ETV Bharat / state

ಇರುವುದೊಂದೇ ಬೆಂಚ್​.. ನಾಲ್ವರು ಕುಳಿತರೆ ಉಳಿದವರು ನಿಂತೇ ಇರಬೇಕು... ಈ ವ್ಯವಸ್ಥೆ ಇರೋದೆಲ್ಲಿ?

ಬಾಗಲಕೋಟೆ ಜಿಲ್ಲೆ ನವನಗರದಲ್ಲಿರುವ ಮಿನಿ ವಿಧಾನಸೌಧ ಅವ್ಯವಸ್ಥೆಯ ಆಗರವಾಗಿದ್ದು, ಸರಿಯಾದ ಸೌಲಭ್ಯ ಇಲ್ಲದೇ, ಕಚೇರಿಯ ಕೆಲಸಕ್ಕೆ ಆಗಮಿಸುವ ಜನ ಪರದಾಡುವಂತಾಗಿದೆ.

ಮಿನಿ ವಿಧಾನಸೌಧ
author img

By

Published : May 4, 2019, 2:08 PM IST

ಬಾಗಲಕೋಟೆ: ಜಿಲ್ಲೆಯ ನವನಗರದಲ್ಲಿರುವ ಮಿನಿ ವಿಧಾನಸೌಧ ಅವ್ಯವಸ್ಥೆಯ ಆಗರವಾಗಿದೆ. ಸರಿಯಾದ ಸೌಲಭ್ಯ ಇಲ್ಲದೇ, ಕಚೇರಿಯ ಕೆಲಸಕ್ಕೆ ಆಗಮಿಸುವ ಜನರು ಪರದಾಡುವಂತಾಗಿದ್ದು, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರರ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ, ನೋಂದಣಿ ಕಚೇರಿ ಸೇರಿದಂತೆ, ಆಧಾರ್​ ಕಾರ್ಡ್​, ಉತಾರ್, ಮತದಾನ ಗುರುತಿನ ಚೀಟಿ ಹಾಗೂ ಪಿಂಚಣಿ ಮಾಸಾಶನಕ್ಕಾಗಿ ನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಆದರೆ, ಅವರಿಗೆ ಕುಳಿತುಕೊಳ್ಳುವುದಕ್ಕೆ ಸರಿಯಾದ ವ್ಯವಸ್ಥೆ ಸಹ ಇಲ್ಲ.

ಮಿನಿ ವಿಧಾನಸೌಧದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ಜನರು

ಒಂದು ವಿಭಾಗಕ್ಕೆ ಒಂದೇ ಬೆಂಚ್ ಹಾಕಲಾಗಿದ್ದು, ನಾಲ್ಕು ಜನ ಕುಳಿತುಕೊಂಡರೆ ಮುಗಿಯಿತು, ಉಳಿದವರು ಹಾಗೆ ನಿಲ್ಲಬೇಕು. ಶುದ್ಧ ಕುಡಿವ ನೀರಿನ ಸೌಲಭ್ಯ ಸಹ ಇಲ್ಲ. ಇನ್ನು ಶೌಚಾಲಯವಂತೂ ಇದ್ದೂ ಇಲ್ಲದಂತಾಗಿದೆ. ಶೌಚಾಲಯಕ್ಕೆ ಬೀಗ ಹಾಕಿದ್ದು, ಮಹಿಳೆಯರು ಪರದಾಡುವಂತಾಗಿದೆ.

ಪಾರ್ಕಿಂಗ್​ ವ್ಯವಸ್ಥೆ ಇಲ್ಲದೆ ಕಚೇರಿ ವಾಹನಗಳನ್ನೇ ಮರದ ಕೆಳಗೆ ನಿಲ್ಲಿಸಲಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Intro:Anchor

