ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಎರಡು ಹಂತದಲ್ಲಿ ಮತದಾನ ನಡೆದಿದ್ದು, ಡಿಸೆಂಬರ 30 ರಂದು ಬೆಳಗ್ಗೆ 8 ರಿಂದ ಜರುಗಲಿರುವ ಮತ ಎಣಿಕೆಗೆ 9 ತಾಲೂಕು ಕೇಂದ್ರಗಳಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಮೊದಲ ಹಂತ ಹಾಗೂ ಎರಡನೇ ಹಂತ ಸೇರಿ ಒಟ್ಟು 191 ಗ್ರಾಮ ಪಂಚಾಯಿತಿಗಳ 1038 ಕ್ಷೇತ್ರಗಳ 2777 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ. ಮತ ಎಣಿಕೆ ಜಿಲ್ಲೆಯ 9 ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಮತ ಎಣಿಕೆಗೆ ಒಟ್ಟು 167 ಕೊಠಡಿಗಳಲ್ಲಿ ಒಟ್ಟು 444 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. 40 ಟೇಬಲ್‍ಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ಟೇಬಲ್‍ಗೆ ಒಬ್ಬ ಮೇಲ್ವಿಚಾರಕ ಮತ್ತು ಇಬ್ಬರು ಎಣಿಕೆ ಸಹಾಯಕರು ಸೇರಿ ಒಟ್ಟು 1,452 ಜನ ನೇಮಕ ಮಾಡಲಾಗಿದೆ.
ಬಾಗಲಕೋಟೆ ತಾಲೂಕಿನಲ್ಲಿ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರದಲ್ಲಿ 28 ಗ್ರಾಮ ಪಂಚಾಯಿತಿಗಳ 144 ಕ್ಷೇತ್ರಗಳ 369 ಸದಸ್ಯ ಸ್ಥಾನಗಳ ಮತ ಎಣಿಕೆ ನಡೆಯಲಿದೆ. ಒಟ್ಟು 13 ಕೊಠಡಿಗಳಲ್ಲಿ 58 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 4 ಟೇಬಲ್‍ಗಳನ್ನು ಕಾಯ್ದಿರಿಸಲಾಗಿದೆ. 62 ಮೇಲ್ವಿಚಾರಕರು ಮತ್ತು 124 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.
ಬಾದಾಮಿ ತಾಲೂಕಿನಲ್ಲಿ ವೀರಪುಲಕೇಶಿ ವಿದ್ಯಾವರ್ಧಕ ಸಂಘದಲ್ಲಿ ಮತ ಎಣಿಕೆ ನಡೆಯಲಿದೆ. 30 ಗ್ರಾಮ ಪಂಚಾಯಿತಿಗಳ 174 ಕ್ಷೇತ್ರಗಳ 426 ಸ್ಥಾನಗಳ ಮತ ಎಣಿಕೆಗೆ 30 ಕೊಠಡಿಗಳಲ್ಲಿ 90 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 9 ಟೇಬಲ್‍ಗಳನ್ನು ಕಾಯ್ದಿರಿಸಲಾಗಿದೆ. 99 ಮೇಲ್ವಿಚಾರಕರು ಮತ್ತು 198 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.
ಗುಳೇದಗುಡ್ಡ ತಾಲೂಕಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದ್ದು, 12 ಗ್ರಾಮ ಪಂಚಾಯಿತಿಗಳ 48 ಕ್ಷೇತ್ರಗಳ 124 ಸ್ಥಾನಗಳ ಮತ ಎಣಿಕೆಗೆ 12 ಕೊಠಡಿಗಳಲ್ಲಿ 20 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 3 ಟೇಬಲ್‍ಗಳನ್ನು ಕಾಯ್ದಿರಿಸಲಾಗಿದೆ. 23 ಮೇಲ್ವಿಚಾರಕರು ಮತ್ತು 46 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.
