ETV Bharat / state

260 ಕುಟುಂಬ ತೆರವುಗೊಳಿಸುವ ವಿಚಾರ: ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್​ನಿಂದ ತಡೆಯಾಜ್ಞೆ - ಕಾರ್ಯನಿರ್ವಾಹಕ ಅಭಿಯಂತರ

ತುಬರಹಳ್ಳಿ ಗ್ರಾಮದ ಕುಂದಲಹಳ್ಳಿ ಗೇಟ್ ಹಿಂಭಾಗದ ಜಮೀನಿನಲ್ಲಿ ವಾಸವಾಗಿರುವ ಪಶ್ಚಿಮ ಬಂಗಾಳ, ಅಸ್ಸಾಂ, ಪಂಜಾಬ್ ಹಾಗೂ ಹರಿಯಾಣದ ಸುಮಾರು 260 ಕುಟುಂಬಗಳನ್ನು ತೆರವುಗೊಳಿಸುವ ಸಂಬಂಧ ವಿಚಾರಣೆ ಕುರಿತು ಫೆ.19 ರಂದು ಬಿಬಿಎಂಪಿ ಜಾರಿಗೊಳಿಸಿದ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

260 ಕುಟುಂಬ ತೆರವುಗೊಳಿಸುವ ವಿಚಾರ ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್​ನಿಂದ ತಡೆಯಾಜ್ಞೆ
author img

By

Published : Feb 23, 2019, 9:42 AM IST

ಬೆಂಗಳೂರು: ನಗರದ ವರ್ತೂರು ಹೋಬಳಿ ವ್ಯಾಪ್ತಿಯ ತುಬರಹಳ್ಳಿ ಗ್ರಾಮದ ಕುಂದಲಹಳ್ಳಿ ಗೇಟ್ ಹಿಂಭಾಗದ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ಪಶ್ಚಿಮ ಬಂಗಾಳ, ಅಸ್ಸಾಂ, ಪಂಜಾಬ್ ಹಾಗೂ ಹರಿಯಾಣದ ಸುಮಾರು 260 ಕುಟುಂಬಗಳನ್ನು ತೆರವುಗೊಳಿಸುವ ಸಂಬಂಧ ಫೆ.19 ರಂದು ಬಿಬಿಎಂಪಿ ಜಾರಿಗೊಳಿಸಿದ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಕುರಿತು ಜಮೀನು ಮಾಲೀಕರಾದ ಎಂ.ನಾರಾಯಣರೆಡ್ಡಿ, ಬಿ. ಮುನಿಯಪ್ಪ ಹಾಗೂ ತಾತ್ಕಾಲಿಕ ಜೋಪಡಿಗಳಲ್ಲಿ ವಾಸ ಮಾಡುತ್ತಿರುವ ಪಶ್ಚಿಮ ಬಂಗಾಳ ಮೂಲದ ಲೈತು ಹಾಗೂ ಮಾಸೂದ ಬೀಬಿ ಸೇರಿದಂತೆ 83 ಜನ ಸಲ್ಲಿಸಿದ ಅರ್ಜಿ ವಿಚಾರಣೆಯು ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಬಿಬಿಎಂಪಿ ನೋಟಿಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಅರ್ಜಿ ಸಂಬಂಧ ಬಿಬಿಎಂಪಿಗೆ ತುರ್ತು ನೋಟಿಸ್ ಜಾರಿ ಮಾಡಿತು.

ಏನಿದು ಘಟನೆ?

ಈ ಕುಟುಂಬಗಳು ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಅವರು ವಾಸವಿರುವ ಪ್ರದೇಶದಲ್ಲಿ ಸ್ವಚ್ಛತೆ ಕಾಯ್ದುಕೊಂಡಿಲ್ಲ ಎಂಬ ಕಾರಣ ನೀಡಿ 2019ರ ಫೆ.19 ರಂದು ಬಿಬಿಎಂಪಿ ಉಪ ವಲಯದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನೋಟಿಸ್ ಜಾರಿಗೊಳಿಸಿ, ಮೂರು ದಿನಗಳಲ್ಲಿ ಜಾಗ ತೆರವುಗೊಳಿಸುವಂತೆ ಸೂಚಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು ಮತ್ತು ಜಮೀನು ಮಾಲೀಕರ ಪರ ವಕೀಲರು, ಅರ್ಜಿದಾರರು ಕಳೆದ 10-20 ವರ್ಷಗಳಿಂದ ಇದೇ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಅವರೆಲ್ಲರ ಬಳಿ ಮತದಾರರ ಗುರುತಿನ ಚೀಟಿ ದಾಖಲೆಗಳಿವೆ. ಹಾಗಾಗಿ ಬಿಬಿಎಂಪಿಯ ಈ ಕ್ರಮ ಕಾನೂನು ಬಾಹಿರವಾಗಿದೆ. ಆದ್ದರಿಂದ ಬಿಬಿಎಂಪಿ ಜಾರಿಗೊಳಿಸಿರುವ ನೋಟಿಸ್ ರದ್ದುಗೊಳಿಸಬೇಕು ಮತ್ತು ಅರ್ಜಿ ಇತ್ಯರ್ಥಗೊಳ್ಳುವವರೆಗೆ ತೆರವು ಕಾರ್ಯಾಚರಣೆ ನಡೆಸದಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಿದ್ದರು.

undefined

Intro:Body:

BNG_Higcourt

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.