ETV Bharat / state

ವಿಶ್ವವಿದ್ಯಾಲಯಗಳು ಯಾವುದೇ ಪಕ್ಷದ ಸ್ವತ್ತಲ್ಲ: ಡಾ. ಮಲ್ಲಿಕಾ ಘಂಟಿ

ವಿಶ್ವವಿದ್ಯಾಲಯಗಳು ಯಾವ ಪಕ್ಷದವರ ಸ್ವತ್ತು ಅಲ್ಲ, ಸ್ವತಂತ್ರವಾದ ಅಸ್ತಿತ್ವ ಇರುವ ಸಂಸ್ಥೆಗಳು. ಒಂದು ಚೌಕಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು.

Universities is not party property: dr. mallika ghanti
ವಿಶ್ವವಿದ್ಯಾಲಯಗಳು ಯಾವುದೇ ಪಕ್ಷದ ಸ್ವತ್ತಲ್ಲ: ಡಾ. ಮಲ್ಲಿಕಾ ಘಂಟಿ
author img

By

Published : Mar 16, 2021, 4:22 PM IST

ಬಾಗಲಕೋಟೆ: ಯಾವುದೇ ವಿಶ್ವವಿದ್ಯಾಲಯಗಳು ಯಾವುದೇ ಪಾರ್ಟಿಯ ಸ್ವತ್ತಲ್ಲ ಎಂದು ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು.

ಶಿರೂರು ಗ್ರಾಮದಲ್ಲಿ ನಡೆದ ಜಿಲ್ಲಾ ಮಟ್ಟದ 9ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಕೆಲಮೊಮ್ಮೆ ರಾಜಕೀಯವಾಗಿ ತೊಂದರೆ ಅನುಭವಿಸಿದ್ದೇನೆ ಎಂದರು. ಹಂಪಿ ವಿಶ್ವವಿದ್ಯಾಲಯ ಕುಲಪತಿ ಇದ್ದಾಗ ತ್ರಿಪುರ ರಾಜ್ಯದ ಮುಖ್ಯಮಂತ್ರಿಗಳಾದ ಮಾಣಿಕ್​​​ ಅವರನ್ನು ವಿಶ್ವವಿದ್ಯಾಲಯಕ್ಕೆ ನನ್ನ ಅನುಮತಿ ಇಲ್ಲದೆ ಹಿರಿಯ ಉಪನ್ಯಾಸಕರು ಕರೆಯಿಸಿದ್ದರು. ಆಗ ಬೇಡ ಎನ್ನುವ ಸ್ಥಿತಿಯಲ್ಲಿ ಇರಲಿಲ್ಲ. ಈ ಬಗ್ಗೆ ರಾಜ್ಯಪಾಲರ ಅನುಮತಿ ಪಡೆಯಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಆಗ ಸರ್ಕಾರದಿಂದ ನನಗೆ ಮೆಮೊ ಜಾರಿ ಮಾಡಿದರು.

ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ

ನನಗೆ ಅಧಿಕಾರ ನೀಡಿರುವವರು ಎಡ ಪಂಥೀಯರಾಗಿದ್ದರೂ ಸಹ ಬಲಪಂಥೀಯ ಆಡಳಿತದ ಅನುಗುಣವಾಗಿ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ವಿಶ್ವವಿದ್ಯಾಲಯಗಳು ಯಾವ ಪಕ್ಷದವರ ಸ್ವತ್ತು ಅಲ್ಲ, ಸ್ವತಂತ್ರವಾದ ಅಸ್ತಿತ್ವ ಇರುವ ಸಂಸ್ಥೆಗಳಾಗಿವೆ. ಒಂದು ಚೌಕಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.

ಇದನ್ನೂ ಓದಿ: ಅಕ್ಷರ ಜ್ಞಾನ ಇಲ್ಲದಿದ್ದರೂ ಜಾನಪದ ಸಾಹಿತ್ಯದಲ್ಲಿ ಸಿದ್ದಪ್ಪ ಬಿದರಿ ಮೇರು ಸಾಧನೆ

ಆ ಸಮಯದಲ್ಲಿ ಕೆಲವರು ನನ್ನ ವಿರುದ್ಧ ಏನೆನೋ ಕಲ್ಪನೆ ಕಟ್ಟಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮಲ್ಲಿಕಾ ಘಂಟಿ ಅವರಿಗೆ ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ಮಾಡುತ್ತಾರೆ ಎಂದು ಹೇಳಿದರು. ಆದರೆ ರಾಜ್ಯಪಾಲರು ಆಗಬೇಕೆಂದರೆ ಅದಕ್ಕೆ ಅದರದ್ದೇ ಆದ ಯೋಗ್ಯತೆ, ಅರ್ಹತೆ ಇರುವುದಿಲ್ಲವೇ? ಅದು ಬಿಜೆಪಿ ಮಾಡಬೇಕೆ? ಆಡಳಿತದಲ್ಲಿ ಬಿಜೆಪಿ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷದವರು ಎಷ್ಟು ದಿನ ಇರುತ್ತಾರೆ. ಇದರ ಮಧ್ಯೆ ಎಲ್ಲರೂ ಪರಸ್ಪರ ಮಾತನಾಡುವಷ್ಟು ಸೌಜನ್ಯತೆ ಇರದಿದ್ದರೆ ಮನುಷ್ಯ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯವೇ? ಎಂದು ಅಸಮಾಧಾನ ಹೊರಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.