ETV Bharat / state

21 ಗುಂಟೆ ಜಮೀನಿಗಾಗಿ ನಾಲ್ವರು ಸಹೋದರರ ಹತ್ಯೆ: ಕಲ್ಲು ಹೃದಯವೂ ಕರಗುವ ಕುಟುಂಬಸ್ಥರ ಕಣ್ಣೀರು - ಬಾಗಲಕೋಟೆ ಹತ್ಯೆ

ಜಮೀನು ವಿವಾದದಲ್ಲಿ ನಾಲ್ವರು ಮಕ್ಕಳನ್ನು ಕಳೆದುಕೊಂಡ ತಾಯಿ ಸಿದ್ದಲಿಂಗವ್ವ ರೋಧನೆ ಕರುಳು ಹಿಂಡುವಂತಿದೆ. ಸಾವಿಗೀಡಾದ ಸಹೋದರರಿಗೆ ಒಟ್ಟು 12 ಜನ ಮಕ್ಕಳಿದ್ದಾರೆ. ಕೇವಲ 21 ಗುಂಟೆ ಜಮೀನಿಗಾಗಿ ಉಂಟಾದ ವಿವಾದ ಭೀಕರ ಕೊಲೆಯಲ್ಲಿ ಅಂತ್ಯವಾಗಿತ್ತು.

deceased's-family-burst-out-tears-at-ritual-place
ಸಹೋದರರ ಕೊಲೆ ಪ್ರಕರಣ: ಕಲ್ಲು ಹೃದಯ ಕರಗಿಸುತ್ತೆ ಕುಟುಂಬಸ್ಥರ ಆಕ್ರಂದನ
author img

By

Published : Aug 29, 2021, 2:08 PM IST

ಬಾಗಲಕೋಟೆ: ಜಮಖಂಡಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ಅಂತ್ಯ ಸಂಸ್ಕಾರದ ವೇಳೆ ಅತ್ಯಂತ ದಾರುಣವಾಗಿ ಹತ್ಯೆಯಾದ ಮುದರಡ್ಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಕೊಲೆಯಾದ ಹನಮಂತ, ಮಲ್ಲಪ್ಪ, ಬಸಪ್ಪ ಹಾಗು ಈಶ್ವರ ಅವರ ಪತ್ನಿ, ಮಕ್ಕಳು ಹಾಗೂ ತಾಯಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಕೊಲೆಗೀಡಾದ ಸಹೋದರರ ಕುಟುಂಬಸ್ಥರ ನೋವು

ಸಾವಿಗೀಡಾದ ಈ ನಾಲ್ವರು ಸಹೋದರರಿಗೆ ಒಟ್ಟು 12 ಜನ ಮಕ್ಕಳಿದ್ದಾರೆ. ಕೇವಲ 21 ಗುಂಟೆ ಜಮೀನಿಗಾಗಿ ಉಂಟಾದ ವಿವಾದ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಘಟನೆ ಸಂಬಂಧ ಪುಟಾಣಿ ಕುಟುಂಬದ 9 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ಜಮಖಂಡಿ ಸಹೋದರರ ಕೊಲೆ ಪ್ರಕರಣ: 12 ಆರೋಪಿಗಳ ಹೆಸರು ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.