ETV Bharat / state

ಯಾವುದೇ ಹಣ ಪಡೆಯದೇ ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ಸ್ವಯಂ ಬಂದವರು: ಸಚಿವ ಬಿ ಸಿ ಪಾಟೀಲ್ - ಯಲಹಂಕದಲ್ಲಿ ಕೃಷಿ ಇಲಾಖೆಯ ಪ್ರಗತಿ ಕುರಿತು ಕೃಷಿ ಸಚಿವ ಬಿ ಸಿ ಪಾಟೀಲ್ ಪತ್ರಿಕಾಗೋಷ್ಠಿ

2020-21ರ ಸಾಲಿನಲ್ಲಿ ಸುಮಾರು 256. 77 ಲಕ್ಷ ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಈವರೆಗೂ ಒಟ್ಟು 228.05 ಲಕ್ಷ ತಾಲೂಕುಗಳ ಶೇ.88.81ರಷ್ಟು ಬೆಳೆ ಸಮೀಕ್ಷೆ ಮಾಡಲಾಗಿದೆ. 2020-21ರ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಒಟ್ಟು 12.80 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದಾರೆ..

ಕೃಷಿ ಸಚಿವ ಬಿ ಸಿ ಪಾಟೀಲ್ ಪತ್ರಿಕಾಗೋಷ್ಠಿ
ಕೃಷಿ ಸಚಿವ ಬಿ ಸಿ ಪಾಟೀಲ್ ಪತ್ರಿಕಾಗೋಷ್ಠಿ
author img

By

Published : Oct 4, 2021, 5:40 PM IST

Updated : Oct 4, 2021, 6:39 PM IST

ಯಲಹಂಕ : ಕೃಷಿ ಇಲಾಖೆಗೆ ನಟ ದರ್ಶನ್ ರಾಯಭಾರಿಯಾಗಿರುವ ಬಗ್ಗೆ ಭಿನ್ನಾಭಿಪ್ರಾಯ ಬರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಬಿ ಸಿ ಪಾಟೀಲ್, ಸ್ವಯಂ ದರ್ಶನ್ ಅವರೇ ಕೃಷಿ ಇಲಾಖೆಗೆ ರಾಯಭಾರಿಯಾಗಿ ಬಂದವರು. ಇದಕ್ಕಾಗಿ ಅವರು ಇಲಾಖೆಯಿಂದ ಒಂದುಪೈಸೆ ಹಣ ಸಹ ತಗೊಂಡಿಲ್ಲ ಎಂದರು.

ಕೃಷಿ ಸಚಿವ ಬಿ ಸಿ ಪಾಟೀಲ್ ಪತ್ರಿಕಾಗೋಷ್ಠಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) ಕುವೆಂಪು ಸಂಭಾಗಣದಲ್ಲಿ ನಡೆದ ಕೃಷಿ ಇಲಾಖೆಯ ಪ್ರಗತಿ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿನಿಮಾ ರಂಗದಲ್ಲೂ ಬೇರೆ ರೀತಿಯ ರಾಜಕೀಯ ಇದೆ, ವೈಯಕ್ತಿಕ ಜೀವನವನ್ನ ಸಾರ್ವಜನಿಕ ಜೀವನದಲ್ಲಿ ಪರಿಗಣಿಸಲು ಸಾಧ್ಯವಿಲ್ಲ.

ದರ್ಶನ್​​ಗೆ ಕೋರ್ಟ್‌ನಲ್ಲಿ ಯಾವುದಾದರೂ ಕೇಸ್​​ನಲ್ಲಿ ಶಿಕ್ಷೆಯಾಗಿದೆಯಾ, ಅವರು ಜೈಲಿಗೆ ಹೋಗಿ ಬಂದ್ಮೇಲೆ ಅವರ ಜೀವನ ಬದಲಾಗಿದೆ. ಹಾಗಂತಾ, ನಾನು ಜೈಲಿಗೆ ಹೋಗಿ ಅಂತಾ ಹೇಳ್ತಾ ಇಲ್ಲ. ಅವರ ಸಂಸಾರಿಕ ಜೀವನದ ಬಗ್ಗೆ ಟೀಕೆ ಮಾಡೋದು ಸರಿಯಲ್ಲ, ಈಗ ಹೆಂಡತಿ-ಮಗನ ಜೊತೆ ಚೆನ್ನಾಗಿದ್ದಾರೆ ಎಂದರು.

