ETV Bharat / state

ಬಾಗಲಕೋಟೆ ಜಿಲ್ಲೆಯಲ್ಲಿ 69 ಜನ ಗುಣಮುಖ, 254 ಹೊಸ ಪ್ರಕರಣ ದೃಢ - Bagalakote district Corona statistics

ಬಾಗಲಕೋಟೆ ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ ಹೀಗಿದೆ.

Today's Corona statistics for Bagalakote district
ಬಾಗಲಕೋಟೆ ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ
author img

By

Published : Oct 1, 2020, 9:33 PM IST

ಬಾಗಲಕೋಟೆ : ಜಿಲ್ಲೆಯಲ್ಲಿ 69 ಜನ ಕೋವಿಡ್​ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಿಂದ ಬಿಡುಗಡೆಯಾಗಿದ್ದು, ಹೊಸದಾಗಿ 254 ಕೊರೊನಾ ಪ್ರಕರಣಗಳು ಗುರುವಾರ ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 10491 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಒಟ್ಟು 9354 ಜನ ಕೋವಿಡ್​ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ಬಾಗಲಕೋಟೆ ತಾಲೂಕಿನಲ್ಲಿ 84, ಬಾದಾಮಿ 24, ಬೀಳಗಿ 46, ಜಮಖಂಡಿ 50, ಮುಧೋಳ 50 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅವರಿಗೆ ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಕೋವಿಡ್ ಲ್ಯಾಬ್​ನಲ್ಲಿ ಪರೀಕ್ಷಿಸಲಾಗುತ್ತಿದ್ದ 1560 ಸ್ಯಾಂಪಲ್​ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 1,07,336 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 94,774 ನೆಗೆಟಿವ್ ಪ್ರಕರಣ, 10491 ಪಾಸಿಟಿವ್ ಪ್ರಕರಣ ಹಾಗೂ 107 ಮೃತ ಪ್ರಕರಣ ದಾಖಲಾಗಿವೆ. ಇನ್ನು 1030 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 413 ಸ್ಯಾಂಪಲ್​ಗಳು ಮಾತ್ರ ರಿಜೆಕ್ಟ್​ ಆಗಿರುತ್ತವೆ. ಕಂಟೇನ್ಮೆಂಟ್ ಝೋನ್ 438 ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಗೆ ಆಟೋಮೆಟಿಕ್ ಮಷಿನ್:

ಜಿಲ್ಲೆಯಲ್ಲಿ ಗಂಟಲು ಮಾದರಿ ಸ್ಯಾಂಪಲ್​ಗಳ ಪರೀಕ್ಷೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಬಂದಂತಹ ಅಟೋಮೆಟಿಕ್ ಆರ್​ಎನ್​ಎ ಎಕ್ಸ್ಯಾಟ್ರಿಕ್​ ಯಂತ್ರವನ್ನು ಶಾಸಕ ವೀರಣ್ಣ ಚರಂತಿಮಠ ಜಿಲ್ಲಾ ಆಸ್ಪತ್ರೆಗೆ ಗುರುವಾರ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.