Body:ಬಾಗಲಕೋಟೆ ಯ ನವನಗರದಲ್ಲಿರುವ ಮಿನಿ ವಿಧಾನ ಸೌಧ ವು ಅವ್ಯವಸ್ಥೆಯ ಆಗರವಾಗಿದೆ.ಸರಿಯಾದ ಸೌಲಭ್ಯ ಇಲ್ಲದೆ,ಕಚೇರಿಯ ಕೆಲಸಕ್ಕೆ ಆಗಮಿಸುವ ಜನತೆ ಪರದಾಡುವಂತಾಗಿ,ಜಿಲ್ಲಾಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮಿನಿ ವಿಧಾನ ಸೌಧ ದಲ್ಲಿ ತಹಶಿಲ್ದಾರರ ಕಚೇರಿ,ಉಪ ವಿಭಾಗಾಧಿಕಾರಿ ಕಛೇರಿ, ನೋಂದಣಿ ಕಚೇರಿ ಸೇರಿದಂತೆ, ಆಧಾರ ಕಾರ್ಡ,ಉತಾರ್,ಮತದಾನ ಕಾರ್ಡ ಹಾಗೂ ಪಿಂಚಣಿ ಮಾಶಾಸನ ಕ್ಕಾಗಿ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಜನತೆ ಆಗಮಿಸುತ್ತಾರೆ. ಕಚೇರಿಯ ಕೆಲಸಕ್ಕೆ ಆಗಮಿಸುವ ಜನತೆಗೆ ಕುಳಿತುಕೊಳ್ಳುವುದಕ್ಕೆ ಸರಿಯಾಗಿ ಬೆಂಚ್ ಇರುವುದಿಲ್ಲ.ಒಂದು ವಿಭಾಗಕ್ಕೆ ಒಂದೇ ಬೇಂಚ್ ಹಾಕಲಾಗಿದ್ದು,ನಾಲ್ಕು ಜನ ಕುಳಿತುಕೊಂಡರೆ ಮುಗಿಯಿತು.ಉಳಿದರು ಹಾಗೆ ನಿಲ್ಲಬೇಕು, ಹೀಗಾಗಿ ಕುಳಿತುಕೊಳ್ಳಲು ಸ್ಥಳವಕಾಶ ಇಲ್ಲದೆ ಕಚೇರಿಯ ಒಳಗೆ,ಕಾಗದ ಪತ್ರದ‌ ಮೇಲೆ ಕುಳಿತುಕೊಂಡಿರುವುದು ಸಾಮಾನ್ಯವಾಗಿದೆ.ಮಹಿಳೆಯರಿಗೆ ಪ್ರತೇಕ ಆಸನದ ವ್ಯವಸ್ಥೆ ಇಲ್ಲದೆ,ಎಲ್ಲಿಂದಲ್ಲಿ ಕುಳಿತು ಕೊಳ್ಳುವದು ಮಲಗುವದು ಸಾಮಾನ್ಯವಾಗಿ ಕಂಡು ಬರುತ್ತದೆ.ಬಿಸಲಿನ ತಾಪ ಹೆಚ್ಚಾಗಿರುವುದರಿಂದ ವಯಸ್ಸಾದವರಿಗೆ ಕುಳಿತುಕೊಳ್ಳುವದಕ್ಕೆ ಸ್ಥಳವಕಾಶ ಇರುವುದಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಸಹ,ಸ್ವಚ್ಚತಾ ಇಲ್ಲದೆ ಕುಡಿಯುವದಕ್ಕೆ ಹೋಗುವುದಿಲ್ಲ.
ಇನ್ನು ಶೌಚಾಲಯ ಇದ್ದು,ಇಲ್ಲದಂತಾಗಿದೆ.ಏಕೆಂದರೆ ಶೌಚಾಲಯಕ್ಕೆ ಬೀಗ ಹಾಕಿದ್ದರಿಂದ ಮಹಿಳೆಯರು ಶೌಚಾಲಯ ಹೋಗುವಂತಕ್ಕೆ ಪರದಾಡುವಂತಾಗಿದೆ.ಏಕೆಂದರೆ ಪುರುಷರು ಬಯಲು ನಲ್ಲಿ ತಮ್ಮ ನೈಸರ್ಗಿಕ ಕ್ರಿಯೆ ಮುಗಿಸುತ್ತಾರೆ.ಆದರೆ ಮಹಿಳೆಯರು ಮಾತ್ರ ಬಯಲು ಪ್ರದೇಶಕ್ಕೆ ಹೋಗದೆ ಮುಜಗರಕ್ಕೆ ಒಳಪಡುತ್ತಾರೆ.ಇಂತಹ ಶೌಚಾಲಯ ಬಾಗಿಲು ತೆರದು ಮಹಿಳೆಯರಿಗಾದರೂ ಅವಕಾಶ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಿನಿ ವಿಧಾನಸೌಧ ಕಟ್ಟಡ ಮುಂದೆ ನೆರಳು ಆಗುವಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಹೀಗಾಗಿ ಬಿಸಲಿನ ತಾಪದಲ್ಲಿ ಕಟ್ಟಡ ಮುಂದೆ ವಾಹನ ನಿಲ್ಲಿಸದೇ ಎಲ್ಲರೂ ಮರದ ಕೆಳಗೆ ನಿಲ್ಲಿಸುವದು ಸಾಮಾನ್ಯವಾಗಿದೆ.ತಹಶಿಲ್ದಾರರ ಬಳಕೆ ಮಾಡುವ ಸರ್ಕಾರಿ ವಾಹನವೇ ಮರದ ಕೆಳಗೆ ನಿಲ್ಲಿಸಲಾಗಿದೆ.ಬಾಗಲಕೋಟೆ ತಾಲೂಕ ಸೇರಿದಂತೆ ಬೀಳಗಿ,ಹುನಗುಂದ ಹಾಗೂ ಬಾದಾಮಿ ತಾಲೂಕಿನ ಉಪ‌ವಿಭಾಗಾಧಿಕಾರಿ ಕಚೇರಿ ಇರುವುದರಿಂದ ಪತ್ರಿ ನಿತ್ಯ ನೂರಾರು ಸಂಖ್ಯೆಯಲ್ಲಿ ಜನತೆ ಆಗಮಿಸುತ್ತಾರೆ.ಆದರೆ ಅಂಗಚೇತನ ರಿಗೆ,ವೃದ್ದರಿಗೆ.ಮಹಿಳೆಯರು ಹಾಗೂ ಮಕ್ಕಳಿಗೆ ಸೂಕ್ತ ಸೌಲಭ್ಯ ಇಲ್ಲದೆ ಪರದಾಡುವಂತಾಗಿದೆ.ಈ ಬಗ್ಗೆ ಜಿಲ್ಲಾಡಳಿತ ಕಣ್ಣು ತೆರೆದು ನೋಡಿ,ಸ್ವಚ್ಚತಾ ಜೊತೆಗೆ ಎಲ್ಲಾ ಸೌಲಭ್ಯ ನೀಡಬೇಕಾಗಿದೆ ಎಂದು ಸ್ಥಳೀಯರ ಒತ್ತಾಯವಾಗಿದೆ.ಈ ಬಗ್ಗೆ ಜಿಲ್ಲಾಡಳಿತ ಎಷ್ಟು ದಿನದಲ್ಲಿ ಸಮಸ್ಯೆ ಬಗೆ ಹರಿಸಲಿದೆ ಎಂದು ಕಾಯ್ದು ನೋಡಬೇಕಾಗಿದೆ.

Conclusion:ಆನಂದ
ಈ ಟಿವಿ,ಭಾರತ್,ಬಾಗಲಕೋಟೆ..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.