ETV Bharat / state

ಸಂಧಾನದಿಂದಲೇ ರಾಮಮಂದಿರ ವಿವಾದ ಇತ್ಯರ್ಥವಾದ್ರೆ ಒಳ್ಳೇಯದು.. ಪೇಜಾವರ ಶ್ರೀಗಳು - ರಾಮಮಂದಿರ ತೀರ್ಪು ಕುರಿತು ಉಡುಪಿ ಪೇಜಾವರ ಶ್ರೀಗಳ ಪ್ರತಿಕ್ರಿಯೆ

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ಮಸೀದಿಯನ್ನ ಎಲ್ಲಿಯಾದರೂ ಮಾಡಬಹುದು. ಜನ್ಮಭೂಮಿಯನ್ನ ಬದಲಾಯಿಸಲು ಆಗಲ್ಲ. ಮುಸ್ಲಿಂ ಸಮುದಾಯದ ಕೆಲವರು ಸಂಧಾನಕ್ಕೆ ಒಪ್ಪಿಗೆ ಇಲ್ಲ ಅಂತಾ ಹೇಳಿದ್ದಾರೆ. ಸಂಧಾನದಿಂದಲೇ ಸಮಸ್ಯೆ ಸರಿಯಾದರೆ ಒಳ್ಳೇಯದು ಅಂತಾ ತಿಳಿಸಿದರು.

ಉಡುಪಿ ಶ್ರೀ ಕೃಷ್ಣ ಮಠದ ಪೇಜಾವರ ಸ್ವಾಮೀಜಿ
author img

By

Published : Oct 20, 2019, 6:17 PM IST

ಬಾಗಲಕೋಟೆ: ರಾಮಮಂದಿರ ತೀರ್ಪಿಗೆ ಕಾಯುತ್ತಿದ್ದೇವೆ. ಶ್ರೀ ರವಿಶಂಕರ್ ಗುರೂಜಿಯವರ ಕರೆ ಬಂದಿತ್ತು. ಸಂಧಾನ ಯಶಸ್ವಿಯಾಗಿದೆ ಅಂತಾ ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಕೆಲವರು ಸಂಧಾನಕ್ಕೆ ಒಪ್ಪಿಗೆ ಇಲ್ಲ ಅಂತಾ ಹೇಳಿದ್ದಾರೆ. ಸಂಧಾನದಿಂದಲೇ ಸಮಸ್ಯೆ ಸರಿಯಾದರೆ ಒಳಿತು ಎಂದು ಉಡುಪಿ ಶ್ರೀ ಕೃಷ್ಣ ಮಠದ ಪೇಜಾವರ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀ ಕೃಷ್ಣ ಮಠದ ಪೇಜಾವರ ಸ್ವಾಮೀಜಿ..

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ಮಸೀದಿಯನ್ನ ಎಲ್ಲಿಯಾದರೂ ಮಾಡಬಹುದು, ಜನ್ಮಭೂಮಿಯನ್ನ ಬದಲಾಯಿಸಲು ಆಗಲ್ಲ. ಕೆಲ ಮುಸ್ಲಿಂ ಮುಖಂಡರು ಸಂಧಾನಕ್ಕೆ ಒಪ್ಪಿಗೆಯಿಲ್ಲ ಅಂದಿದ್ದು, ಗೊಂದಲವಾಗಿದೆ. ಹೀಗಾಗಿ ಸುಪ್ರೀಂ ತೀರ್ಪಿಗಾಗಿ ಕಾಯುತ್ತಿದ್ದೇವೆ. ಕೋರ್ಟ್ ಹೊರಗೆ ಸಂಧಾನದಿಂದ ಸಮಸ್ಯೆ ಸರಿಯಾಗೋದೆ ನಮಗೆ ಇಷ್ಟ, ಇದರಿಂದ ಭಾವೈಕ್ಯತೆ ಬೆಳೆಯುತ್ತದೆ ಎಂದರು.

