ಬಾಗಲಕೋಟೆ: ಬನಹಟ್ಟಿ ತಾಲೂಕಿನ ಸೈದಾಪೂರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಗಳನ್ನು ಕಳೆದುಕೊಂಡ ಕುಟುಂಬ, ತಮ್ಮ ಮಕ್ಕಳು ಸಂಗ್ರಹಿಸಿದ್ದ ಹುಂಡಿ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.
ಶ್ರೀಶೈಲ ಆದರಗಿ ಹಾಗೂ ಶಾಂತಾ ದಂಪತಿ ಕಳೆದ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ತಮ್ಮ ನಾಲ್ಕು ವರ್ಷದ ಮಗಳನ್ನು ಕಳೆದುಕೊಂಡಿದ್ದರು.
ಈ ವೇಳೆ ಮಾತನಾಡಿದ ಸ್ವಯಂ ಸೇವಕ ಈರಣ್ಣ ಬಾಣಕಾರ, ಇಂತಹ ದುಃಖದ ಸನ್ನಿವೇಷದಲ್ಲಿಯೂ ರಾಮಭಕ್ತಿ ತೋರಿದ ಆದರಗಿ ಕುಟುಂಬಕ್ಕೆ ಶ್ರೀರಾಮನ ಆಶೀರ್ವಾದ ಸದಾ ಇರಲಿ ಎಂದರು.