ಹುನಗುಂದ ತಾಲೂಕಿನಲ್ಲಿ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದ್ದು, 16 ಗ್ರಾಮ ಪಂಚಾಯಿತಿಗಳ 84 ಕ್ಷೇತ್ರಗಳ 211 ಸ್ಥಾನಗಳ ಮತ ಎಣಿಕೆಗೆ 13 ಕೊಠಡಿಗಳಲ್ಲಿ 31 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 2 ಟೇಬಲ್‍ಗಳನ್ನು ಕಾಯ್ದಿರಿಸಲಾಗಿದೆ. 33 ಮೇಲ್ವಿಚಾರಕರು ಮತ್ತು 66 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.
ಇಲಕಲ್ಲ ತಾಲೂಕಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. 16 ಗ್ರಾಮ ಪಂಚಾಯಿತಿಗಳ 102 ಕ್ಷೇತ್ರಗಳ 250 ಸ್ಥಾನಗಳ ಮತ ಎಣಿಕೆಗೆ 14 ಕೊಠಡಿಗಳಲ್ಲಿ 41 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 3 ಟೇಬಲ್‍ಗಳನ್ನು ಕಾಯ್ದಿರಿಸಲಾಗಿದೆ. 44 ಮೇಲ್ವಿಚಾರಕರು ಮತ್ತು 88 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.
ಜಮಖಂಡಿ ತಾಲೂಕಿನಲ್ಲಿ ಪಿ.ಬಿ.ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. 26 ಗ್ರಾಮ ಪಂಚಾಯಿತಿಗಳ 152 ಕ್ಷೇತ್ರಗಳ 425 ಸ್ಥಾನಗಳ ಮತ ಎಣಿಕೆಗೆ 25 ಕೊಠಡಿಗಳಲ್ಲಿ 60 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 5 ಟೇಬಲ್‍ಗಳನ್ನು ಕಾಯ್ದಿರಿಸಲಾಗಿದೆ. 65 ಮೇಲ್ವಿಚಾರಕರು ಮತ್ತು 130 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.
ಮುಧೋಳ ತಾಲೂಕಿನಲ್ಲಿ ಆರ್.ಎಂ.ಜಿ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. 22 ಗ್ರಾಮ ಪಂಚಾಯಿತಿಗಳ 127 ಕ್ಷೇತ್ರಗಳ 361 ಸ್ಥಾನಗಳ ಮತ ಎಣಿಕೆಗೆ 22 ಕೊಠಡಿಗಳಲ್ಲಿ 50 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 5 ಟೇಬಲ್‍ಗಳನ್ನು ಕಾಯ್ದಿರಿಸಲಾಗಿದೆ. 55 ಮೇಲ್ವಿಚಾರಕರು ಮತ್ತು 110 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.
ಬೀಳಗಿ ತಾಲೂಕಿನಲ್ಲಿ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. 24 ಗ್ರಾಮ ಪಂಚಾಯಿತಿಗಳ 111 ಕ್ಷೇತ್ರಗಳ 300 ಸ್ಥಾನಗಳ ಮತ ಎಣಿಕೆಗೆ 21 ಕೊಠಡಿಗಳಲ್ಲಿ 56 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 6 ಟೇಬಲ್‍ಗಳನ್ನು ಕಾಯ್ದಿರಿಸಲಾಗಿದೆ. 62 ಮೇಲ್ವಿಚಾರಕರು ಮತ್ತು 124 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಜನತಾ ಶಿಕ್ಷಣ ಸಂಸ್ಥೆ, ಎಸ್.ಟಿ.ಸಿ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. 17 ಗ್ರಾಮ ಪಂಚಾಯಿತಿಗಳ 96 ಕ್ಷೇತ್ರಗಳ 311 ಸ್ಥಾನಗಳ ಮತ ಎಣಿಕೆಗೆ 17 ಕೊಠಡಿಗಳಲ್ಲಿ 38 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 3 ಟೇಬಲ್‍ಗಳನ್ನು ಕಾಯ್ದಿರಿಸಲಾಗಿದೆ. 41 ಮೇಲ್ವಿಚಾರಕರು ಮತ್ತು 82 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.