ETV Bharat / state

ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥೆಯಿಂದ ಏರ್​ಪೋರ್ಟ್ ಯಾತ್ರೆ

author img

By

Published : Aug 28, 2022, 9:41 PM IST

ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸ್ವಯಂ ಸೇವಾ ಸಂಸ್ಥೆ ಏರ್​ಪೋರ್ಟ್ ಯಾತ್ರೆಯನ್ನ ನಡೆಸಿದೆ.

ಏರ್​ಪೋರ್ಟ್ ಯಾತ್ರೆ
ಏರ್​ಪೋರ್ಟ್ ಯಾತ್ರೆ

ದೇವನಹಳ್ಳಿ: ಬೆಂಗಳೂರಿನಿಂದ ದೇವನಹಳ್ಳಿ ಏರ್​ಪೋರ್ಟ್ ತಲುಪಲು ಅತ್ಯಂತ ಅಗ್ಗದ ಪ್ರಯಾಣ ದರ ಮತ್ತು ಟ್ರಾಫಿಕ್ ಫ್ರೀ ರೈಲು ಮಾರ್ಗ, ರೈಲ್ವೆ ಪ್ರಯಾಣವನ್ನು ಪ್ರೋತ್ಸಾಹಿಸಲು ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸ್ವಯಂ ಸೇವಾ ಸಂಸ್ಥೆ ಏರ್​ಪೋರ್ಟ್ ಯಾತ್ರೆಯನ್ನು ನಡೆಸಿತು.

ಸಿಟಿಜನ್ಸ್ ಫಾರ್ ಸಿಟಿಜನ್ಸ್ (C4C) ಸ್ವಯಂ ಸೇವಾ ಸಂಸ್ಥೆಯ 170 ಜನರು ಏರ್​ಪೋರ್ಟ್ ಯಾತ್ರೆಯಲ್ಲಿ ಭಾಗವಹಿಸಿದ್ದರು. ಸಂಜೆ 4 ಗಂಟೆಗೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಮೆಮು 06538 ರೈಲಿನ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೈಲ್ವೆ ಸ್ಟೇಷನ್ ತಲುಪಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರನ್ನು ಸ್ವಾಗತಿಸಿದರು.

ಕಂಚಿನ ಪ್ರತಿಮೆ ವೀಕ್ಷಣೆ: ಶಟಲ್ ಬಸ್​ನಲ್ಲಿ ಏರ್ ಪೋರ್ಟ್​ಗೆ ಪ್ರಯಾಣಿಸಿದರು. ಟರ್ಮಿನಲ್​ನಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ಪ್ರಯಾಣಿಕರು ಕೆಂಪೇಗೌಡ ಕಂಚಿನ ಪ್ರತಿಮೆ ವೀಕ್ಷಣೆ ಮಾಡಿದರು. ನಂತರ ಮೆಮು 06532 ರೈಲಿನ ಮೂಲಕ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್​ಗೆ ವಾಪಸ್ ಆದರು.

ಮೆಮು ರೈಲುಗಳ ವಿಸ್ತರಣೆ: ಕೇವಲ 30 ರೂಪಾಯಿ ಪ್ರಯಾಣ ದರದಲ್ಲಿ ಏರ್​ಪೋರ್ಟ್ ತಲುಪಬಹುದು ಮತ್ತು ಟ್ರಾಫಿಕ್ ಕಿರಿಕಿರಿ ಇಲ್ಲದ ರೈಲ್ವೆ ಮಾರ್ಗ ಇದಾಗಿದೆ. ಏರ್​ಪೋರ್ಟ್ ಹೋಗುವ ಪ್ರಯಾಣಿಕರಿಗೆ ರೈಲ್ವೆ ಪ್ರಯಾಣ ಬಹಳ ಸಹಕಾರಿಯಾಗಿದೆ. ಇದೇ ಮಾರ್ಗದಲ್ಲಿ ಮತ್ತಷ್ಟು ಮೆಮು ರೈಲುಗಳ ವಿಸ್ತರಣೆ ಸಹ ಆಗಲಿವೆ.

ಓದಿ: ಡಿಜೆ ಬಗ್ಗೆ ಯಾರು ಏನೇ ಹೇಳಿರಲಿ ನಾನು ಪ್ರತಿಕ್ರಿಯೆ ನೀಡಲ್ಲ: ಕೇಂದ್ರ ಸಚಿವ ಪ್ರಹ್ಲಾದ್​ ‌ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.