದ್ರು.
ಸದ್ಯ ಎನ್ಡಿಆರ್ಎಫ್ ಹಾಗೂ ರಾಮಮೂರ್ತಿ ನಗರ ಪೊಲೀಸರು ಕಾರ್ಯಾಚರಣೆ ಮಾಡ್ತಿದ್ದಾರೆ. ಹಾಗೆಯೇ ಆದಷ್ಟು ಬೇಗ ಮೃತದೇಹ ಪತ್ತೆ ಹಚ್ಚುವುದೇ ನಮ್ಮ ಕೆಲಸ, ಕೆರೆಯ ಸುತ್ತ ಕಮರ್ಷಿಯಲ್ ಬೋರ್ಡಿಂಗ್ ಇಲ್ಲ. ಹಾಗೆ ತೆಪ್ಪ ಮಗುಚಿದಾಗ ಅಲ್ಲಿ ಯಾರೂ ಇರಲಿಲ್ಲ, ಮತ್ತೊಂದೆಡೆ ಯಾವುದೇ ಸೂಕ್ತ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಈ ದುರ್ಘಟನೆ ನಡೆದಿದೆ. ಇನ್ನು ಟೆಕ್ಕಿಗಳು ಯಾಕಾಗಿ ಅಲ್ಲಿ ಹೋದ್ರು ಅನ್ನೋದು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನ ಕಲೆ ಹಾಕ್ತೇವೆ ಅಂತ ಡಿಸಿಪಿ ತಿಳಿಸಿದ್ರು.