ETV Bharat / state

ವೋಟ್​ ಮಾಡುವಂತೆ ಅಧಿಕಾರಿಗಳಿಂದ ಮತ ರಕ್ಷಾ ಬಂಧನ: ಬಾಗಲಕೊಟೆಯಲ್ಲಿ ವಿಶಿಷ್ಟ ಜಾಗೃತಿ - undefined

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಮತದಾನ ದಿನ ಹತ್ತಿರ ಆಗುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಅಧಿಕಾರಿಗಳಿಂದ ಮತ ರಕ್ಷಾ ಬಂಧನ
author img

By

Published : Apr 19, 2019, 5:16 PM IST

ಬಾಗಲಕೊಟೆ: ಮುಧೋಳ ತಾಲೂಕು ಪಂಚಾಯಿತಿ ಅಧಿಕಾರಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಒಂದು ಹೆಜ್ಜೆ ಮುಂದಿದ್ದು, ವಿಶೇಷ ರೀತಿಯ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಗಮನ ಸೆಳೆಯುತ್ತಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಠೋಡ, ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿಕೊಂಡು ಮುಧೋಳ ತಾಲೂಕಿನ ಮೆಟ್ಟಗುಡ್ಡ ಹಾಗೂ ಭೊಮ್ಮನಬುದ್ದಿ ಗ್ರಾಮದಲ್ಲಿ ವಿಶೇಷ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಗ್ರಾಮಸ್ಥರಿಗೆ ಮತ ರಕ್ಷಾ ಬಂಧನ ಕಟ್ಟಿ ಜಾಗೃತಿ ಮೂಡಿಸಿದ ಅಧಿಕಾರಿಗಳು

ಮೊದಲು ಮಹಿಳಾ ಸಿಬ್ಬಂದಿ ಗ್ರಾಮದಲ್ಲಿರುವ ಎಲ್ಲಾ ಮನೆಗಳಿಗೆ ತೆರಳಿ ಮಹಿಳೆಯರನ್ನು ಆರತಿ ಮಾಡಿ, ಕುಂಕುಮ ಹಚ್ಚಿ ಮತದಾನ ಮಾಡಬೇಕು, ಮತದಾನ ನಮ್ಮ ಹಕ್ಕು ಎಂದು ಹೇಳುವ ಮೂಲಕ ಜಾಗೃತ ಮೂಡಿಸಿದರು. ನಂತರ ನಡೆದ ಸಮಾರಂಭದಲ್ಲಿ ಮತ ರಕ್ಷಾ ಬಂಧನ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡರು. ರಕ್ಷಾ ಬಂಧನದಲ್ಲಿ ಸಹೋದರಿಯರು ಸಹೋದರರಿಗೆ ಕಟ್ಟುವಂತೆ ಮತದಾನ ಮಾಡುವಂತೆ ಮತ ರಕ್ಷೆ ಕೈಗೆ ಕಟ್ಟಿಸುವ ಮೂಲಕ ಮತದಾನ ಜಾಗೃತ ಮೂಡಿಸಿದರು.

ಗ್ರಾಮದಲ್ಲಿ ಪ್ರತಿಯೊಬ್ಬರಿಗೂ ಈ ಮತ ಬಂಧನ ಕಟ್ಟಲಾಯಿತು. ಇದೇ ಏಪ್ರಿಲ್ 23 ರಂದು ಮೂರನೇ ಹಂತದ ಮತದಾನ ನಡೆಯಲಿದ್ದು, ಆಗ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುತ್ತೇವೆ ಎಂದು ಪ್ರತಿಜ್ಞಾವಿಧಿ ಭೋದಿಸಲಾಯಿತು. ಅಲ್ಲಿಯವರೆಗೆ ಕೈಯಲ್ಲಿ ಕಟ್ಟಿರುವ ಬಂಧನವನ್ನ ಬಿಚ್ಚದೆ ಹಾಗೇ ಇರಬೇಕು. ಈ ಮತ ರಕ್ಷೆ ಕೈಯಲ್ಲಿದ್ದರೆ ಮತದಾನ ಮಾಡುವಂತೆ ಪ್ರೇರಣೆ ಸಿಗಲಿದೆ. ಹೀಗಾಗಿ ಇದನ್ನು ಬಿಚ್ಚಬಾರದು ಎಂದು ಗ್ರಾಮಸ್ಥರು ಹಾಗೂ ಯುವಕರಿಗೆ ಮನವಿ ಮಾಡಿಕೊಂಡರು.

ಅಲ್ಲದೆ ಧಾರವಾಡದ ಹಾಸ್ಯ ಕಲಾವಿದ ಮೊಬೈಲ್ ಮಲ್ಲಪ್ಪ ಅವರಿಂದ ಹಾಸ್ಯ ಕಾರ್ಯಕ್ರಮ ಏರ್ಪಡಿಸಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.

