ETV Bharat / state

ಮದ್ಯ, ಮಾಂಸಕ್ಕಿಲ್ಲ ಜಾಗ... ಈ ಜಾತ್ರೆಯ ತುಂಬ ಘಮ ಘಮಿಸುತ್ತೆ ಹೋಳಿಗೆ ಶೀಕರಣಿ - undefined

ಬಾದಾಮಿ ತಾಲೂಕಿನ ತಿಮ್ಮ ಸಾಗರದಲ್ಲಿ ಮೂರು ವರ್ಷಕ್ಕೊಮ್ಮೆ ಜರುಗುವ ದ್ಯಾಮವ್ವ ದೇವಿಯ ಜಾತ್ರೆಯಲ್ಲಿ, ದೇವಿಗೆ ಹೋಳಿಗೆ ಮತ್ತು ಮಾವಿನ ಹಣ್ಣಿನ ಶೀಕರಣೆ ಮಾಡಿ ನೈವೇದ್ಯ ಸಲ್ಲಿಸುವುದು ವಿಶೇಷವಾಗಿದೆ. ಇಲ್ಲಿ ದೇವಿಗೆ ಅದೇ ಶ್ರೇಷ್ಠ ಅನ್ನೋದು ಜನರ ನಂಬಿಕೆ.

ದ್ಯಾಮವ್ವ ದೇವಿಯ ಜಾತ್ರೆ
author img

By

Published : Jun 13, 2019, 10:13 AM IST

Updated : Jun 13, 2019, 12:31 PM IST

ಬಾಗಲಕೋಟೆ: ಕೆಲ ದೇವಿ ಜಾತ್ರೆಗಳಲ್ಲಿ ಪ್ರಾಣಿ ಬಲಿ, ಮದ್ಯ ಸೇವನೆಯಂತಹ ಅನಾಚಾರಗಳು ಕಂಡುಬರುತ್ತವೆ. ಆದ್ರೆ, ಈ ಊರಿನಲ್ಲಿ ನಡೆಯುವ ದೇವಿ ಜಾತ್ರೆ ತುಂಬ ವಿಶಿಷ್ಟತೆಯಿಂದ ಕೂಡಿದೆ.

ಬಾದಾಮಿ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ದೇವಿಯ ಜಾತ್ರೆ ಈ ಬಾರಿ ವಿಶೇಷವಾಗಿ ಎಲ್ಲರ ಗಮನ ಸೆಳೆದಿದೆ. ಪ್ರಾಣಿ ಬಲಿಯಂತಹ ಪದ್ಧತಿ ಇಲ್ಲದಿರುವುದು ಜಾತ್ರೆಯ ವಿಶೇಷತೆ. ಹೋಳಿಗೆ ಹಾಗೂ ಮಾವಿನಹಣ್ಣಿನ ಶೀಕರಣೆ ಊರಿನ ತುಂಬೆಲ್ಲ ಘಮ ಘಮಿಸುತ್ತದೆ. ಐದು ಕ್ವಿಂಟಾಲ್ ಬೇಳೆಯಿಂದ ಹೋಳಿಗೆ ಹಾಗೂ ಐದು ಕ್ವಿಂಟಾಲ್ ಮಾವಿನ ಹಣ್ಣಿನಿಂದ ಶೀಕರಣೆ ಮಾಡಿ ಬರುವ ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ.

