ETV Bharat / state

ಕಲ್ಯಾಣಿಗೆ ತಡೆಗೋಡೆ ನಿರ್ಮಾಣ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು - A labor deaths by Soil collapse

ದೇವನಹಳ್ಳಿ ತಾಲೂಕಿನ ದಿನ್ನೂರು ಗ್ರಾಮದಲ್ಲಿ ಕಲ್ಯಾಣಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕನೋರ್ವ ಸಾವನ್ನಪ್ಪಿದ್ದಾನೆ.

labor death
ಮಣ್ಣು ಕುಸಿದು ಕಾರ್ಮಿಕ ಸಾವು
author img

By

Published : Aug 2, 2021, 7:16 AM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕಲ್ಯಾಣಿಗೆ ತಡೆಗೋಡೆ ನಿರ್ಮಾಣದ ವೇಳೆ ಮಣ್ಣು ಕುಸಿದು ಕಾರ್ಮಿಕ ಮೃತಪಟ್ಟಿರುವ ಘಟನೆ ದೇವನಹಳ್ಳಿ ತಾಲೂಕಿನ ದಿನ್ನೂರು ಗ್ರಾಮದಲ್ಲಿ ನಡೆದಿದೆ.

ಶ್ರೀನಿವಾಸಪುರ ಮೂಲದ ಆಂಜಿನಪ್ಪ (40) ಮೃತ ಕಾರ್ಮಿಕ. ಮಳೆಗಾಲವಾಗಿದ್ದರಿಂದ ನಿರ್ಮಾಣ ಹಂತದ ಕಲ್ಯಾಣಿ ಅಂಚಿನಲ್ಲಿ ಮಣ್ಣು ಕುಸಿಯುತ್ತಿತ್ತು. ಹೀಗಿದ್ದರೂ ಕೂಡ ಕಾಮಗಾರಿ ಮುಗಿಸುವ ತರಾತುರಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮುನಿಕೃಷ್ಣ ಹಾಗೂ ಗುತ್ತಿಗೆದಾರ ಕೆಲಸ ಮುಂದುವರೆಸಿದ್ದರು. ಇವರ ನಿರ್ಲಕ್ಷ್ಯದಿಂದಲೇ ಕಾರ್ಮಿಕ ಮೃತಪಟ್ಟಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಆರ್ಥಿಕ ಸಂಕಷ್ಟ... ಬದ್ಧ ವೆಚ್ಚ ಕಡಿತಕ್ಕೆ ಮುಂದಾದ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.