ETV Bharat / state

ಜಪ್ತಿಯಾಗಿದ್ದ ಬಾಲಿವುಡ್​ ಬಿಗ್ ಬಿ ಕಾರು ಬಿಡುಗಡೆ ಮಾಡಿದ ಆರ್​ಟಿಒ

ಅಮಿತಾಬ್ ಬಚ್ಚನ್ ಕಾರು ಖರೀದಿಸಿದ್ದ ಕೋಲಾರದ ಬಾಬು ನೆಲಮಂಗಲದ ಆರ್​ಟಿಒ ಕಚೇರಿಗೆ ಧಾವಿಸಿ ವಾಹನ ತೆರಿಗೆ ಕಟ್ಟಿದ ದಾಖಲಾತಿ ಪತ್ರಗಳು, ಇನ್ಸೂರೆನ್ಸ್ ದಂಡ ಪಾವತಿಸಿ ರೋಲ್ಸ್ ರಾಯ್ ಕಾರನ್ನ ರಿಲೀಸ್ ಮಾಡಿಸಿಕೊಂಡರು.

ಆರ್​ಟಿಒ ಕಚೇರಿಯಿಂದ ಬಾಲಿವುಡ್​ ಬಿಗ್ ಬಿ ಕಾರು ಬಿಡುಗಡೆ

author img

By

Published : Aug 28, 2021, 3:51 PM IST

Updated : Aug 29, 2021, 12:10 PM IST

ನೆಲಮಂಗಲ: ಸೂಕ್ತ ದಾಖಲಾತಿ ಇಲ್ಲದೆ ನಗರದಲ್ಲಿ‌ ಓಡಾಡುತ್ತಿದ್ದ ದುಬಾರಿ ಬೆಲೆಯ ಕಾರುಗಳನ್ನು ಆರ್​ಟಿಒ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದರು. ಈ ವೇಳೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನೋಂದಣಿಯಾಗಿರುವ ರೋಲ್ಸ್ ರಾಯ್ ಕಾರ್ ಸಹ ಸೀಜ್ ಮಾಡಲಾಗಿತ್ತು.

ಆ.22 ರಂದು ಯಲಹಂಕ ಆರ್‌ಟಿಒ ಅಧಿಕಾರಿಗಳು ತೆರಿಗೆ ವಂಚಿತ ವಾಹನಗಳನ್ನ ಸೀಜ್​ ಮಾಡಿದ್ದರು. 2 ವರ್ಷಗಳಿಂದಲೂ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಒಡೆತನದ ರೋಲ್ಸ್ ರಾಯ್ಸ್ ಕಾರು ಬೆಂಗಳೂರಿನಲ್ಲಿ‌ ಓಡಾಡುತ್ತಿತ್ತು. ಆದರೂ ಒಮ್ಮೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿರಲಿಲ್ಲ.

ಉಮ್ರಾ ಡೆವಲಪರ್ಸ್ ಮಾಲೀಕ ಬಾಬು ಎಂಬಾತ ಅಮಿತಾಬ್ ಬಚ್ಚನ್ ರಿಂದ ಈ ಕಾರನ್ನು ಖರೀದಿಸಿದ್ದರು. ಪ್ರಮುಖ ವಿಷಯ ಎಂದರೆ ಈ ರೋಲ್ಸ್ ರಾಯ್ಸ್ ಕಾರು ಇನ್ನೂ ಸಹ ಅಮಿತಾಬ್ ಬಚ್ಚನ್​ ಅವರ ಹೆಸರಿನಲ್ಲೇ ಇತ್ತು ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ.

ಅಮಿತಾಬ್ ಬಚ್ಚನ್ ಕಾರು ಖರೀದಿಸಿದ್ದ ಕೋಲಾರದ ಬಾಬು ನೆಲಮಂಗಲದ ಆರ್​ಟಿಒ ಕಚೇರಿಗೆ ಧಾವಿಸಿ ವಾಹನ ತೆರಿಗೆ ಕಟ್ಟಿದ ದಾಖಲಾತಿ ಪತ್ರಗಳು, ಇನ್ಸೂರೆನ್ಸ್ ದಂಡ ಪಾವತಿಸಿ ರೋಲ್ಸ್ ರಾಯ್ ಕಾರನ್ನ ರಿಲೀಸ್ ಮಾಡಿಸಿಕೊಂಡರು.