ದ್ಯಾಮವ್ವ ದೇವಿಯ ಜಾತ್ರೆ

ಇನ್ನು ಜಾತ್ರೆಯ ಸಮಯದಲ್ಲಿ ದೇವಿ ಗರ್ಭ ಗುಡಿಯಲ್ಲಿ ಕುಳಿತುಕೊಳ್ಳದೆ, ಇಡೀ ಊರಿನಾದ್ಯಂತ ಸಂಚರಿಸುತ್ತಾಳೆ. ಭಕ್ತರ ಮನೆ ಮನೆಗೆ ಹೋಗಿ ಉಡಿ ತುಂಬಿಸಿಕೊಳ್ಳುತ್ತಾಳೆ. ದೇವಿಯನ್ನು ಹೊತ್ತುಕೊಂಡು ಬರುವ ನಾಲ್ವರ ಮೇಲೆ ದೇವಿಯು ಅವತಾರ ತಾಳಿ ತಾನು ಎಲ್ಲಿಗೆ ಹೋಗಬೇಕು, ಯಾವ ಭಕ್ತರ ಮನೆಗೆ ಹೋಗಿ ಉಡಿ ತುಂಬಿಸಿಕೊಳ್ಳಬೇಕು ಅನ್ನಿಸುತ್ತದೆಯೋ ಅಲ್ಲಿಗೆ ಹೋಗಿ ಪೂಜೆ ಮಾಡಿಸಿಕೊಳ್ಳುತ್ತಾಳೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ.

ಇನ್ನು ಈ ದ್ಯಾಮವ್ವ ದೇವಿಗೆ ಹೂವಿನ ಹಾರದ ಜೊತೆ ಗರಿ ಗರಿ ನೋಟಿನ ಕಂತೆಗಳ ಹಾರವನ್ನೂ ಹಾಕಲಾಗುತ್ತದೆ. ಫಲ-ಪುಷ್ಪ ಸೇರಿದಂತೆ ಇತರ ಸಾಮಗ್ರಿಗಳನ್ನು ಭಕ್ತರು ನೀಡಿ, ತಮ್ಮ ಹರಕೆ ತೀರಿಸುತ್ತಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ದೇವಿಯ ಜಾತ್ರೆ ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿರುತ್ತದೆ.

