ETV Bharat / state

ಕೂಡಲ ಸಂಗಮಕ್ಕೆ ರಾಜ್ಯದ ನಾಲ್ವರು ಸಚಿವರು ಭೇಟಿ.. ಯಾಕೆ ಗೊತ್ತಾ?

ಇಂದು ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮಕ್ಕೆ ರಾಜ್ಯದ ನಾಲ್ವರು ಸಚಿವರು ಭೇಟಿ ನೀಡಿ, ಪೂಜೆ ಸಲ್ಲಿಸಿ ಮೃತಿಕೆ ಸಂಗ್ರಹಿಸಿಕೊಂಡು ಹೋಗಿದ್ದಾರೆ.

Kn_Bgk_
ಕೂಡಲ ಸಂಗಮಕ್ಕೆ ಸಚಿವರ ಭೇಟಿ
author img

By

Published : Nov 4, 2022, 6:44 PM IST

Updated : Nov 4, 2022, 8:26 PM IST

ಬಾಗಲಕೋಟೆ: ಬಸವಣ್ಣನವರ ಐಕ್ಯ ಸ್ಥಳ ಹಾಗೂ ತ್ರಿವೇಣಿ ಸಂಗಮ ಇರುವ ಕೂಡಲಸಂಗಮಕ್ಕೆ ಇಂದು ನಾಲ್ವರು ಸಚಿವರು ಆಗಮಿಸಿ, ಪೂಜೆ ಸಲ್ಲಿಸಿ ಮೃತಿಕೆ ಸಂಗ್ರಹಿಸಿಕೊಂಡು ಹೋಗಿದ್ದಾರೆ. ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನೆ ಹಿನ್ನೆಲೆ, ಬಸವಣ್ಣನ ಐಕ್ಯತಾಣ ಕೂಡಲ ಸಂಗಮದಿಂದ ಮೃತ್ತಿಕೆ ಸಂಗ್ರಹ ಮಾಡುವುದಕ್ಕೆ, ಸಚಿವರಾದ ಆರಗ ಜ್ಞಾನೇಂದ್ರ, ಆರ್ ಅಶೋಕ್, ಅಶ್ವತ್ಥ ನಾರಾಯಣ, ನಾರಾಯಣಗೌಡ ಮೃತ್ತಿಕೆ ಸಂಗ್ರಹಿಸಿದರು. ಹೆಲಿಕಾಪ್ಟರ್ ‌ಮೂಲಕ ಆಗಮಿಸಿದ ಸಚಿವರು, ಮೊದಲು ಸಂಗಮನಾಥ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಕೂಡಲ ಸಂಗಮಕ್ಕೆ ಸಚಿವರು ಭೇಟಿ

ನಂತರ ಬಸವಣ್ಣನ ಐಕ್ಯಮಂಟಪ ದರ್ಶನ ಪಡೆದುಕೊಂಡ ಸಚಿವರು ಬಸವಣ್ಣ ಐಕ್ಯ ಸ್ಥಳದಲ್ಲಿ ಪೂಜೆ ಸಲ್ಲಿಸಿ, ಕೆಲ‌ ಸಮಯ ಕುಳಿತುಕೊಂಡು ಪ್ರಾರ್ಥನೆ ಮಾಡಿ ತೆರಳಿದರು. ಕಂದಾಯ ಸಚಿವರಾದ ಆರ್ ಅಶೋಕ‌ ಅವರು ಮೇಲೆ ನಿಂತು ದರ್ಶನ ಪಡೆದುಕೊಂಡರೆ, ಆರಗ ಜ್ಞಾನೇಂದ್ರ, ಅಶ್ವತ್ಥ ನಾರಾಯಣ ಹಾಗೂ ನಾರಾಯಣ ಗೌಡ ಐಕ್ಯ ಮಂಟಪದಲ್ಲಿ ಕೆಳಗೆ ಇಳಿದು ದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಸಚಿವರಾದ ಅಶ್ವತ್ಥ ನಾರಾಯಣ ಮಾತನಾಡಿ, ನಾಡು ಕಟ್ಟಿ ಬೆಳೆಸಿದ ಕೆಂಪೇಗೌಡ ಅವರ 108 ಅಡಿ ಪುತ್ಥಳಿ ನಿರ್ಮಾಣಕ್ಕೆ ಬಸವಣ್ಣನವರ ಐಕ್ಯ ಸ್ಥಳದಿಂದ ಮೃತ್ತಿಕೆ ತೆಗೆದುಕೊಂಡು‌ ಹೋಗಿ, ಇಡೀ ಕನ್ನಡ‌ನಾಡು‌ ಒಂದು ಎಂದು ಸಾರುವ ಮೂಲಕ ಹಾಗೂ ಬಸವಣ್ಣನವರ ಸಾಮಾಜಿಕ‌ ಕಾಂತ್ರಿಯಿಂದಾಗಿ‌ ಬದಲಾವಣೆ ಆಗಿರುವುದು ಸಾರುವ ಉದ್ದೇಶದಿಂದ ಇಲ್ಲಿಗೆ ಆಗಮಿಸಿದ್ದೇವೆ ಎಂದರು.

