ETV Bharat / state

ಶಾರ್ಟ್ ಸರ್ಕ್ಯೂಟ್: ಕೃಷ್ಣನದಿಯಲ್ಲಿ ಶವ ಹುಡುಕಲು ಹೋದ ಮೂವರು ದಾರುಣ ಸಾವು

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರನಾಳ ಗ್ರಾಮದ ನಿವಾಸಿಯಾಗಿದ್ದ ಶಿವಪ್ಪ (70) ಎಂಬುವರು ಕೃಷ್ಣ ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದರು. ಇದೀಗ ಶವ ಹುಡುಕಲು ಹೋದಾಗ ಮತ್ತೊಂದು ಅವಘಡ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ.

krishna river
ಕೃಷ್ಣ ನದಿ
author img

By

Published : Oct 7, 2021, 5:46 PM IST

Updated : Oct 7, 2021, 8:05 PM IST

ಬಾಗಲಕೋಟೆ: ನದಿಯಲ್ಲಿ ಈಜಲು ಹೋಗಿ ಮೃತಪಟ್ಟ ವ್ಯಕ್ತಿಯ ಶವವನ್ನು ಹುಡುಕಲು ಹೋದ ಮೂವರು ವಿದ್ಯುತ್​ ಶಾರ್ಟ್ ಸರ್ಕ್ಯೂಟ್​ನಿಂದ ಸಾವನ್ನಪ್ಪಿರುವ ಘಟನೆ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ನಡೆದಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರನಾಳ ಗ್ರಾಮದ ನಿವಾಸಿ ಶಿವಪ್ಪ (70) ಎಂಬುವರು ಕೃಷ್ಣ ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದರು. ಅಜ್ಜನ ಮೃತ ದೇಹವನ್ನು ಹುಡುಕಲು ಹೋದ ಮೊಮ್ಮಗ ಶರಣಪ್ಪ(30), ಮೃತ ವ್ಯಕ್ತಿಯ ಸಹೋದರನ ಮಗ ಯನಮಪ್ಪ(35) ಹಾಗೂ ಬೋಟ್ ಚಾಲಕ ಪರಸಪ್ಪ (30)ಎಂಬುವರು ಬಲಿಯಾಗಿದ್ದಾರೆ.

ನಾರಾಯಣಪುರ ಜಲಾಶಯದ ಕೃಷ್ಣ ನದಿಯ ಹಿನ್ನೀರಿನಲ್ಲಿ ಮುಳುಗಡೆ ಆಗಿರುವ ವಿದ್ಯುತ್ ಕಂಬದ ಹತ್ತಿರ ಹೋದ ಸಮಯದಲ್ಲಿ ಶಾರ್ಟ್​ ಸರ್ಕ್ಯೂಟ್ ಆಗಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿದ್ದ ಅಜ್ಜನ ಮೃತದೇಹ ಸಿಕ್ಕಿದೆ. ಈಗ ಮೃತಪಟ್ಟಿರುವ ಮೂವರ ದೇಹದ ಶೋಧ ಕಾರ್ಯ ಮುಂದುವರೆದಿದೆ.

ಹುನಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸ್, ಅಗ್ನಿ ಶಾಮಕ ದಳ ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ಮುಂದುವರೆದಿದೆ.

ಬೋಟ್ ಮಾಲೀಕನ ಮೇಲೆ ಹಲ್ಲೆಗೆ ಯತ್ನ:

ಬೋಟ್ ಮಾಲೀಕ ಉದ್ದೇಶಪೂರ್ವವಾಗಿಯೇ ತಮ್ಮ ಹುಡಗನನ್ನು ಈ ಕೆಲಸಕ್ಕೆ ಕಳಿಸಿಕೊಟ್ಟಿದ್ದು, ಆತನ ಸಾವಿಗೆ ಬೋಟ್ ಮಾಲೀಕನೇ ಕಾರಣವೆಂದು ಆಕ್ರೋಶಗೊಂಡಿದ್ದ ಬೋಟ್ ಆಪರೇಟರ್ ಪರಸಪ್ಪನ ಸಂಬಧಿಕರು ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಭೇಟಿ
ಸ್ಥಳಕ್ಕೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಭೇಟಿ

ಸ್ಥಳಕ್ಕೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಭೇಟಿ :

ಇನ್ನು ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಭೇಟಿ ನೀಡಿ ಘಟನೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ್​ ಕೋಳೂರ ಅವರಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡ ಶಾಸಕರು, ನನ್ನ ಮತಕ್ಷೇತ್ರದ ತಾಳಿಕೋಟಿ ತಾಲೂಕಿನ ಹರನಾಳ ಗ್ರಾಮದ ಮೂವರು ಈ ಅವಘಢದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಒಬ್ಬರ ಮೃತದೇಹ ಸಿಕ್ಕಿದೆ. ಇನ್ನುಳಿದವರ ಮೃತದೇಹಗಳನ್ನು ಹೊರತೆಗೆಯಲು ಬಾಗಲಕೋಟೆಯಿಂದ ವಿಶೇಷ ತಂಡ ಆಗಮಿಸಲಿದ್ದು, ಬೆಳಗ್ಗೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಘಟನೆ ಬಾಗಲಕೋಟೆ ಜಿಲ್ಲಾ ವ್ಯಾಪ್ತಿಗೆ ಒಳಪಡುತ್ತಿದ್ದು, ಸಚಿವರಾದ ಗೋವಿಂದ ಕಾರಜೋಳ ಅವರೊಂದಿಗೆ ಮಾತನಾಡಿದ್ದೇನೆ.ನನ್ನ ಕ್ಷೇತ್ರದ ಮೂವರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದು, ಅವರ ಕುಟುಂಬದವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಓದಿ: ಕಿಡ್ನಾಪರ್ಸ್​​ ಕಾರಿನ​ ಮೇಲೆ ಜಿಗಿದ ಪೊಲೀಸ್​ ಪೇದೆ.. ಸಿನಿಮೀಯ ಸ್ಟೈಲ್​​ನಲ್ಲಿ ಅಪರಾಧಿಗಳ ಬಂಧನ

Last Updated : Oct 7, 2021, 8:05 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.