ಬಾಗಲಕೋಟೆ: ವಟ ಸಾವತ್ರಿ ವ್ರತದ ಅಂಗವಾಗಿ ನಗರದ ವೆಂಕಟೇಶ್ವರ ದೇವಾಲಯದಲ್ಲಿರುವ ಆಲದ ಮರಕ್ಕೆ ಸ್ಥಳೀಯ ಮಹಿಳೆಯರು ದಾರ ಸುತ್ತಿ ವಿಶೇಷ ಪೂಜೆ ನೆರವೇರಿಸಿದರು.
ಪ್ರತಿ ವರ್ಷ ಕಾರ ಹುಣ್ಣಿಮೆ ದಿನದಂದು ನಡೆಯುವ ವಟ ಸಾವಿತ್ರಿ ದಿನದ ಅಂಗವಾಗಿ ಮುತ್ತೈದೆಯರು ತಮ್ಮ ಪತಿಯ ಆರೋಗ್ಯ, ಆಯಸ್ಸು ಹೆಚ್ಚಾಗಲಿ ಎಂದು ವಟ ಸಾವಿತ್ರಿ ವ್ರತ ಆಚರಣೆ ಮಾಡುತ್ತಾರೆ. ವೆಂಕಟೇಶ್ವರ ದೇವಾಲಯದಲ್ಲಿ ಹುಣ್ಣಿಮೆಯ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರ ಸಹ ನಡೆಯಲಿದೆ. ನಂತರ ವಿವಿಧ ಪ್ರದೇಶಗಳಿಂದ ಆಗಮಿಸಿದ ಮಹಿಳೆಯರು, ಆಲದ ಮರಕ್ಕೆ ದಾರವನ್ನು ಹನ್ನೊಂದು ಬಾರಿ ಸುತ್ತುತ್ತಾರೆ.
ಸಿಹಿ ಖ್ಯಾದ ತಯಾರಿಸಿ ಉಡಿ ತುಂಬಿ ವಿಶೇಷ ಪೂಜೆ ಮಾಡಿ ಸುಖ ಶಾಂತಿ ನೀಡುವಂತೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸತಿ ಸಾವಿತ್ರಿಯು ಇಂತಹ ಪೂಜೆ ಮಾಡಿ ತನ್ನ ಪತಿಯನ್ನು ಉಳಿಸಿಕೊಂಡಿದ್ದಳು ಎಂಬ ಪ್ರತೀತಿ ಇದೆ.