Intro:Anchor

Body:ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ದೇವಿಯ ಜಾತ್ರೆಯು ವಿಶೇಷವಾಗಿ ಗಮನ ಸೆಳೆಯುವಂತಾಗಿದೆ.
ಮೂರು ವರ್ಷಕ್ಕೊಮ್ಮೆ ಗ್ರಾಮ ದೇವತೆಯ ಜಾತ್ರೆ ನಡೆಯುತ್ತದೆ ಅಂದರೆ ಅಲ್ಲಿ ಪ್ರಾಣಿ ಹಿಂಸೆ ಇರುತ್ತದೆ. ಆದರೆ ಈ ಗ್ರಾಮದಲ್ಲಿ ನಡೆಯುವ ದ್ಯಾಮವ್ವ ದೇವಿಯ ಜಾತ್ರೆಯಲ್ಲಿ ಸಿಹಿ ಊಟ ಅಂದರೆ ಹೋಳಿಗೆ ಹಾಗೂ ಮಾವಿನಹಣ್ಣಿನ ಶೀಕರಣೆ.ಐದು ಕ್ವಿಂಟಲ್ ಬೆಳೆ ಯಿಂದ ಹೋಳಿಗೆ ಹಾಗೂ ಐದು ಕ್ವಿಂಟಲ್ ಮಾವಿನ ಹಣ್ಣು ನಿಂದ ಶೀಕರಣೆ ಮಾಡಿ ಬಂದಿರುವ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪ್ರಸಾದ ಎಂದು ಸೇವನೆ ಮಾಡುತ್ತಾರೆ.
ದೇವಿಯ ಜಾತ್ರೆಯ ಅಂಗವಾಗಿ ಬಸವ ಜಯಂತಿ ದಿನದಂದಲೇ ದೇವಿಯ ಮೂರ್ತಿಗೆ ಅಲಂಕಾರ ಮಾಡುವುದಕ್ಕೆ ಪೇಂಟಿಂಗ್ ಮಾಡಲಾಗುತ್ತದೆ.ಜಾತ್ರೆಯ ಸಮಯದಲ್ಲಿ ದೇವಿಯು ಗರ್ಭ ಗುಡಿಯಲ್ಲಿ ಕುಳಿತುಕೊಳ್ಳದೆ,ಇಡೀ ಊರು ತುಂಬ ಸಂಚಾರ ಮಾಡುತ್ತಾಳೆ.ಭಕ್ತರ ಮನೆ ಮನೆಗೆ ಸಂಚಾರ ಉಡಿ ತುಂಬಿಸಿಕೊಳ್ಳುತ್ತಾಳೆ.ದೇವಿಯನ್ನು ಹೊತ್ತುಕೊಂಡು ನಾಲ್ವರು ಮೇಲೆ ದೇವಿಯು ಅವತಾರ ತಾಳಿ ತನಗೆ ಎಲ್ಲಿಗೆ ಹೋಗಬೇಕು,ಯಾವ ಭಕ್ತರ ಮನೆಗೆ ಹೋಗಿ ಉಡಿ ತುಂಬಿಸಿಕೊಳ್ಳಬೇಕು.ಆ ಭಕ್ತರ ಮನೆಗೆ ಹೋಗಿ ಪೂಜೆ,ಪುನಸ್ಕಾರ ಮಾಡಿಸಿಕೊಳ್ಳುತ್ತಾಳೆ ಎಂದು ಭಕ್ತರ ನಂಬಿಕೆ.
ದೇವಿಗೆ ಹೊಸ ಹೂಸ ನೋಟಿನ ಕಂತೆಗಳ ಹಾರ,ಹೂವಿನ ಹಾರ,ಹಣ್ಣು ಹಂಪಲ ಸೇರಿದಂತೆ ಇತರ ಸಾಮಗ್ರಿಗಳನ್ನು ಭಕ್ತರು ನೀಡಿ,ತಮ್ಮ ಹರಕೆಯನ್ನು ಇಡೆರೀಸಿಕೊಳ್ಳುತ್ತಾರೆ.ಈ ದೇವಿಗೆ ಭಕ್ತರು ತಮ್ಮ ಕಷ್ಟಗಳನ್ನು ಬಗೆಹರಿಸುವಂತೆ ಬೇಡಿಕೊಂಡರೆ,ಮೂರು ವರ್ಷದಲ್ಲಿ ಎಲ್ಲ ಸಮಸ್ಯೆ ಬಗೆ ಹರಿಸುತ್ತಾಳೆ ಎಂದು ಭಕ್ತರ ಅಭಿಪ್ರಾಯ ವಾಗಿದೆ.
ಕೆಲ ಭಕ್ತರು ತಮ್ಮ ಹರಕೆ ಎಂದು 48 ಗಂಟೆಗಳ ಕಾಲ ಅಂದರೆ ಎರಡು ದಿನ ಒಂದು ಹನಿ ನೀರು ಸಹ ಹಾಕಿಕೊಳ್ಳದ ಕಠಿಣ ವೃತ್ತ ದ ಉಪವಾಸ ಆಚರಣೆ ಮಾಡಿ,ಹರಕೆಯನ್ನು ಪೂರೈಸುತ್ತಾರೆ.
ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆಯ ಜಾತ್ರೆ ಅಂದರೆ ಪ್ರಾಣಿಗಳ ರಕ್ತಪಾತ ಇರುತ್ತದೆ.ಆದರೆ ಇಲ್ಲಿ ಮಾತ್ರ ಸಹಿ ಊಟ,ಉತ್ತರ ಕರ್ನಾಟಕ ಖ್ಯಾತ ಸಿಹಿ ಊಟ ಹೋಳಿಗೆ,ಶೀಕರಣೆ ಮಾಡುವ ಮೂಲಕ ಗಮನ ಸೆಳೆಯುತ್ತದೆ.ಸಿಹಿ ಊಟ ದೇವತೆ ಇರುವುದರಿಂದ ಈ ಭಾರಿ ಮಳೆ,ಬೆಳೆ ಚನ್ನಾಗಿ ಆಗುತ್ತದೆ ಎಂದು ಭಕ್ತರ ನಂಬಿಕೆ ಆಗಿದೆ.

Conclusion:ಆನಂದ
ಈ ಟವಿ,ಭಾರತ್,ಬಾಗಲಕೋಟೆ..
Last Updated : Jun 13, 2019, 12:31 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.