ETV Bharat / state

ಮರದ ತ್ರಿಶೂಲ ದೀಕ್ಷೆ, ಏರ್ ಗನ್  ತರಬೇತಿ ದೇಶದ್ರೋಹ ಅಲ್ಲ: ಮುತಾಲಿಕ್ - ಪೊನ್ನಂಪೇಟೆಯ ಶಿಬಿರದ ವಿಚಾರವಾಗಿ ಮಾತನಾಡಿದ ಮುತಾಲಿಕ್​

ಪೊನ್ನಂಪೇಟೆಯಲ್ಲಿ ಬಜರಂಗದಳದವರು ಕ್ಯಾಂಪ್​ನಲ್ಲಿ 5 ಇಂಚಿನ ಮರದ ತ್ರಿಶೂಲ ದೀಕ್ಷೆ, ಏರ್ ಗನ್ ಬಳಕೆ ಮಾಡಿರುವುದು ಕಾನೂನು ಬಾಹಿರ ಅಲ್ಲ. ಕಾನೂನು ಬದ್ಧವಾಗಿ ಯುವಕರಲ್ಲಿ ದೇಶಭಕ್ತಿ ತುಂಬುತ್ತಿದ್ದೇವೆ. ಮಿಲಿಟರಿ ಸೇರುವ ಯುವಕರಿಗೆ ಈ ರೀತಿಯ ತರಬೇತಿ ಕೊಟ್ಟರೆ ಸುಲಭವಾಗಿ ಸೆಲೆಕ್ಟ್ ಆಗ್ತಾರೆ ಎಂದು ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.

Statement by Pramod Muthalik at Bagalkot
ಶ್ರೀರಾಮ ಸೇನೆ ಮುಖಂಡ ಪ್ರಮೋದ್​ ಮುತಾಲಿಕ್​
author img

By

Published : May 16, 2022, 8:19 PM IST

Updated : May 16, 2022, 10:55 PM IST

ಬಾಗಲಕೋಟೆ: ಮಡಿಕೇರಿಯ ಪೊನ್ನಂಪೇಟೆಯಲ್ಲಿ ಬಜರಂಗದಳದವರು ಕ್ಯಾಂಪ್​ನಲ್ಲಿ 5 ಇಂಚಿನ ಮರದ ತ್ರಿಶೂಲ ದೀಕ್ಷೆ, ಏರ್ ಗನ್ ಸಹ ಬಳಕೆ ಮಾಡಿದ್ದಾರೆ. ಇದೇನು ಕಾನೂನು ಬಾಹಿರ ಅಲ್ಲ. ಯುವಕರಲ್ಲಿ ಧೈರ್ಯ- ಸ್ಥೈರ್ಯ ತುಂಬುವುದಕ್ಕಾಗಿ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.

ಶ್ರೀರಾಮ ಸೇನೆ ಮುಖಂಡ ಪ್ರಮೋದ್​ ಮುತಾಲಿಕ್​

ಹೀಗೆ ಮಾಡುತ್ತಿರುವುದು ಹೊಸದೇನಲ್ಲ. ಈ ಹಿಂದೆ ಬಜರಂಗದಳ ಇದ್ದಾಗಲೂ ಮಾಡಿದ್ದೇವೆ. ಇದೇನು ಕಾನೂನು ಬಾಹಿರ, ದೇಶದ್ರೋಹ ಅಲ್ಲ. ಕಾನೂನು ಬದ್ಧವಾಗಿ ಯುವಕರಲ್ಲಿ ದೇಶಭಕ್ತಿ ತುಂಬುತ್ತಿದ್ದೇವೆ. ಮಿಲಿಟರಿ ಸೇರುವ ಯುವಕರಿಗೆ ಈ ರೀತಿಯ ತರಬೇತಿ ಕೊಟ್ಟರೆ ಸುಲಭವಾಗಿ ಆಯ್ಕೆ ಆಗ್ತಾರೆ ಎಂದು‌ ಹೇಳುವ ಮೂಲಕ ಮುತಾಲಿಕ್​ ಮಡಿಕೇರಿ ತ್ರಿಶೂಲ ದೀಕ್ಷೆಯನ್ನು ಬೆಂಬಲಿಸಿದರು.

ಇದನ್ನೂ ಓದಿ: ರಾಷ್ಟ್ರಗೀತೆ ಹಾಡೋದನ್ನು ಪ್ರಮೋದ್ ಮುತಾಲಿಕ್​​ನಿಂದ ಕಲಿಬೇಕಿಲ್ಲ: ಜಮೀರ್ ತಿರುಗೇಟು

ಆಪಾದನೆ ಮಾಡುತ್ತಿರೋ PFI & SDPI ಅವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ನೀವೆಲ್ಲ ಭಯೋತ್ಪಾದಕರಿದ್ದೀರಿ, ದೇಶದ್ರೋಹಿಗಳಿದ್ದೀರಿ. ಒಂದು ವಾರದ ಹಿಂದೆಯಷ್ಟೇ ಕೇರಳ ಹೈಕೋರ್ಟ್​ ಚೀ ಥೂ ಅಂತ ಛೀಮಾರಿ ಹಾಕಿದೆ. ನೀವೆಲ್ಲ ನಮಗೆ ಉಪದೇಶ ಮಾಡುವ ಅಗತ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Last Updated : May 16, 2022, 10:55 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.