ದೊಡ್ಡಬಳ್ಳಾಪುರ : ಹಳೇ ವೈಷಮ್ಯದ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಬಿಯರ್ ಬಾಟಲ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಮಧುರೆ ಹೋಬಳಿ ಕನ್ನಮಂಗಲ ಗ್ರಾಮದಲ್ಲಿ ನಡೆದಿದೆ.
ನಾಗರಾಜು ಹಲ್ಲೆಗೆ ಒಳಗಾದ ವ್ಯಕ್ತಿ. ನಾಗರಾಜ್ ಮತ್ತು ಚಿಕ್ಕಬಸವರಾಜು ಎಂಬಾತನ ನಡುವೆ ಹಳೇ ವೈಷಮ್ಯ ಇದ್ದು, ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಈ ನಡುವೆ ನಾಗರಾಜ್ಗೆ ಬಸವರಾಜ್ ಕೊಲೆ ಬೆದರಿಕೆಯನ್ನು ಹಾಕಿದ್ದ. ಆದರೆ ಇಂದು ನಾಗರಾಜ್ ದನ ಮೇಯಿಸುವ ವೇಳೆ ಅಲ್ಲಿಗೆ ಬಂದ ಚಿಕ್ಕಬಸವರಾಜ್, ಬಿಯರ್ ಬಾಟಲ್ನಿಂದ ನಾಗರಾಜ್ ತಲೆ ಕಾಲು ಬೆನ್ನಿನ ಮೇಲೆ ಹಲ್ಲೆ ಮಾಡಿದ್ದಾನೆ. ಮಾರಣಾಂತಿಕ ಹಲ್ಲೆಗೆ ತುತ್ತಾಗಿರುವ ನಾಗರಾಜುವನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.