ಬಾಗಲಕೋಟೆ: ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕೊಂಕಣಕೊಪ್ಪ ಗ್ರಾಮಸ್ಥರಿಂದ ಹಲ್ಲೆಗೆಗೊಳಗಾಗಿದ್ದ ಆಸ್ಟ್ರೇಲಿಯಾ ಪ್ರಜೆ ವಿಲಿಯಂ, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಗ್ರಾಮದ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವಿಲಿಯಂ, ಎಸ್.ನಿಜಲಿಂಗಪ್ಪ ಹಾಗೂ ಹಾನಗಲ್ ಕುಮಾರಸ್ವಾಮಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,
ಈ ಕುರಿತು ಯಾವುದೇ ಪ್ರಚಾರಕ್ಕೆ ಅವಕಾಶ ಕೊಡುವುದು ಬೇಡ ಎಂದು ವಿನಂತಿ ಮಾಡಿಕೊಂಡಿದ್ದಾನೆ.
ತಲೆನೋವಾದ ಪ್ರಕರಣ: ಹಲ್ಲೆ ಪ್ರಕರಣವು ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ತಲೆ ನೋವಾಗಿದೆ. ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಪೊಲೀಸ್ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಲಾಗಿದೆ. ವಿಲಿಯಂ ಏನೇ ಕೇಳಿದರೂ ಪೋಲಿಸರೆ ತಂದು ಕೊಡಬೇಕಾಗಿದೆ. ಫೋಟೋ, ವಿಡಿಯೋ ಮಾಡಲು ನಿರಾಕರಿಸುತ್ತಿದ್ದು, ಈ ಕುರಿತು ಪ್ರಚಾರ ಬೇಡ ಎನ್ನುತ್ತಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿದಕೊಂಡ ವಿಲಿಯಂ, ನನ್ನಿಂದ ಗ್ರಾಮದ ಜನತೆಗೆ ತೊಂದರೆ ಉಂಟಾಗಿಲ್ಲ ಎನ್ನುತ್ತಿದ್ದಾನೆ. ಗ್ರಾಮದ ಕೆಲ ಯುವಕರು ಊರು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.