ETV Bharat / state

ಜಾತಿ ವ್ಯವಸ್ಥೆ ನಿರ್ಮೂಲನೆಗೆ ಬಾದಾಮಿಯಲ್ಲಿ ನೀತಿ ಪಾಠ ಮಾಡಿದ ಸಿದ್ದರಾಮಯ್ಯ - ವಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿ ಪ್ರವಾಸ

ಒಂದು ವರ್ಗದ ಜನ ಬರೀ ನಮ್ಮ ಧರ್ಮ ನಮ್ಮ ಧರ್ಮ ಅಂತಾರೆ ಎಂದು ಹಿಂದು ಸಂಘಟನೆ ಹಾಗೂ ಬಿಜೆಪಿ ಪಕ್ಷಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು. ನಿಮ್ಮ ಧರ್ಮ ಇಟ್ಕೊಳ್ಳಿ. ಆದ್ರೆ, ಬೇರೆ ಧರ್ಮದ ವಿರೋಧ ಮಾಡಬೇಡಿ. ಸಂವಿಧಾನದಲ್ಲಿ ಪರಧರ್ಮದ ಸಹಿಷ್ಣುತೆ ಇರಬೇಕು ಎಂದಿದ್ದಾರೆ. ಅದು ಇಲ್ಲದೇ ಹೋದರೆ ಸರ್ವಧರ್ಮ ಸಮನ್ವಯ ಆಗೋದು ಕಷ್ಟ ಆಗುತ್ತದೆ..

siddaramaiah
ಜಾತಿ ವ್ಯವಸ್ಥೆಯ ನೀತಿ ಪಾಠ ಮಾಡಿದ ಸಿದ್ದರಾಮಯ್ಯ
author img

By

Published : Jul 13, 2021, 1:10 PM IST

Updated : Jul 13, 2021, 2:39 PM IST

ಬಾಗಲಕೋಟೆ : ವಿಪಕ್ಷ ನಾಯಕ ಸಿದ್ದರಾಮಯ್ಯನವರ ಬಾದಾಮಿ ಕ್ಷೇತ್ರದ ಎರಡನೇ ದಿನದ ಪ್ರವಾಸ ಮುಂದುವರೆದಿದೆ. ಈ ವೇಳೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣನವರ ವಚನ ಹೇಳುತ್ತಾ, ಜಾತಿ ವ್ಯವಸ್ಥೆಯ ನೀತಿ ಪಾಠ ಹಾಗೂ ಮೌಢ್ಯತೆ ಬಗ್ಗೆ ಬೋಧನೆ ಮಾಡಿದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಓದಿದವರು ದಯಮಾಡಿ ಜಾತಿ ಮಾಡಬೇಡಿ. ನಾವು ಯಾವ ಜಾತಿಗೆ ಸೇರಬೇಕು ಎಂದು ಅರ್ಜಿ ಹಾಕಿ ಹುಟ್ಟಿರುವುದಿಲ್ಲ. ಆಕಸ್ಮಿಕವಾಗಿ ಜಾತಿ ವ್ಯವಸ್ಥೆಯಲ್ಲಿ ಹುಟ್ಟಿದ್ದೇವೆ. ಹಾಗಂತಾ, ಅದನ್ನೇ ಹಣೆಪಟ್ಟಿ ಕಟ್ಟಿಕೊಂಡು ಸಾಯಬೇಕಿಲ್ಲ ಎಂದರು.

ಜಾತಿ ರಹಿತ ಸಮಾಜ ನಿರ್ಮಾಣ ಮಾಡಬೇಕು ಎಂಬುದು ಡಾ. ಬಿ ಆರ್‌ ಅಂಬೇಡ್ಕರ್​ ಅವರ ಆಶಯವಾಗಿತ್ತು. ಸರ್ವಧರ್ಮಗಳ ಸಮನ್ವಯ ಇರುವ ಸಮಾಜ ಆಗಬೇಕು. ಆದರೆ, ಜಾತಿ ಹೋಗದೇ ಸಮನ್ವಯ ಬರೋದಿಲ್ಲ. ಸರಿಯಾದ ಜ್ಞಾನ ಬೆಳೆಯದೇ ಇನ್ನೊಂದು ಧರ್ಮದ ಬಗ್ಗೆ ಸಹಿಷ್ಣುತೆ ಬರಲ್ಲ ಎಂದರು.

ಒಂದು ವರ್ಗದ ಜನ ಬರೀ ನಮ್ಮ ಧರ್ಮ ನಮ್ಮ ಧರ್ಮ ಅಂತಾರೆ ಎಂದು ಹಿಂದು ಸಂಘಟನೆ ಹಾಗೂ ಬಿಜೆಪಿ ಪಕ್ಷಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು. ನಿಮ್ಮ ಧರ್ಮ ಇಟ್ಕೊಳ್ಳಿ. ಆದ್ರೆ, ಬೇರೆ ಧರ್ಮದ ವಿರೋಧ ಮಾಡಬೇಡಿ. ಸಂವಿಧಾನದಲ್ಲಿ ಪರಧರ್ಮದ ಸಹಿಷ್ಣುತೆ ಇರಬೇಕು ಎಂದಿದ್ದಾರೆ. ಅದು ಇಲ್ಲದೇ ಹೋದರೆ ಸರ್ವಧರ್ಮ ಸಮನ್ವಯ ಆಗೋದು ಕಷ್ಟ ಆಗುತ್ತದೆ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ಇನ್ನು, ಕೆರೂರು ಕೆಐಬಿಡಿಯಿಂದ 29 ಎಕರೆ ಜಮೀನು ತೆಗೆದುಕೊಂಡು ನಾಳೆಯಿಂದ ಕಾಲೇಜು ಕಟ್ಟಡ ಪ್ರಾರಂಭವಾಗಲಿದೆ. ಭೂಸೇನಾ ನಿಗಮದವರು ಸೋಮಾರಿಗಳಾಗಿದ್ದಾರೆ. ಕಳೆದ ಸಭೆಯಲ್ಲಿ ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದೇನೆ. ಹೀಗಾಗಿ, ನಾಳೆಯಿಂದ ಹೊಸ ಕಟ್ಟಡ ಗುಣಮಟ್ಟದ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದರು.

Last Updated : Jul 13, 2021, 2:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.