ವೀರ ಸಾವರ್ಕರ್​​ಗೆ ಭಾರತರತ್ನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶ್ರೀಗಳು, ವೀರ ಸಾವರ್ಕರ್ ಸ್ವಾತಂತ್ರ ಹೋರಾಟಕ್ಕೆ ಸ್ಫೂರ್ತಿ ಕೊಟ್ಟವರು. ಬಂಧನಕ್ಕೊಳಗಾದಾಗ ಸಮುದ್ರಕ್ಕೆ ಹಾರಿ ಬ್ರಿಟೀಷರಿಂದ ತಪ್ಪಿಸಿಕೊಂಡವರು. ಅಂತಹ ದೇಶ ಭಕ್ತರ ಬಗ್ಗೆ ಇಲ್ಲದ ಮಾತನಾಡಬಾರದು. ವಿವಾದಾತ್ಮಕ ಕೆಲಸ ಮಾಡಿರೋ ಟಿಪ್ಪು ಸುಲ್ತಾನ್ ಅಂತವರಿಗೆ ಗೌರವ ಕೊಡುತ್ತಾರೆ. ಟಿಪ್ಪು ವಿರುದ್ದ ಕೊಡವರು, ಕೇರಳದವರು ಭಾರಿ ಅಸಮಾಧಾನ ಹೊಂದಿದ್ದಾರೆ. ವೀರ ಸಾವರ್ಕರ್ ವಿವಾದಾತೀತ ವ್ಯಕ್ತಿ. ಅಂತವರ ಬಗ್ಗೆ ಅಗೌರವ ಸಲ್ಲಿಸೋದು ಒಳ್ಳಯದಲ್ಲ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್​ಗೆ ನೋಟಿಸ್ ನೀಡಿರುವ ವಿಚಾರವಾಗಿ, ಯತ್ನಾಳ್ ಕೆಟ್ಟ ಉದ್ದೇಶದಿಂದ ಹೇಳಿಲ್ಲ, ಸಂತ್ರಸ್ತರಿಗೆ ಪರಿಹಾರ ನೀಡಲಿ ಎಂದು ಹೇಳಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ನಾನು ಬಿಜೆಪಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