ಕೂಡಲ ಸಂಗಮಕ್ಕೆ ಸಚಿವರು ಭೇಟಿ

ಪ್ರಧಾನ ಮಂತ್ರಿಯವರು, ಕೆಂಪೇಗೌಡ ಪುತ್ಥಳಿ ಅನಾವರಣ ಕಾರ್ಯಕ್ರಮ ಬರಲಿದ್ದಾರೆ. ಈ ಹಿನ್ನಲೆ ಈ‌ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು. ಬಳಿಕ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಬಸವಣ್ಣನವರ ಮಹಾನ‌ ವ್ಯಕ್ತಿಯಾಗಿ‌ ನಾಡು ಬದಲಾವಣೆ ಮಾಡಿದ್ದಾರೆ. ಹಾಗೆಯೇ ಕೆಂಪೇಗೌಡ ಅವರು ಸಹ ಈ‌ ನಾಡು ಕಟ್ಟಿದ್ದಾರೆ. ಇಬ್ಬರ‌ ಮಹಾನ‌ ವ್ಯಕ್ತಿಗಳಿಂದ ಈ ನಾಡಿನ‌ ಎಲ್ಲರಿಗೂ ಒಳ್ಳೆಯದು ಆಗಲಿದೆ ಎಂದರು.

ಇದೇ ಸಮಯದಲ್ಲಿ, ರೇಣುಕಾಚಾರ್ಯ ಸಹೋದರ ಪುತ್ರನ ಸಾವು ಪ್ರಕರಣದ ಕುರಿತು ಮಾತನಾಡಿ ಘಟನೆ ಹೇಗೆ ಸಂಭವಿಸಿದೆ? ಅದು ಅಪಘಾತನಾ? ಅಥವಾ ಕೊಲೆಯಾ ಎಂಬುದನ್ನು ಕಂಡು ಹಿಡಿಯಲು ಎಲ್ಲಾ ರೀತಿಯಿಂದ ತಿನಿಖೆ ನಡೆಯುತ್ತಿದೆ. ನಾನು‌ ರೇಣುಕಾಚಾರ್ಯ ಮನೆಗೆ ಹೋಗ್ತೆನೆ. ಪ್ರಾಥಮಿಕ ಮಾಹಿತಿಯನ್ನು ಸದ್ಯಕ್ಕೆ ಹೇಳಲ್ಲ ಈಗ ನಾನೇನಾದರೂ ಹೇಳಿದ್ರೆ ತಪ್ಪಾಗುತ್ತೆ ಎಂದರು.

ರೇಣುಕಾಚಾರ್ಯ ಅವರಿಗೆ ಬೆದರಿಕೆ ಕರೆಗಳು ಬರ್ತಿದ್ವು ಅದರಿಂದಾಗಿ ಕೊಲೆ ಆಗಿದಿಯಾ ಎಂಬ ಪ್ರಶ್ನೆ ಹುಟ್ಟಿದ್ದು, ಎಲ್ಲ ಆಯಾಮಾಗಳಲ್ಲೂ ತನಿಖೆ ನಡೆದಿದೆ. ರೇಣುಕಾಚಾರ್ಯ ಅವರು ನಮ್ಮ ಸರ್ಕಾರದ ಅಂಗ, ಮಾಜಿ ಸಚಿವರು, ಹಾಗಾಗಿ ವಿಶೇಷವಾದ ಗಮನವನ್ನು ತನಿಖೆಯಲ್ಲಿ ವಹಿಸಲಾಗುವುದು‌ ಎಂದರು.

ಇದನ್ನೂ ಓದಿ: ಶ್ರೀರಾಮುಲು ಬಂದ ಮೇಲೆ ಕಾಂಗ್ರೆಸ್ ಪಕ್ಷದವರಿಗೆ ಮರ್ಮಾಘಾತ: ಶಾಸಕ ಶಿವನಗೌಡ ನಾಯಕ್

Last Updated : Nov 4, 2022, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.