ಬಾಗಲಕೋಟೆ: ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ ಅವರಿಗೆ ಮನವಿ ಸಲ್ಲಿಸಲಾಯಿತು.
ದೇಶದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನವದೆಹಲಿಯ ಎಬಿಆರ್‍ಎಸ್‍ಎಂ ಜೊತೆಗೆ ಸಂಕಲನಗೊಂಡ ರಾಜ್ಯ ಸಂಘಟನೆಗಳು, ಶಿಕ್ಷಕರ ಬೇಡಿಕೆಗಳಾದ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ವಾಯತ್ತ ಮಾಧ್ಯಮಿಕ ಶಿಕ್ಷಣದ ಸ್ಥಾಪನೆ, ಕೇಂದ್ರ ಸರಕಾರದಿಂದ ಶೇ.10 ರಷ್ಟು ಜಿಡಿಪಿ ಮತ್ತು ಶೇ.30 ರಷ್ಟು ರಾಜ್ಯ ಸರಕಾರದಿಂದ ಬಜೆಟ್‍ನಲ್ಲಿ ಮೀಸಲು, ಎಲ್ಲಾ ರಾಜ್ಯದ ಸರಕಾರಿ ಶಾಲಾ ಶಿಕ್ಷಕರಿಗೆ ಕೇಂದ್ರ ಸರಕಾರದಿಂದ ನೀಡುವ ಸಮಾನ ವೇತನ ಮತ್ತು ಇತರೆ ಭತ್ಯೆಯನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರುವಂತೆ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಕರ್ನಾಟಕ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ.ಸನ್ನಿ, ರಾಜ್ಯ ಕಾರ್ಯದರ್ಶಿ ಜಿ.ಕೆ.ತಳವಾರ, ಡಿ.ವಿ.ಸಿಕ್ಕೇರಿ, ಜಿಲ್ಲಾ ಕಾರ್ಯದರ್ಶಿ ಎ.ಆರ್.ಹಿರೇಮಠ ಸೇರಿದಂತೆ ಅನೇಕರು ಹಾಜರಿದ್ದರು.