ಬಳಿಕ ದಂಡ ಪಾವತಿಸಿಕೊಂಡ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಜಿ.ಎಸ್.ಗುರುಮೂರ್ತಿ ಉದ್ಯಮಿಗೆ ಕಾರನ್ನು ಹಸ್ತಾಂತರಿಸಿದರು. ರೋಲ್ಸ್ ರಾಯ್ ಕಾರು ಅಮಿತಾಬ್​ ಬಚ್ಚನ್ ಹೆಸರಿನಲ್ಲಿ ನೊಂದಣಿಯಾಗಿದ್ದು, ಪ್ರಸ್ತುತ ಎಲ್ಲಾ ದಾಖಲೆಗಳು ಅವರ ಹೆಸರಿನಲ್ಲಿವೆ.

ಜಪ್ತಿಯಾಗಿದ್ದ ಬಾಲಿವುಡ್​ ಬಿಗ್ ಬಿ ಕಾರು ಬಿಡುಗಡೆ ಮಾಡಿದ ಆರ್​ಟಿಒ

ಅಮಿತಾಬ್ ಬಚ್ಚನ್ ಕಾರು ಬಾಬುಗೆ ಬಳಿ ಬಂದಿದ್ದು ಹೇಗೆ?:

2007ರಲ್ಲಿ ಅಮಿತಾಬ್​ ಬಚ್ಚನ್ ನಟಿಸಿದ್ದ ಚಿತ್ರವೊಂದರ ನಿರ್ದೇಶಕ ಮತ್ತು ನಿರ್ಮಾಪಕ ವಿಧುವಿನೋದ್‌ ಚೋಪ್ರಾ ಅವರು ರೋಲ್ಸ್ ರಾಯ್ ಕಾರನ್ನು ಅಮಿತಾಬ್ ಬಚ್ಚನ್​ಗೆ ಉಡುಗೊರೆಯಾಗಿ ನೀಡಿದ್ದರಂತೆ.

ಆ ಕಾರಿಗೆ ಅಮಿತಾಬ್ ಬಚ್ಚನ್ 2007ರ ಮೇ. 29 ರಂದು ₹35,29,555 ರೂಪಾಯಿ ಲೈಫ್ ಟೈಮ್ ತೆರಿಗೆಯನ್ನು ಮುಂಬೈನ ಆರ್​ಟಿಒ ಕಚೇರಿಯೊಂದರಲ್ಲಿ ಪಾವತಿಸಿದ್ದಾರೆ. ಕಾರನ್ನು 2019 ಫೆ.19ರಂದು ಮಾರಾಟ ಮಾಡಲು ಮುಂದಾದಾಗ ಕೋಲಾರ ಜಿಲ್ಲೆ ಕೆಜಿಎಫ್ ಮೂಲದ ಉದ್ಯಮಿ ಡಿ.ಬಾಬು ಎಂಬುವರು ಸುಮಾರು ₹1.31ಕೋಟಿಗೆ ಕಾರನ್ನು ಖರೀದಿಸಿದ್ದರಂತೆ.

ನಟ ಅಮಿತಾಬ್ ಬಚ್ಚನ್‌ನಿಂದ ಕಾರು ಖರೀದಿ ಮಾಡಿ 2 ವರ್ಷಗಳಾದ್ರು, ಕಾರಿನ ಇನ್ಸೂರೆನ್ಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಕಾರನ್ನು ವಶಪಡಿಸಿಕೊಂಡಿದ್ದರು. ಇದ್ದೀಗ ಅಮಿತಾಬ್ ಬಚ್ಚನ್ ಹೆಸರಿನಲ್ಲಿನ ದಾಖಲೆ ಪತ್ರಗಳನ್ನು ನೀಡಿದ್ದು ₹5500 ಸಾವಿರ ದಂಡವನ್ನು ನೆಲಮಂಗಲ ಆರ್‌ಟಿಒ ಕಚೇರಿಯಲ್ಲಿ ಪಾವತಿ ಮಾಡಲಾಗಿದೆ.

ಇದನ್ನೂ ಓದಿ:ಅಮಿತಾಬ್​ ಬಚ್ಚನ್ ಕಾರು ಸೇರಿ ದಾಖಲೆ ಇಲ್ಲದ 10ಕ್ಕೂ ಹೆಚ್ಚು ಐಶಾರಾಮಿ ವಾಹನಗಳ ಜಪ್ತಿ

Last Updated : Aug 29, 2021, 12:10 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.