ETV Bharat / state

ತನ್ನ ರಕ್ತದಿಂದಲೇ ಎಸ್​ಪಿ ಬಾಲಸುಬ್ರಹ್ಮಣ್ಯಂ ಭಾವಚಿತ್ರ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರಕಲಾ ಶಿಕ್ಷಕ

author img

By

Published : Sep 26, 2020, 5:07 AM IST

ಶಿಕ್ಷಕ, ಚಿತ್ರ ಕಲಾವಿದ ಡಾ ಸಂಗಮೇಶ್ ಬಗಲಿ ತನ್ನ ರಕ್ತದಿಂದಲೇ ಬಾಲ ಸುಬ್ರಹ್ಮಣ್ಯಂ ಅವರು ಕೋಟ್ಯಂತರ ಅಭಿಮಾನಿಗಳಿಗೆ ಕೈಮುಗಿದ ಭಾವಚಿತ್ರ ರಚಿಸಿ, ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.

balasubrahmanyam through design a portrait with blood
ರಕ್ತದಿಂದ ಎಸ್​ಪಿ ಬಾಲಸುಬ್ರಹ್ಮಣ್ಯಂ ಭಾವಚಿತ್ರ ರಚನೆ

ಬಾಗಲಕೋಟೆ: ಭಾರತ ಕಂಡ ಖ್ಯಾತ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಿಧನ ಹಿನ್ನೆಲೆಯಲ್ಲಿ ಜಮಖಂಡಿ ಶಿಕ್ಷಕ ಹಾಗೂ ಕಲಾವಿದ ಡಾ. ಸಂಗಮೇಶ್​ ಬಗಲಿ ಅವರು ತಮ್ಮ ರಕ್ತದಿಂದ ಎಸ್​​ಪಿಬಿ ಅವರ ಭಾವಚಿತ್ರ ರಚಿಸಿ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕಲಾವಿದ ಡಾ. ಸಂಗಮೇಶ್​ ಬಗಲಿ
ಕಲಾಕೃತಿಯೊಂದಿಗೆ

ರಕ್ತದ ಮೂಲಕ ಗಾನ ಗಂಧರ್ವ ಬಾಲಸುಬ್ರಹ್ಮಣ್ಯಂ ಅವರ ಚಿತ್ರ ಬಿಡಿಸಿ, ಗಮನ ಸೆಳೆದಿರುವ ಸಂಗಮೇಶ್​ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ.

ರಕ್ತದಿಂದ ಎಸ್​ಪಿಬಿ ಭಾವಚಿತ್ರ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರಕಲಾ ಶಿಕ್ಷಕ

ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಸಂಗಮೇಶ್​ ಅವರು, ಕಳೆದ 50 ವರ್ಷಗಳಿಂದ ಬಾಲಸುಬ್ರಹ್ಮಣ್ಯಂ ಅವರು ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಸಂಗೀತ ಲೋಕದ ದಂತಕಥೆಯಾಗಿದ್ದಾರೆ. ಎಸ್​​ಪಿಬಿ ಅವರ ನಿಧನದಿಂದ ಇಂದು ಸಂಗೀತ ಕ್ಷೇತ್ರ ಬಡವಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.