ETV Bharat / state

ಹನಿಟ್ರ್ಯಾಪ್ ಮೂಲಕ ದರೋಡೆ ಪ್ಲಾನ್ ಮಾಡುತ್ತಿದ್ದ ಖತರ್ನಾಕ್​​ ಗ್ಯಾಂಗ್​ ಬಂಧನ

ಮಹಿಳೆಯೋರ್ವಳ ಫೋನ್​ ಕರೆ ನಂಬಿಕೊಂಡು ಆಕೆಯ ಹಿಂದೆ ಹೋಗಿದ್ದ ಯುವಕನಿಗೆ ಗ್ಯಾಂಗ್​​​ವೊಂದು ಥಳಿಸಿ ಚಿನ್ನ, ಹಣ ಹಾಗೂ ಕಾರು ಎಗರಿಸಿದ್ದರು. ಇದೀಗ ಆನೇಕಲ್ ಪೊಲೀಸರು ಈ ಗ್ಯಾಂಗ್​​ ಅನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

a gang arrested by anneal police those who make robbery by using woman
ಮಹಿಳೆ ಮೂಲಕ ದರೋಡೆ ಪ್ಲಾನ್ ಮಾಡುತ್ತಿದ್ದ ಖತರ್ನಾಕ್​​ ಗ್ಯಾಂಗ್​ ಬಂಧನ
author img

By

Published : Jul 17, 2020, 10:59 PM IST

ಆನೇಕಲ್ (ಬೆಂ.ಗ್ರಾ): ಮಹಿಳೆಯೋರ್ವಳ ಕರೆಗೆ ದೌಡಾಯಿಸಿದ ಯುವಕನನ್ನು ವಂಚಕರ ಗ್ಯಾಂಗ್ ಥಳಿಸಿ ಕಟ್ಟಿ ಹಾಕಿ ಕಾರು, ಕತ್ತಿನ ಸರದೊಂದಿಗೆ ಪರಾರಿಯಾಗಿದ್ದ ಘಟನೆಯನ್ನು ಆನೇಕಲ್ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವಾರ ಆನೇಕಲ್-ಅತ್ತಿಬೆಲೆ ರಸ್ತೆಯ ಹಾಲ್ದೇನಹಳ್ಳಿ ಸೀನಪ್ಪನ ಮಗ ಕಿರಣ್​​​​​ಗೆ ಅನಾಮಿಕ ಕೆರೆ ಬಂದಿತ್ತು. ಅಲ್ಲದೆ ನಾನೀಗಲೇ ನಿನ್ನ ನೋಡಬೇಕು ಎಂದು ಮಹಿಳೆ ಮೆಲು ಧ್ವನಿಯಲ್ಲಿ ಮಾತನಾಡಿದ್ದಾಳೆ.

ಮಹಿಳೆ ಮೂಲಕ ದರೋಡೆ ಪ್ಲಾನ್ ಮಾಡುತ್ತಿದ್ದ ಖತರ್ನಾಕ್​​ ಗ್ಯಾಂಗ್​ ಬಂಧನ

ಈ ಹಿನ್ನೆಲೆ ಮಹಿಳೆಯನ್ನು ಭೇಟಿಯಾಗಲು ತೆರಳಿದಾಗ 5 ಜನರಿದ್ದ ಗ್ಯಾಂಗ್​ ಕಿರಣ್​ ಮೇಲೆ ದಾಳಿ ನಡೆಸಿದೆ. ಅಲ್ಲದೆ ಕಟ್ಟಿಹಾಕಿ ಚಿನ್ನದ ಸರ, ಕಾರು ಹಾಗೂ ಹಣದೊಂದಿಗೆ ಪರಾರಿಯಾಗಿದೆ. ಬಳಿಕ ಕಿರಣ್​ ಆನೇಕಲ್​​ ಪೊಲೀಸ್​ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.

ಅಲ್ಲಿಂದ ಆರೋಪಿಗಳ ಬೆನ್ನತ್ತಿದ ಪೊಲೀಸರು ಬೆಂಗಳೂರಿನ ಜಯನಗರದ ಮನೆ ಕೆಲಸದಾಕೆ ಅಣ್ಣಮ್ಮ, ಕಿರಣ್ ಮನೆಯ ಹತ್ತಿರದ ಹಾಲ್ದೇನಹಳ್ಳಿಯ ಮುನೇಂದ್ರ, ನಾಗೇಶ, ಕೆಂಗೇರಿ ಬಳಿಯ ರಾಮೋಹಳ್ಳಿಯ ನವೀನ್, ಶಶಾಂಕ್ ಮತ್ತು ಮಹೇಂದ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅವರನ್ನು ನಗರದಲ್ಲಿ ಮೆರವಣಿಗೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.