ETV Bharat / state

ನೆಲಮಂಗಲದಲ್ಲಿ ಆಕಸ್ಮಿಕ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ - ಆಕಸ್ಮಿಕ ಅಗ್ನಿ ಅವಘಡ

ಜಮೀನಲ್ಲಿ ಸಂಗ್ರಹಿಸಿದ ಆಸ್ಪತ್ರೆಯ ತ್ಯಾಜ್ಯ, ಕಾಟನ್ ಬಾಕ್ಸ್​ಗಳಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಸಾರ್ವಜನಿಕರು ಮತ್ತು ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿದೆ.

Accidental fire in Nelamangala
ನೆಲಮಂಗಲದಲ್ಲಿ ಆಕಸ್ಮಿಕ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ
author img

By

Published : Mar 16, 2020, 4:30 PM IST

ನೆಲಮಂಗಲ/ ಬೆಂಗಳೂರು ಗ್ರಾ: ಜಮೀನಲ್ಲಿ ಸಂಗ್ರಹಿಸಿದ ಆಸ್ಪತ್ರೆಯ ತ್ಯಾಜ್ಯ, ಕಾಟನ್ ಬಾಕ್ಸ್​ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸಾರ್ವಜನಿಕರು ಮತ್ತು ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿದೆ.

ನೆಲಮಂಗಲದಲ್ಲಿ ಆಕಸ್ಮಿಕ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ
ನಗರದ ಬಸವನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಲೋಹಿತ್ ನಗರದ ದಿ. ಗಂಗಬೈರಯ್ಯ ಅವರ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ. ಜಮೀನಿನಲ್ಲಿ ಸಂಗ್ರಹವಾಗಿದ್ದ ನಾಲ್ಕೈದು ಲಾರಿಗಳಷ್ಟು ಕಾಟನ್ ಬಾಕ್ಸ್, ಆಸ್ಪತ್ರೆಯ ತ್ಯಾಜ್ಯ, ರಬ್ಬರ್, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವೇಸ್ಟೇಜ್​ಗಳು ಸುಟ್ಟು ಭಸ್ಮವಾಗಿದೆ. ಅವಘಡ ಸಂಭವಿಸಿದ ಅಕ್ಕಪಕ್ಕದಲ್ಲಿ ಮನೆ, ಗ್ಯಾರೇಜ್ ಹಾಗೂ ಗ್ಯಾಸ್ ಸಿಲಿಂಡರ್ ಲಾರಿ ಕೂಡ ಇತ್ತು ಎನ್ನಲಾಗಿದೆ. ಸದ್ಯ ಸಾರ್ವಜನಿಕರ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ದಳದವರ ಕಾರ್ಯ ವೈಖರಿಯಿಂದ ಸಂಭವನೀಯ ಅನಾಹುತ ತಪ್ಪಿದಂತಾಗಿದೆ. ಈಗಾಗಲೇ ತಾಪಮಾನ ಹೆಚ್ಚಾಗುತ್ತಿದ್ದು ಇಂತಹ ಅನಾಹುತಗಳು ಆಗಿಂದಾಗೆ ಸಂಭವಿಸುತ್ತಿರುತ್ತವೆ. ಸಂಬಂಧಪಟ್ಟವರು ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.