ETV Bharat / state

ಪುನರ್ವಸತಿ ಕೇಂದ್ರಗಳಲ್ಲಿ ರೆಡ್​ ಕ್ರಾಸ್​ನಿಂದ ಅಗತ್ಯ ವಸ್ತುಗಳ ಪೂರೈಕೆ - pattadakallu flood

ಪಟ್ಟದಕಲ್ಲು ಮಲಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡಿತ್ತು. ಇದೀಗ ಪುನರ್ವಸತಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನ ಪೂರೈಸಲಾಗುತ್ತಿದೆ.

flood
author img

By

Published : Aug 14, 2019, 2:57 PM IST

Updated : Aug 14, 2019, 3:02 PM IST

ಬಾಗಲಕೋಟೆ: ಐತಿಹಾಸಕ ಸ್ಥಳ ಪಟ್ಟದಕಲ್ಲು ಮಲಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡಿತ್ತು. ಈಗ ಪ್ರವಾಹ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಸಂಚಾರ ಪ್ರಾರಂಭವಾಗಿದೆ. ಆದರೆ ಸಂತ್ರಸ್ತರು ನಿರಾಶ್ರಿತ ಕೇಂದ್ರದಲ್ಲಿ ವಾಸವಿದ್ದು, ಎಲ್ಲವನ್ನು ಕಳೆದುಕೊಂಡು ಪರದಾಡುವಂತಾಗಿದೆ.

ಈ ನಿರಾಶ್ರಿತ ಕೇಂದ್ರಗಳಿಗೆ, ಬೆಂಗಳೂರಿನ ಪೀಣ್ಯಾ ಜಮಖಾನ ಹಾಗೂ ರೋಟರಿ ಬೆಂಗಳೂರು ಜಾಲಹಳ್ಳಿ ಮತ್ತು ಮಲ್ಲಿಗೆ ಊಟದ ಮನೆ ಬೆಂಗಳೂರು ಅವರು ಕೊಡಮಾಡಿದ ವಸ್ತುಗಳನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಘಟಕದಿಂದ ಚೇರ್ಮನ್​ ಆನಂದ ನೇತೃತ್ವದಲ್ಲಿ ಸಂತ್ರಸ್ತರಿಗೆ ವಿತರಿಸಲಾಯಿತು.

ಅವಶ್ಯಕ ವಸ್ತುಗಳ ಪೂರೈಕೆ

ಬಾದಾಮಿ ತಾಲೂಕಿನ ಮಂಗಳಗುಡ್ಡ, ಕಾಟಾಪುರ, ಚಿಮ್ಮಲಗಿ ಹಾಗೂ ಪಟ್ಟದಕಲ್ಲು ಪುನರ್ವಸತಿ ಕೇಂದ್ರಗಳಲ್ಲಿ ಬ್ಲಾಂಕೆಟ್, ಚಾಪೆ, ಪೇಸ್ಟ್-ಬ್ರಶ್, ಸೋಪು, ಬೆಡ್ ಶೀಟ್, ಮಕ್ಕಳ ಬಟ್ಟೆ ಹಾಗೂ ಬಿಸ್ಕೆಟ್ ಗಳನ್ನ ನೀಡಲಾಯಿತು.

ಕಳೆದ 8 ದಿನಗಳಿಂದ ಅವಿರತವಾಗಿ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಂದ ಪರಿಹಾರ ಕೇಂದ್ರಗಳಿಗೆ ಹೋಗಿ ಅಲ್ಲಿನ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನ ಪೂರೈಸಲಾಗುತ್ತಿದೆ. ಅಲ್ಲದೆ ಬಳ್ಳಾರಿಯಿಂದ ಪ್ರವಾಹ ಸ್ಥಿತಿಯನ್ನು ನಿಭಾಯಿಸುವ ರೆಡ್ ಕ್ರಾಸ್​ನ ಸರ್ವ ಸೇವಾ ಕಾರ್ಯಕರ್ತರು ಬಂದು ಜಮಖಂಡಿಯಲ್ಲಿ ಸೇವಾ ಕಾರ್ಯ ನಿರ್ವಹಿಸಿದ್ದಾರೆ.

ಇಂದು ರೆಡ್ ಕ್ರಾಸ್ ಸಂಸ್ಥೆಯ ರವಿ ಕುಮಟಗಿ, ಸಂಗಮೇಶ ವೈಜಾಪುರ, ಶ್ರೀಶೈಲ ಬಿರಾದಾರ, ಸಂತೋಷ ದೇಶಪಾಂಡೆ, ಕಿರಣ ನಾಶಿ, ಈರಣ್ಣಾ ಅಥಣಿ, ವೀರೇಶ ರೋಣದ ಸೇರಿದಂತೆ ಮತ್ತಿತರರು ಬಾಗವಹಿಸಿದ್ದರು.

