ಬಾಗಲಕೋಟೆ: ನಗರದ ಕೆರೂಡಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ರಾಯಚೂರು ಮೂಲದ ಮಹಿಳೆ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಲಿಂಗಸೂಗೂರು ತಾಲೂಕಿನ ಮಸ್ಕಿ ಗ್ರಾಮದ 25 ವರ್ಷದ ನೇತ್ರಾ ಅಮರೇಶ ಗುರಾಣಿ ಅವ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಸಹಜವಾಗಿಯೇ ಮಹಿಳೆಗೆ ಹೆರಿಗೆ ಮಾಡಿಸಲಾಗಿದ್ದು, ಮಕ್ಕಳು ಆರೋಗ್ಯವಾಗಿವೆ. ನವಜಾತ ಶಿಶುಗಳು ಕ್ರಮವಾಗಿ 1.6 ಕಿ.ಗ್ರಾಂ, 1.8 ಕಿ.ಗ್ರಾಂ, 1.1 ಕಿ.ಗ್ರಾಂ ತೂಕ ಇವೆ ಎಂದು ಕೆರೂಡಿ ಆಸ್ಪತ್ರೆ ವೈದ್ಯರಾದ ಡಾ. ಅನುಸೂಯಾ ಕೆರೂಡಿ ಹಾಗೂ ಡಾ.ಜಯಪ್ರದಾ ನಾಯಕ ತಿಳಿಸಿದ್ದಾರೆ.