ಬಾಗಲಕೋಟೆ: ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ವಿಶೇಷ ತಹಶೀಲ್ದಾರ್ ಎಸ್.ಬಿ. ಕಾಂಬಳೆ ಅವರಿಗೆ ಬನಹಟ್ಟಿ ಹಿರಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ವಡಿಗೇರಿ ಅವರು 3 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ನಾವಲಗಿ ಗ್ರಾಮದ ಅಣ್ಣಪ್ಪ ಹಣಮಂತ ಮಾಂಗ ಹಾಗು ಇತರರು ಸೇರಿ ನ್ಯಾಯಾಲಯದ ನಿಂದನೆ ಪ್ರಕರಣವನ್ನು ಜಮಖಂಡಿಯಲ್ಲಿ ದಾಖಲಿಸಿದ್ದರು. ನಂತರದ ದಿನಗಳಲ್ಲಿ ಬನಹಟ್ಟಿಯಲ್ಲಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯ ಸ್ಥಾಪನೆಗೊಂಡ ಕಾರಣ ಪ್ರಕರಣ ವರ್ಗಾವಣೆಗೊಂಡಿತ್ತು. ಹಣಮಂತ ಮಾಂಗ ಎಂಬುವರು ಕಂದಾಯ ನಿರೀಕ್ಷಕರಿಗೆ ಅರ್ಜಿ ನೀಡದೇ ಹಕ್ಕು ಬದಲಾವಣೆ ಮಾಡಿದ್ದರಿಂದ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಬನಹಟ್ಟಿ ನ್ಯಾಯಾಲಯ ಮತ್ತು ರಜಾ ಕಾಲದ ಜಿಲ್ಲಾ ನ್ಯಾಯಾಲಯಗಳು ಎರಡು ಬಾರಿ ಸ್ಟೇ ಆದೇಶ ಮಾಡಿತ್ತು. ಈ ಕುರಿತು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ತಿಳಿವಳಿಕೆ ಪತ್ರ ನೀಡಿದ್ದರೂ ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಳ್ಳದೇ ಉತಾರೆಯಲ್ಲಿ ಬದಲಾವಣೆ ಮಾಡಿದ್ದರು ಎನ್ನಲಾಗಿದೆ. ಪ್ರಕರಣದಲ್ಲಿ ಫಿರ್ಯಾಧಿ ಪರ ಹಿರಿಯ ನ್ಯಾಯವಾದಿ ಈಶ್ವರಚಂದ್ರ ಭೂತಿ ಹಾಗೂ ಬಸವರಾಜ ಭೂತಿ ವಾದ ಮಂಡನೆ ಮಾಡಿದ್ರು.
ಇದನ್ನೂ ಓದಿ: ದೊಡ್ಮನೆಯವರ ಆಸ್ತಿಯನ್ನು ನಟ ದರ್ಶನ್ಗೆ ಕೊಡಲಿಲ್ಲ: ಉಮಾಪತಿ ಸ್ಪಷ್ಟನೆ