ಆನೇಕಲ್: ಕೈ ಕಾಲು ರುಂಡ ಕತ್ತರಿಸಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟದ ಜನತಾ ಕಾಲೊನಿಯಲ್ಲಿ ನಡೆದಿದೆ. ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ವಾಸಿ ಜನತಾ ಕಾಲೊನಿಯ ಗೀತಮ್ಮ(53) ಮೃತ ಮಹಿಳೆಯಾಗಿದ್ದಾಳೆ. ಮನೆ ಸಮೀಪವೇ ಕೈ ಕಾಲು ರುಂಡ ಕತ್ತರಿಸಿ ದೇಹ ಎಸೆದಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಮಹಿಳೆಯ ಹತ್ಯೆ ಮಾಡಿದ್ದು, ನಗ್ನ ಸ್ಥಿತಿಯಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಧಾವಿಸಿದ್ದಾರೆ. ಗೀತಮ್ಮಳ ಮನೆಯಲ್ಲಿ ಬಾಡಿಗೆಗೆ ವಾಸವಿದ್ದವರಿಂದ ಕೊಲೆ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಉತ್ತರ ಭಾರತ ಮೂಲದ ಮೂರ್ನಾಲ್ಕು ಮಂದಿ ಬಾಡಿಗೆಗೆ ವಾಸವಿದ್ದರು. ಮೂರ್ನಾಲ್ಕು ದಿನಗಳಿಂದ ಬಾಡಿಗೆಗೆ ಇದ್ದ ಯುವಕರು ನಾಪತ್ತೆಯಾಗಿದ್ದು, ಇವರೊಂದಿಗೆ ಗೀತಮ್ಮಳು ಕಾಣೆಯಾಗಿದ್ದಳು. ಇಂದು ಶವವಾಗಿ ಮನೆ ಸಮೀಪವೇ ಪತ್ತೆಯಾಗಿರುವುದು ಇಡೀ ಬನ್ನೇರುಘಟ್ಟ ಭೀತಿಯಲ್ಲಿ ಮುಳುಗುವಂತೆ ಮಾಡಿದೆ.
ಇದು ಬೆಂಗಳೂರಿನಲ್ಲಿ ನಡೆದ ಕೊಲೆಯ ಕಥೆಯಾದರೆ, ತೆಲಂಗಾಣ ರಾಜ್ಯದಲ್ಲಿ ಪತ್ನಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದಳೆಂದು ಕೋಪಗೊಂಡ ಪತಿಯೊಬ್ಬ ಆಕೆಯ ಕತ್ತು ಹಿಸುಕಿ ಕೊಂದು ಹಾಕಿರುವ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಭೀಕರ ಹತ್ಯೆ ವಿಚಾರ ಈಗಷ್ಟೇ ಬೆಳಕಿಗೆ ಬಂದಿದೆ. ಮೃತದೇಹದ ಮರಣೋತ್ತರ ವರದಿ ಬಂದ ನಂತರದ ಬೆಳವಣಿಯಲ್ಲಿ ಈ ಪ್ರಕರಣದ ಒಂದೊಂದೆ ಅಘಾತಕಾರಿ ಸುದ್ದಿಗಳು ಬಯಲಾಗುತ್ತಿವೆ. ಅಂದ ಹಾಗೆ ಈ ಕೊಲೆ ನಡೆದಿದ್ದು, ಕಳೆದ ತಿಂಗಳು ಮೇ 20 ರಂದು ಅಂದರೆ ಈಗ್ಗೆ 10-11 ದಿನಗಳ ಹಿಂದೆ. ಈ ಪ್ರಕರಣ ಕಂಡು ಹಿಡಿಯಲು ಪೊಲೀಸರು ಬರೋಬ್ಬರಿ 10 ದಿನಗಳನ್ನ ತೆಗೆದುಕೊಂಡಿದ್ದಾರೆ.
ಏನಿದು ಪ್ರಕರಣ?: ಆರೋಪಿ ಜಟಾವತ್ ತರುಣ್ (24) ಎಂಬವವನು ತನ್ನ ಪತ್ನಿ ಝಾನ್ಸಿ (20) ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಹೆಂಡತಿಯನ್ನು ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ. ಈ ತಪ್ಪನ್ನು ಆತ ಪೊಲೀಸರ ಮುಂದೆಯೂ ಒಪ್ಪಿಕೊಂಡಿದ್ದಾನೆ. ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯವರಾದ ಈ ದಂಪತಿ 2021 ರಲ್ಲಿ ಲವ್ ಮ್ಯಾರೇಜ್ ಆಗಿದ್ದರು. ಪತಿ ತರುಣ್ ಆಟೋ ರಿಕ್ಷಾ ಚಾಲಕನಾಗಿದ್ದ. ಹೀಗಾಗಿ ಆತ ಜೀವನ ನಡೆಸಲು ಹೈದರಾಬಾದ್ಗೆ ಬಂದು ನೆಲಸಿದ್ದ. ಐಎಸ್ ಸದನ್ ವಿಭಾಗದ ಖಾಜಾ ಬಾಗ್‌ನಲ್ಲಿ ವಾಸವಾಗಿತ್ತು. ಇಬ್ಬರು ಸಂತಸದಿಂದಲೇ ಬದುಕು ನಿರ್ವಹಣೆ ಮಾಡುತ್ತಿದ್ದರು. ಈ ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಏಪ್ರಿಲ್ 16 ರಂದು ಝಾನ್ಸಿ ಹೆಣ್ಣು ಮಗುವಿಗೂ ಜನ್ಮ ನೀಡಿದ್ದರು.
ಮೇ 20 ರ ರಾತ್ರಿ ತರುಣ್ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆಯ ಬಯಕೆ ವ್ಯಕ್ತಪಡಿಸಿದ್ದಾನೆ. ಇದಕ್ಕೆ ಪತ್ನಿ ತನಗೆ ತುಂಬಾ ಸುಸ್ತಾಗಿದೆ ಎಂದು ತಿಳಿಸಿದ್ದಾಳೆ. ಹೀಗಿದ್ದರೂ ಪತ್ನಿಯನ್ನು ಒತ್ತಾಯಿಸಿದ್ದಾನೆ. ಅವಳು ನಿರಾಕಿರಿಸಿದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ: ಬಳಲಿದ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಪೀಡಿಸಿ ಉಸಿರುಗಟ್ಟಿಸಿ ಕೊಂದ ಪತಿ! 2 ವರ್ಷದ ಮಗ, 1 ತಿಂಗಳ ಮಗಳು ಅನಾಥ!