Intro:AnchorBody:ಬಾಗಲಕೋಟೆ--ಐತಿಹಾಸಕ ಸ್ತಳ ಪಟ್ಟದಕಲ್ಲು ಮಲ್ಲಪ್ರಭಾ ನದಿ ಪ್ರವಾಹ ದಿಂದ ಸಂರ್ಪೂ ಜಲಾವೃತ್ತಗೊಂಡಿತ್ತು.ಈಗ ಪ್ರವಾಹ ಕಡಿಮೆ ಆಗಿರುವ ಹಿನ್ನಲೆಯಲ್ಲಿ ಸಂಚಾರ ಪ್ರಾರಂಭವಾಗಿದೆ.
ಆದರೆ ಸಂತ್ರಸ್ತರು ನಿರಾಶ್ರಿತ ಕೇಂದ್ರದಲ್ಲಿ ವಾಸ ಇದ್ದು,ಎಲ್ಲವನ್ನು ಕಳೆದುಕೊಂಡು ಪರದಾಡುವಂತಾಗಿದೆ.
ಈ ನಿರಾಶ್ರಿತ ಕೇಂದ್ರಗಳಿಗೆ, ಬೆಂಗಳೂರಿನ
ಪಿನ್ಯಾ ಜಿಮಖಾನ ಹಾಗೂ ರೊಟರಿ ಬೆಂಗಳೂರ ಜಾಲಹಳ್ಳಿ ಮತ್ತು ಮಲ್ಲಿಗೆ ಊಟದ ಮನೆ ಬೆಂಗಳೂರು ಅವರುಗಳು ಕೂಡಮಾಡಿದ ವಸ್ತುಗಳನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಾಗಲಕೋಟ ಜಿಲ್ಲಾ ಘಟಕದಿಂದ ಚೇರಮನ್ ಆನಂದ ಜಿಗಜಿನ್ನಿಯವರ ನೇತೃತ್ವದಲ್ಲಿ ಸಂತ್ರಸ್ತರಿಗೆ ವಿವಿಧ ಸಾಮಗ್ರಿಗಳು ವಿತರಣೆ ಮಾಡಲಾಯಿತು.
ಬಾದಾಮಿ ತಾಲೂಕಿನ ಮಂಗಳಗುಡ್ಡ,ಕಾಟಾಪುರ, ಚಿಮ್ಮಲಗಿ ಹಾಗೂ ಪಟ್ಟದಕಲ್ಲು ಪುನರ್ವಸತಿ ಕೇಂದ್ರಗಳಲ್ಲಿ ಬ್ಲಾಂಕೆಟ್, ಚಾಪೆ, ಪೆಸ್ಟು-ಬ್ರಶು, ಸೋಪು, ಬೇಡ್ ಶೀಟ ಹಾಗೂ ಮಕ್ಕಳ ಬಟ್ಟೆ, ಕುಂಚಿಗೆ ಹಾಗೂ ಬಿಸ್ಕೆಟ್ ಗಳನ್ನ ನೀಡಲಾಯಿತು.
ಕಳೆದ 8 ದಿನಗಳಿಂದ ಅವಿರತವಾಗಿ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿಂದ ಪರಿಹಾರ ಕೇಂದ್ರಗಳಿಗೆ ಹೊಗಿ ಅಲ್ಲಿನ ಸಂತ್ರಸ್ತರಿಗೆ ಅವಶ್ಯಕ ವಸ್ತುಗಳನ್ನ ಪೂರೈಸಲಾಗುತ್ತಿದೆ ಅಲ್ಲದೆ ಬಳ್ಳಾರಿಯಿಂದ ಪ್ರವಾಹ ಸ್ಥಿತಿಯನ್ನು ನಿಭಾಯಿಸುವ ರೆಡ್ ಕ್ರಾಸ್ ನ ಸರ್ವ ಸೇವಾ ಕಾರ್ಯಕರ್ತರು ಬಂದಿದ್ದು ಜಮಖಂಡಿಯಲ್ಲಿದ್ದು ಅಲ್ಲಿ ಸೇವಾ ಕಾರ್ಯನಿರ್ವಹಿಸಿದ್ದಾರೆ.
ಇಂದು ರೆಡ್ ಕ್ರಾಸ್ ಸಂಸ್ಥೆಯ ರವಿ ಕುಮಟಗಿ, ಸಂಗಮೇಶ ವೈಜಾಪುರ, ಶ್ರೀಶೈಲ ಬಿರಾದಾರ, ಸಂತೋಷ ದೇಶಪಾಂಡೆ, ಕಿರಣ ನಾಶಿ, ಈರಣ್ಣಾ ಅಥಣಿ, ವೀರೇಶ ರೋಣದ ಮತ್ತಿತರರು ಬಾಗವಹಿಸಿದ್ದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
Last Updated : Aug 14, 2019, 3:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.