Intro:AnchorBody: ರಾಮಮಂದಿರ ತೀರ್ಪಿಗೆ ಕಾಯುತ್ತಿದ್ದೇವೆ. ರವಿಶಂಕರ್ ಗುರೂಜಿಯವರ ಕರೆ ಬಂದಿತ್ತು. ಸಂಧಾನ ಯಶಸ್ವಿಯಾಗಿದೆ ಅಂತ ಹೇಳಿದ್ದಾರೆ. ಕೆಲ ಮುಸ್ಲಿಮ್ ಸಮುದಾಯದವರು ಸಂಧಾನಕ್ಕೆ ಒಪ್ಪಿಗೆ ಇಲ್ಲ ಅಂತ ಹೇಳಿದ್ದಾರೆ. ಹಾಗಾಗಿ ನಾವು ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಉಡುಪಿ ಶ್ರೀ ಕೃಷ್ಣ ಮಠದ ಪೇಜಾವರ ಸ್ವಾಮೀಜಿ ಹೇಳಿದ್ದಾರೆ.
ಅವರು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ರವಿಶಂಕರ್ ಗುರೂಜಿ ಸಂಧಾನ ಯಶಸ್ವಿ ಅಂದಿದ್ದಾರೆ. ಆದರೆ ಕೆಲ ಮುಸ್ಲಿಮ್ ಮುಖಂಡರು ಒಪ್ಪಿಗೆಯಿಲ್ಲ ಅಂದಿದ್ದಾರೆ. ಆದ್ದರಿಂದ ಇದು ಗೊಂದಲವಾಗಿದೆ. ನಾವು ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ.ನಾವೇ ಮುಸ್ಲಿಮ್ ಮುಖಂಡರ ಜೊತೆ ಮಾತನಾಡೋದಿಲ್ಲ. ಸಂಧಾನದಿಂದ ಸಮಸ್ಯೆ ಸರಿ ಆದರೆ ಒಳಿತು. ಕೋರ್ಟ್ ಹೊರಗೆ ಆಗೋದೆ ನಮಗೆ ಇಷ್ಟ. ಇದರಿಂದ ಭಾವೈಕ್ಯತೆ ಬೆಳೆಯುತ್ತದೆ ಅಂತಾ ಶ್ರೀಗಳು ಹೇಳಿದರು. ವೀರಸಾವರ್ಕರ್ ಗೆ ಭಾರತರತ್ನ ವಿಚಾರ ವಾಗಿ ಪ್ರತಿಕ್ರಿಯೆ ನೀಡಿ, ವೀರ ಸಾವರ್ಕರ್ ಅವರಿಂದಲೇ ಭಾರತಕ್ಕೆ ಸ್ವಾತಂತ್ರ್ಯಕ್ಕಾಗಿ ಬಲ ಬಂದಿದೆ. ಅವರು ಸ್ವಾತಂತ್ರಕ್ಕಾಗಿ ಬಂಧನಕ್ಕೊಳಗಾದಾಗ ಸಮುದ್ರಕ್ಕೆ ಹಾರಿದಂತವರು. ಸ್ವಾತಂತ್ರ ಹೋರಾಟದಲ್ಲಿ ಜನರಿಗೆ ಸ್ಪೂರ್ತಿ ಕೊಟ್ಟು ದೊಡ್ಡ ಸಾಧನೆ ಮಾಡಿದ್ದಾರೆ. ಅವರಿಗೆ ಸರಿಯಾದ ಗೌರವ ಕೊಡಬೇಕು. ಅವರು ಸ್ವಾತಂತ್ರಕ್ಕೆ ವಿರುದ್ದವಾಗಿ ಏನು ಮಾಡಿಲ್ಲ. ಅಂತಹ ದೇಶ ಭಕ್ತರ ಬಗ್ಗೆ ಇಲ್ಲದ ಮಾತನಾಡಬಾರದು. ವಿವಾದಾತ್ಮಕ ಕೆಲಸ ಮಾಡಿದೋ ಟಿಪ್ಪು ಸುಲ್ತಾನ್. ಅಂತವರಿಗೆ ಇವರು ಬಾರಿ ಗೌರವ ಕೊಡುತ್ತಾರೆ. ಟಿಪ್ಪು ಜಯಂತಿ ಮಾಡೋಕೆ ಹೋಗ್ತಾರೆ ಎಂದು ವಾಗ್ದಾಳಿ ನಡೆಸಿ. ಟಿಪ್ಪು ವಿರುದ್ದ ಕೊಡವರು ,ಕೇರಳದವರು ಬಾರಿ ಅಸಮಾಧಾನ ಹೊಂದಿದ್ದಾರೆ. ವೀರ ಸಾವರ್ಕರ ವಿವಾದಾತೀತ ವ್ಯಕ್ತಿಯಲ್ಲ. ಅಂತವರ ಬಗ್ಗೆ ಅಗೌರವ ಸಲ್ಲುಸೋದು ಒಳ್ಳಯದಲ್ಲ ಎಂದರು,ಬಸನಗೌಡ ಪಾಟೀಲ ಯತ್ನಾಳಗೆ ನೋಟಿಸ್ ನೀಡಿರುವ ವಿಚಾರ, ನಾನು ನಿಷ್ಪಕ್ಷಪಾತವಾಗಿ ಹೇಳುತ್ತೇನೆ. ಯತ್ನಾಳ ಮೇಲೆ ಯಾವುದೇ ಕ್ರಮ ಆಗಬಾರದು. ಯತ್ನಾಳ ಕೆಟ್ಟ ಉದ್ದೇಶದಿಂದ ಹೇಳಿಲ್ಲ. ಸಂತ್ರಸ್ತರಿಗೆ ಪರಿಹಾರ ನೀಡಲಿ ಎಂದು ಹೇಳಿದ್ದಾರೆ. ನಾನು ಬಿಜೆಪಿಗೆ ಪತ್ರ ಬರೆಯುತ್ತೇನೆ ಯತ್ನಾಳ ಮೇಲೆ ಕ್ರಮ ಕೈಗೊಳ್ಳಬಾರದು ಅಂತಾ ತಿಳಿಸಿದ್ರು. ಗಾಂಧೀಜಿ ಹತ್ಯೆ ಹಿಂದೆ ಸಾವರ್ಕರ್ ಕೈವಾಡವಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ. ಆ ಬಗ್ಗೆ ಕೋರ್ಟ್ ಲ್ಲಿ ಚರ್ಚೆ ನಡೆದು ಸಾವರ್ಕರ್ ಪಾತ್ರ ಇಲ್ಲ ಎಂದು ಸಾಬೀತಾಗಿದೆ. ಅವರು