ETV Bharat / state

ಬಿಜೆಪಿಯನ್ನ ಗೋವಿಂದಾ ಗೋವಿಂದ ಮಾಡಬೇಕು : ಸಿದ್ದರಾಮಯ್ಯ - ಬಿಜೆಪಿಯನ್ನ ಗೋವಿಂದಾ ಗೋವಿಂದ ಮಾಡಬೇಕು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯನವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

siddaramaiah-speech-at-bagalkote
ಬಿಜೆಪಿ ಪಕ್ಷವನ್ನು ಗೋವಿಂದಾ ಗೋವಿಂದ ಮಾಡಬೇಕು : ಸಿದ್ದರಾಮಯ್ಯ
author img

By

Published : Sep 28, 2022, 4:49 PM IST

ಬಾಗಲಕೋಟೆ : ಬಿಜೆಪಿ ಎಂದರೆ ಸುಳ್ಳಿನ ಫ್ಯಾಕ್ಟರಿ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಅವರ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಭಾಗವಹಿಸಿದ್ದ ಸಿದ್ದರಾಮಯ್ಯ ರಾಜ್ಯ ಸರ್ಕಾರದ ತೀವ್ರ ವಾಗ್ದಾಳಿ ನಡೆಸಿದರು.

ನಮ್ಮ ಕಾಂಗ್ರೆಸ್ ಪಕ್ಷ ತಂದಿರುವ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿಲ್ಲ. ಶಾದಿ ಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ವಿವಿಧ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಬಿಜೆಪಿ ಅಂದರೆ ಸುಳ್ಳು ಹೇಳುವ ಪಕ್ಷ, ಸುಳ್ಳಿನ ಫ್ಯಾಕ್ಟರಿಯಾಗಿದೆ. ನರೇಂದ್ರ ಮೋದಿಯವರು ಅಚ್ಚೇ ದಿನ್​ ಆಯೇಗಾ ಎಂದು ಹೇಳಿದ್ದರು. ಅಚ್ಚೇ ದಿನ ಬಂತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಜೆಪಿ ಪಕ್ಷವನ್ನು ಗೋವಿಂದಾ ಗೋವಿಂದ ಮಾಡಬೇಕು : ಸಿದ್ದರಾಮಯ್ಯ

ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಾರೇ ಎಂಜಲು ತಿಂದರೂ ಅದು ಎಂಜಲೇ, ಯಾರೇ ಲಂಚ ತಿಂದರೂ ಅದು ಲಂಚವೇ, ಯಾವ ಜಾತಿಯಾದರೂ ಏನು ಸೂಕ್ತ ತನಿಖೆ ಮಾಡಿಸಿ, ಸುಳ್ಳು ಆರೋಪ ಮಾಡಬೇಡಿ ಎಂದು ಟೀಕಿಸಿದರು. ಬೊಮ್ಮಾಯಿಯವರು ಧಮ್​ ಇದ್ದರೆ, ತಾಕತ್​ ಇದ್ದರೆ ಎಂದು ಹೇಳುತ್ತಾರೆ. ನನ್ನನ್ನು ಗುರಿಯಾಗಿಸಿ ಮಾತನಾಡುತ್ತಾರೆ. ಬಿಜೆಪಿಯವರಿಗೆ ನನ್ನನ್ನು ಕಂಡರೇ ಭಯ, ಅದಕ್ಕೆ ಎಲ್ಲರೂ ರಣಹದ್ದು ತರ ನನ್ನ ಮೇಲೆ ಮುಗಿ ಬೀಳುತ್ತಾರೆ. ಆದರೆ ಇದಕ್ಕೆಲ್ಲ ಹೆದರುವ ಮಗ ನಾನಲ್ಲ ಎಂದು ಸಿದ್ದರಾಮಯ್ಯ ಟಾಂಗ್​ ನೀಡಿದರು.

ನಿಮ್ಮ ಉತ್ಸಾಹ ನೋಡಿದರೆ 2023 ರಲ್ಲಿ ಮುಧೋಳ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆದ್ಧೇ ಗೆಲ್ಲುತ್ತಾರೆ. ನವೆಂಬರ್ ತಿಂಗಳಿನಲ್ಲಿ ನಮ್ಮ ಅಭ್ಯರ್ಥಿ ಯಾರು ಎಂಬುದು ಅಂತಿಮವಾಗಲಿದೆ.ಆಗ ಇನ್ನೊಮ್ಮೆ ಬಂದು ರಾಜಕೀಯ ಭಾಷಣ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಈ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೋವಿಂದಾ ಗೋವಿಂದ ಮಾಡಬೇಕು. ಜೊತೆಗೆ ಪೆಟ್ರೋಲ್, ಡಿಸೇಲ್,ಗ್ಯಾಸ್,ವಿದ್ಯುತ್, ಅಡುಗೆ ಎಣ್ಣೆ ಬೆಲೆ ಏನಾಗಿದೆ ಗೋವಿಂದ ಗೋವಿಂದಾ ಆಗಿದೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ದೇಶದಲ್ಲಿ ಪಿಎಫ್​ಐ ಶಾಶ್ವತವಾಗಿ ಬ್ಯಾನ್ ಮಾಡಬೇಕು: ಬಸನಗೌಡ ಪಾಟೀಲ್ ಯತ್ನಾಳ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.