Intro:AnchorBody:- ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಮತದಾನ ದಿನ ಹತ್ತಿರ ಆಗುತ್ತಿದ್ದಂತೆ,ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ಮತದಾನ ಜಾಗೃತ ಮೂಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.ಆದರೆ ಮುಧೋಳ ತಾಲೂಕ ಪಂಚಾಯತ ಅಧಿಕಾರಿಗಳು ಒಂದು ಹೆಜ್ಜೆ ಮುಂದು ಇದ್ದು, ವಿವಿಧ ಬಗೆಯ ಮತ್ತು ವಿಶೇಷ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಗಮನ ಸೆಳೆಯುತ್ತಿದ್ದಾರೆ.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಠೋಡ,ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಮಹಿಳಾ,ಮಕ್ಕಳ ಕಲ್ಯಾಣ ಅಧಿಕಾರಿಗಳು ಸೇರಿಕೊಂಡು ಮುಧೋಳ ತಾಲೂಕಿನ ಮೆಟ್ಟಗುಡ್ಡ ಹಾಗೂ ಭೊಮ್ಮನಬುದ್ದಿ ಗ್ರಾಮದಲ್ಲಿ ವಿಶೇಷ ರೀತಿಯಿಂದ ಮತದಾನ ಜಾಗೃತ ಮೂಡಿಸಿದರು. ಮೊದಲು ಮಹಿಳಾ ಸಿಬ್ಬಂದಿಗಳು ಗ್ರಾಮದಲ್ಲಿರುವ ಎಲ್ಲಾ ಮನೆ ಮನೆಗೆ ತೆರಳಿ, ಮಹಿಳೆಯರನ್ನು ಆರತಿ ಮಾಡಿ,ಕುಂಕುಮ ಹಚ್ಚಿ ಮತದಾನ ಮಾಡಬೇಕು, ಮತದಾನ ನಮ್ಮ ಹಕ್ಕು ಎಂದು ಹೇಳುವ ಮೂಲಕ ಮನೆಯಲ್ಲಿದ್ದವರಿಗೆ ಮತದಾನ ಮಾಡುವಂತೆ ಜಾಗೃತ ಮೂಡಿಸಿದರು.ನಂತರ ನಡೆದ ಸಮಾರಂಭದಲ್ಲಿ ಮತ ರಕ್ಷೆ ಬಂಧನ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡರು.ರಕ್ಷಾ ಬಂಧನ ದಲ್ಲಿ ಸಹೋದರಿ ಯರು ಸಹೋದರರಿಗೆ ಕಟ್ಟುವಂತೆ ಮತದಾನ ಮಾಡುವಂತೆ ಮತ ರಕ್ಷೆ ಕೈ ಗೆ ಕಟ್ಟಿಸುವ ಮೂಲಕ ಮತದಾನ ಜಾಗೃತ ಮೂಡಿಸಿದರು.ಗ್ರಾಮದಲ್ಲಿ ದಲ್ಲಿ ಪ್ರತಿಯೊಬ್ಬರಿಗೂ ಈ ಮತ ಬಂಧನ ಕಟ್ಟಲಾಯಿತು.ಇದೇ ಏಪ್ರಿಲ್ 23 ರಂದು ಮೂರನೆಯ ಹಂತದ ಮತದಾನ ನಡೆಯಲಿದ್ದು,ಆಗ ಎಲ್ಲರೂ ಕಡ್ಡಾಯ ವಾಗಿ ಮತದಾನ ಮಾಡುತ್ತೇನೆ ಎಂದು ಪ್ರತಿಜ್ಞೆ ವಿಧಿ ಭೋದಿಸಲಾಯಿತು.
ಅಲ್ಲಿಯವರೆಗೆ ಕೈ ಯಲ್ಲಿ ಕಟ್ಟಿದ್ದನ್ನು,ಬಿಚ್ಚದೇ ಹಾಗೆ ಇರಬೇಕು.ಈ ಮತ ರಕ್ಷೆ ಕೈಯಲ್ಲಿ ಇದ್ದರೆ ಮತದಾನ ಮಾಡುವಂತೆ ಪ್ರೇರಣೆ ಸಿಗಲಿದೆ.ಹೀಗಾಗಿ ಇದನ್ನು ಬಿಚ್ಚಬಾರದು ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಹಾಗೂ ಯುವಕರಿಗೆ ಮನವಿ ಮಾಡಿಕೊಂಡರು. ಇದು ಅಲ್ಲದೆ ಧಾರವಾಡ ದ ಹಾಸ್ಯ ಕಲಾವಿದ ಮೊಬೈಲ್ ಮಲ್ಲಪ್ಪ,ಅವರಿಂದ ಹಾಸ್ಯ ಏರ್ಪಡಿಸಿ ಮತದಾನ ಮಾಡುವಂತೆ ಹಾಸ್ಯ ದಲ್ಲಿಯೇ ಹೇಳಲಾಯಿತು.Conclusion:ಆನಂದ
ಈ ಟಿವಿ,ಭಾರತ,ಬಾಗಲಕೋಟೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.