ಗಾಂಧೀಜಿ ಹತ್ಯೆಯಲ್ಲಿ ಭಾಗಿಯಾಗಿದ್ದರೆ ಶಿಕ್ಷೆ ಕೊಡಬೇಕಿತ್ತು. ನಿರಪರಾಧಿ ಅಂತ ತೀರ್ಮಾನ ಆಗಿದೆ. ಸಿದ್ದರಾಮಯ್ಯ ಯಾಕೆ ಹೀಗೆ ಮಾತಾಡುತ್ತಾರೋ ಗೊತ್ತಿಲ್ಲ‌. ಇದು ರಾಜಕೀಯ ಪ್ರೇರಿತವಾದ ಹೇಳಿಕೆ ಅಂತಾ ದೂರಿದ್ರು. ಮಹಾರಾಷ್ಟ್ರ ಕ್ಕೆ ನೀರು ಬಿಡುತ್ತೇವೆ ಎಂಬ ಬಿಎಸ್ ವೈ ಹೇಳಿಕೆ ವಿಚಾರ, ನಮ್ಮ ನಾಡಲ್ಲಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಇರಬೇಕು. ಪರಸ್ಪರ ಸಹಕಾರ ಬೆಳೆಯಬೇಕು.
ಕರ್ನಾಟಕ ಮಹಾರಾಷ್ಟ್ರ , ತಮಿಳುನಾಡು ಎಲ್ಲರೂ ಅನ್ಯೋನ್ಯವಾಗಿರಬೇಕು ಅಂತಾ ಯಡಿಯೂರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡ್ರು. ಇನ್ನು ವೀರಶೈವ ಬೇರೆ ಲಿಂಗಾಯತ ಬೇರೆ ಅಲ್ಲ ಎಲ್ಲರೂ ಒಂದಾಗಬೇಕು. ಇಡೀ ಕರ್ನಾಟಕ ಒಂದಾಗಬೇಕು
ಪ್ರತ್ಯೇಕತೆ ಬರಬಾರದು ಎಲ್ಲ ದಲಿತರು ಒಂದಾಗಬೇಕು. ಎಲ್ಲ ಬ್ರಾಹ್ಮಣರು ಒಂದಾಗಬೇಕು. ಎಡಗೈ ಬಲಗೈ ಎಲ್ಲರೂ ಒಂದಾಗಬೇಕು. ಕರ್ನಾಟಕ ಅಖಂಡವಾಗಿರಬೇಕು ಅಂದ್ರು. ಬಿಜೆಪಿಯಲ್ಲಿ ಲಿಂಗಾಯತ ಮುಖಂಡ ಬಿಎಸ್ ವೈ ತುಳಿಯುವ ಪ್ರಯತ್ನ ಎಂಬ ಲಿಂಗಾಯತ ಮಠಾಧೀಶರ ವಾದ ವಿಚಾರ, ಇದು ಕೇವಲ ಊಹಾಪೋಹ ಹಾಗೆಲ್ಲ ಏನಿಲ್ಲ. ಅದಕ್ಕೆ ನಾವೆಲ್ಲ ಉತ್ತರ ಕೊಡೋದಿಲ್ಲ. ರಾಜ್ಯದ ಕಲ್ಯಾಣಕ್ಕೆ ಎಲ್ಲರೂ ಸೇರಿ ಕೆಲಸ ಮಾಡಬೇಕು. ನಮಗೆ ರಾಜ್ಯದ ಹಿತ ಮುಖ್ಯ. ಬಿಜೆಪಿ ಕಾಂಗ್ರೆಸ್, ಜೆ ಡಿ ಎಸ್ ಸೇರಿ ಸರಕಾರ ನಡೆಸುವಂತಾಗಬೇಕು ಅಂತಾ ತಿಳಿಸಿದ್ರು. ಕಟಿಲ್ ಹಾಗೂ ಯಡಿಯೂರಪ್ಪ ಮಧ್ಯೆ ವೈಮನಸ್ಸು ವಿಚಾರ, ಯಾವುದೇ ಆಂತರಿಕೆ ಕಲಹ ಬೇಡ. ಬಿಎಸ್ ವೈ ಉತ್ತಮ ಕೆಲಸ ಮಾಡುತ್ತಿದ್ದಾರೆ ಅಂತಾ ಜಾರಿಕೊಂಡ್ರು.‌ ಪ್ರಧಾನಿ ಮೋದಿ ಅವರ ಕಾರ್ಯ ಮೆಚ್ಚುಗೆಯಾಗಿದೆಯಾ ಎಂಬ ಪ್ರಶ್ನೆ,ಅವರ ಕಾರ್ಯ ತೃಪ್ತಿಕರವಾಗಿದೆ. ಹಾಗಂತ ಎಲ್ಲರೂ ಮಾತಾಡುತ್ತಿದ್ದಾರೆ. ಮೋದಿಯವರು ಅನೇಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂರ ಕಲ್ಯಾಣಕ್ಕೋಸ್ಕರ ತಲಾಖ್ ನಿಷೇಧ ಮಾಡಿದ್ದಾರೆ.ಧಾರ್ಮಿಕವಾಗಿಯೂ ಉತ್ತಮ ಕಾರ್ಯ ಮಾಡಿದ್ದಾರೆ. ಕಾಶ್ಮೀರ ವಿಚಾರದಲ್ಲೂ ಒಳ್ಳೆಯ ಕಾರ್ಯ ಮಾಡಿದ್ದಾರೆ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಇದು ಇನ್ನಷ್ಟು ಭದ್ರವಾದ ಸರಕಾರವಾಗಲಿ. ಆರ್ಥಿಕ ಪ್ರಗತಿಯಾಗಲಿ ನಿರುದ್ಯೋಗ ಸಮಸ್ಯೆ ಸರಿಯಾಗಲಿ. ದೇಶಕ್ಕೆ ಉತ್ತಮ ಕೀರ್ತಿ ಬರುವಂತ ಕೆಲಸ ಮೋದಿ ಅವರಿಂದ ಆಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು

ಬೈಟ್: ಪೇಜಾವರ ಶ್ರೀಪಾದರು (ಕೃಷ್ಣ ಮಠ, ಉಡುಪಿ)Conclusion:ಈ ಟಿವಿ,ಭಾರತ,ಬಾಗಲಕೋಟೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.