ಬಾಗಲಕೋಟೆ: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರೇ ಅಲ್ಲ. ರೈತರ ಚಳವಳಿಯ ಮುಖವಾಡದಲ್ಲಿ ಅಲ್ಲಿ ಇನ್ನೇನೋ ನಡೆಯುತ್ತಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ಶ್ರೀಗಳು ತಿಳಿಸಿದ್ದಾರೆ.
ಮೋದಿಜಿಯವರು ಪ್ರತಿನಿತ್ಯ ಮಾತುಕತೆಗೆ ಬನ್ನಿ ಅಂತ ರೈತರನ್ನು ಕರೆಯುತ್ತಿದ್ದಾರೆ. ಅವರು ಮಾತುಕತೆಗೆ ಬಾರದೆ ಬರಿ ಜೈಲಲ್ಲಿ ಇರೋರನ್ನು ಬಿಡುಗಡೆ ಮಾಡಿ ಅಂತಿದ್ದಾರೆ. ಪ್ರತಿಭಟನೆ ಟ್ರ್ಯಾಕ್ ತಪ್ಪಿ ಹೋಗುತ್ತಿದೆ. ಹಾಗಾಗಿ ಅದಕ್ಕೆ ನಮ್ಮ ಪರಿಪೂರ್ಣ ಸಹಮತವಿಲ್ಲ. ರೈತರೇ ಚಳವಳಿ ಮಾಡುತ್ತಿದ್ದಾರೆ ಎಂಬ ಬಗ್ಗೆ ನಮಗೆ ಸಂಶಯವಿದೆ ಎಂದರು.
ಮಂದಿರ ನಿರ್ಮಾಣದವರೆಗೆ ಕೇಶ ತೆಗೆಯದಂತೆ ಪ್ರಧಾನಿ ಮೋದಿ ನಿರ್ಧಾರ
ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತು ಕಾರ್ಯ ಪೂರ್ಣಗೊಳ್ಳುವವರೆಗೆ ಕೇಶ ತೆಗೆಯುವುದಿಲ್ಲ ಅಂತ ನಿರ್ಧಾರ ಮಾಡಿರಬಹುದು. ಏಕೆಂದರೆ ನಮ್ಮಲ್ಲಿ ನೈತಿಕ ನೆಲೆಯಲ್ಲಿ ಮಂದಿರ ಆಗುವ ತನಕ ಕೇಶಾದಿಗಳನ್ನು ತೆಗೆಯೋದಿಲ್ಲ. ಪ್ರಾಯಶಃ ಮೋದಿ ಅವರು ಅದನ್ನು ಪಾಲನೆ ಮಾಡಿರಬಹುದು. ಅವರು ಆಧ್ಯಾತ್ಮಿಕವಾಗಿದ್ದರೆ ತಪ್ಪೇನಿಲ್ಲವಲ್ಲ ಎಂದು ಶ್ರೀಗಳು ತಿಳಿಸಿದರು.
ಓದಿ: ರಾಮನ ಬಂಟನಿಗೆ ಇಂದು ಹುಟ್ಟುಹಬ್ಬ ಸಂಭ್ರಮ: ವಾಯುಪುತ್ರನ ಆರಾಧನೆಯಿಂದ ಕಷ್ಟಗಳೆಲ್ಲ ದೂರ!
ರಾಮ ಮಂದಿರ ನಿರ್ಮಾಣಕ್ಕೆ ಮೂರುವರೆ ವರ್ಷ ಅವಧಿ ಬೇಕಾಗಿದ್ದು, 1,500 ಕೋಟಿ ರೂ. ಅಂದಾಜು ಬಜೆಟ್ ಮಾಡಲಾಗಿದೆ. 500 ಕೋಟಿ ರೂ. ಮಂದಿರ ನಿರ್ಮಾಣಕ್ಕೆ 1,000 ಕೋಟಿ ರೂ. ಪರಿಸರದ ಅಭಿವೃದ್ದಿ, ಯಾತ್ರಾನಿವಾಸ, ಮಾರ್ಗಗಳ ನಿರ್ಮಾಣಕ್ಕಾಗಿ ವೆಚ್ಚ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.