ಬಾಗಲಕೋಟೆ: ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಗಣಿತ ವಿಷಯ ಪ್ರಶ್ನೆಪತ್ರಿಕೆ ಕನ್ನಡದಲ್ಲಿ ಬಂದಿರುವುದರಿಂದ ವಿದ್ಯಾರ್ಥಿಗಳು ಪರದಾಡಿದ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದ ಶಾಲೆಯಲ್ಲಿ ನಡೆದಿದೆ.
ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಗಣಿತ ವಿಷಯ ಪ್ರಶ್ನೆಪತ್ರಿಕೆ ಕನ್ನಡದಲ್ಲಿ ಬಂದಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಯಿತು. ಪೂರ್ಣ ಪ್ರಜ್ಞಾ ಇಂಗ್ಲಿಷ್ ಮಾಧ್ಯಮ ಹೈಸ್ಕೂಲ್ನಲ್ಲಿ ಗಣಿತ ವಿಷಯ ಪರೀಕ್ಷೆಗೆ ಇಂಗ್ಲಿಷ್ ಮಾಧ್ಯಮದ ಪ್ರಶ್ನೆಪ್ರತಿಕೆ ನೀಡಬೇಕಾಗಿತ್ತು. ಆದರೆ ಕನ್ನಡದಲ್ಲಿದ್ದ ಪ್ರಶ್ನೆಪತ್ರಿಕೆ ಬಂದಿರುವ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಹ ತಬ್ಬಿಬ್ಬಾದರು.
ಕಳಿಸಲಾಗಿದ್ದ ಕವರ್ನಲ್ಲಿ ಇಂಗ್ಲಿಷ್ ಮಾಧ್ಯಮ ಅಂತ ಬರೆಯಲಾಗಿದೆ. ಆದರೆ ಒಳಗಡೆ ಮಾತ್ರ ಕನ್ನಡದಲ್ಲಿ ಪ್ರಶ್ನೆಗಳಿರುವುದು ಆಶ್ಚರ್ಯ ಮೂಡಿಸಿದೆ. ಇದರಿಂದ ಕನ್ನಡ ಬಾರದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ನೋಡಿ ಕಂಗಲಾಗಿದ್ದರು. ನಂತರ ಶಿಕ್ಷಕರು ಕನ್ನಡವನ್ನು ಇಂಗ್ಲಿಷ್ ಭಾಷಾಂತರ ಮಾಡಿ ತಿಳಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಕ್ಷೇತ್ರಾಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.