ಬಾಗಲಕೋಟೆ: ಥ್ರೋ ಬಾಲ್ ಕ್ರೀಡೆಯಲ್ಲಿ ಗ್ರಾಮೀಣ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುವೊಬ್ಬ ಮತ್ತೆ ವಿದೇಶದಲ್ಲಿ ನಡೆಯುವ ಕ್ರೀಡೆಯಲ್ಲಿ ಭಾಗವಹಿಸಲು ಹಣದ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.
ನಾಗರಾಜ್ ಕಲಗೋಡಿ ಎಂಬ ಯುವಕ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಬಾದವಾಡಗಿ ಗ್ರಾಮದ ನಿವಾಸಿಯಾಗಿದ್ದು, 6ನೇ ತರಗತಿ ಕಲಿಯುತ್ತಿರುವಾಗಲೇ ಕ್ರೀಡೆ ಪ್ರಾರಂಭಿಸಿದ್ದಾನೆ. ಥೈಲ್ಯಾಂಡ್ ಹಾಗೂ ದುಬೈ ದೇಶಗಳಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಿ, ಮೂರನೇಯ ಸ್ಥಾನ ಗಳಿಸಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಪಡೆದುಕೊಂಡಿದ್ದಾನೆ. ಮುಂದೆ ಕೋಲ್ಕತ್ತಾ ಹಾಗೂ ನೇಪಾಳ ದೇಶದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರೆಳುತ್ತಿದ್ದು, ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಹಣದ ನೆರವು ಯಾಚಿಸಿದ್ದಾನೆ. ಸರ್ಕಾರ ಥ್ರೋ ಬಾಲ್ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದಲ್ಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂದು ನಾಗರಾಜ್ ಕಲಗೋಡಿ ಈಟಿವಿ ಭಾರತದೊಂದಿಗೆ ಅಭಿಪ್ರಾಯ ತಿಳಿಸಿದ್ದಾನೆ.