ಕೃಷಿ ಸಚಿವ ಬಿ ಸಿ ಪಾಟೀಲ್ ಪತ್ರಿಕಾಗೋಷ್ಠಿ

ಜಾಲತಾಣಗಳಲ್ಲಿ ದರ್ಶನ್ ಬಗ್ಗೆ ಸಾಕಷ್ಟು ಒಳ್ಳೆಯ ಅಭಿಪ್ರಾಯ ಬರುತ್ತೆ, ಗಾಡ್ ಫಾದರ್ ಇಲ್ಲದೆ ಬಹಳ ಕಷ್ಟ ಪಟ್ಟು ಬೆಳೆದವರು ದರ್ಶನ್. ಇವತ್ತು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಕರ್ನಾಟಕದ ಮನೆಮತಾಗಿದ್ದಾರೆ. ಕೃಷಿ ಇಲಾಖೆಯ ಬೆಳೆ ಸಮೀಕ್ಷೆಗೆ ದರ್ಶನ್ ಜಾಹೀರಾತು ನೀಡಿದ ನಂತರ ರೈತರು ಖುಷಿಗೊಂಡು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ಸಮೀಕ್ಷೆಯಾಗಿದೆ. ಕೃಷಿ ಇಲಾಖೆಗೆ ರಾಯಭಾರಿಯಾಗಿ ನಟ ದರ್ಶನ್ ಸ್ವಯಂ ಪ್ರೇರಿತರಾಗಿ ಬಂದವರು, ಇಲಾಖೆಯಿಂದ ನಯಾಪೈಸೆ ದುಡ್ಡು ತಗೊಳ್ಳದೆ ರಾಯಾಭಾರಿಯಾಗಿದ್ದಾರೆ ಎಂದರು.

158.73 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ : 2000-21ರ ಸಾಲಿನೊಳಗೆ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ 158.73 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗಿದೆ. ದೇಶದ ಸರಾಸರಿಗೆ ಹೋಲಿಸಿದಾರೆ ಶೇ.2ರಷ್ಟು ರಾಜ್ಯದ ಸರಾಸರಿಗೆ ಹೋಲಿಸಿದರೆ ಶೇ.10ರಷ್ಟು ಹೆಚ್ಚಿನ ಉತ್ಪಾದನೆಯಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್​ ಮಾಹಿತಿ ನೀಡಿದರು.

2021ರ ಮುಂಗಾರು ಹಂಗಾಮಿನಲ್ಲಿ 77.00 ಲಕ್ಷ ಹೆಕ್ಟರ್ ವಿಸ್ತೀರ್ಣದಲ್ಲಿ ಬಿತ್ತನೆ ಗುರಿ ಇತ್ತು. 77.20 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಮಾಡುವ ಮೂಲಕ ಶೇ.100.26ರಷ್ಟು ಸಾಧನೆ ಮಾಡಲಾಗಿದೆ. ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಯೂರಿಯಾ ಸೇರಿ ರಾಜ್ಯದಲ್ಲಿ ಒಟ್ಟು 26,47,000 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದೆ. 35,41.606 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿದೆ. 28,34,226 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

2020-21ರ ಸಾಲಿನಲ್ಲಿ ಸುಮಾರು 256. 77 ಲಕ್ಷ ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಈವರೆಗೂ ಒಟ್ಟು 228.05 ಲಕ್ಷ ತಾಲೂಕುಗಳ ಶೇ.88.81ರಷ್ಟು ಬೆಳೆ ಸಮೀಕ್ಷೆ ಮಾಡಲಾಗಿದೆ. 2020-21ರ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಒಟ್ಟು 12.80 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದಾರೆ ಎಂದರು.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮ : ಸೆಪ್ಟೆಂಬರ್ 5ರಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಜಾರಿಗೆ ತಂದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಈವರೆಗೂ 8,931 ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟ್‌ಗೆ 2.44 ಕೋಟಿ ವಿದ್ಯಾರ್ಥಿ ವೇತನವನ್ನ ಡಿಬಿಟಿ ಮುಖಾಂತರ ವರ್ಗಾಯಿಸಲಾಗಿದೆ.

ಅಕ್ರಮವಾಗಿ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಪೀಡೆನಾಶಕಗಳ ವಿರುದ್ಧ ಕೃಷಿ ಇಲಾಖೆಯ ವಿಚಕ್ಷಣ ದಳ ದಾಳಿ ನಡೆಸಿ 64 ಲಕ್ಷ ಮೌಲ್ಯದ 5,724 ಲೀಟರ್ ಪೀಡನಾಶಕಗಳ ಜಪ್ತಿ ಮಾಡಲಾಗಿದೆ. 2000-21 ಸಾಲಿನಲ್ಲಿ 622.16 ಲಕ್ಷ ಮೌಲ್ಯದ ಬಿತ್ತನೆಬೀಜ, ರಸಗೊಬ್ಬರ ಮತ್ತು ಪೀಡನಾಶಕಗಳನ್ನ ವಿವಿಧ ಜಿಲ್ಲೆಗಳಲ್ಲಿ ಜಪ್ತಿ ಮಾಡಲಾಗಿದೆ. 69 ಮೊಕದ್ದಮೆಗಳನ್ನ ಪ್ರಪ್ರಥಮವಾಗಿ ಕೃಷಿ ಇಲಾಖೆ ಮಾಡಿದೆ ಎಂದು ಮಾಹಿತಿ ನೀಡಿದರು.

Last Updated : Oct 4, 2021, 6:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.