ETV Bharat / state

ಸಂಸದ ಪಿ.ಸಿ.ಗದ್ದಿಗೌಡರ್​, ಶಾಸಕ ದೊಡ್ಡನಗೌಡ ಪಾಟೀಲರಿಗೆ ಸಂತ್ರಸ್ತರು ತರಾಟೆ - Chief minister relief fund

ಸಂಸದ ಪಿ.ಸಿ.ಗದ್ದಿಗೌಡರ್​ ಮತ್ತು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿಯಾದ ಸಮಯದಲ್ಲಿ ಸಂತ್ರಸ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.

MP, MLA meet the residents affected by floods in Bagalkot
author img

By

Published : Aug 13, 2019, 5:26 AM IST

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಹದಿಂದ ನಲುಗಿರುವ ನಮಗೆ ಯಾವುದೇ ಪರಿಹಾರ ನೀಡಿಲ್ಲ. ಇಷ್ಟೊಂದು ಭೀಕರ ಪ್ರವಾಹ ಇದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕೇಳುವವರೇ ಇಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರು ಗಂಜೀಹಾಳ, ಚಿತ್ತರಗಿ ಸೇರಿದಂತೆ ಹಲವು ಗ್ರಾಮದಲ್ಲಿ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಮಯದಲ್ಲಿ ಸಂತ್ರಸ್ಥರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಶಾಶ್ವತ ಪರಿಹಾರ ಕಲ್ಪಸಿ, ಇಲ್ಲವೇ ಯಾರೂ ಬರಬೇಡಿ ಎಂದು ಕೂಗಾಡಿದ್ದಾರೆ.

ಸಂಸದ ಪಿ.ಸಿ.ಗದ್ದಿಗೌಡರ್​, ಶಾಸಕ ದೊಡ್ಡನಗೌಡ ಪಾಟೀಲರಿಗೆ ಸಂತ್ರಸ್ತರು ತರಾಟೆ

ಇನ್ನೊಂದು ಕಡೆ ಸಂಸದ ಪಿ.ಸಿ.ಗದ್ದಿಗೌಡರ್​ ಅವರು ಸಂತ್ರಸ್ಥರನ್ನು‌ ಭೇಟಿಯಾದ ಸಮಯದಲ್ಲಿ ಮಹಿಳೆಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿ ಸಾಯುತ್ತಿದ್ದೇವೆ. ನೀರು ಹಾಕಲು ಬಂದಿದ್ದೀರಾ ಎಂದಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಕದ್ದು ಮುಚ್ಚಿ ಹಣ, ಸೀರೆ, ಇತರ ಸಾಮಗ್ರಿಗಳನ್ನು ನೀಡುತ್ತೀರಿ.ಈಗ ಯಾರೂ ಏನೂ ಮಾಡುವುದಿಲ್ಲ ಎಂದು ಫೋಸ್ಟ್​​ ಮಾಡಿದ್ದಾರೆ.

Intro:AnchorBody:ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಹ ದಿಂದ ಜನತೆ ಸಂತ್ರಸ್ಥರಾಗಿ ತತ್ತರಗೊಂಡಿದ್ದಾರೆ.ಇಷ್ಟೊಂದು ಭೀಕರ ಪ್ರವಾಹ ಇದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ, ಗಂಜೀಹಾಳ,ಚಿತ್ತರಗಿ ಸೇರಿದಂತೆ ಇತರ ಗ್ರಾಮದಲ್ಲಿ ಪ್ರವಾಹ ಪ್ರದೇಶ ಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಸಮಯದಲ್ಲಿ ಸಂತ್ರಸ್ಥರು ತೀವ್ರ ತರಾಟೆ ತೆಗೆದುಕೊಂಡು ಘಟನೆ ಜರುಗಿದೆ.ಶಾಶ್ವತ ಪರಿಹಾರ ಕಲ್ಪಸಿ,ಇಲ್ಲವೇ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಬರಬೇಡಿ ಎಂದು ಕೂಗಾಡಿದ್ದಾರೆ.
ಇನ್ನೊಂದು ಕಡೆ ಸಂಸದ ಪಿ.ಸಿ.ಗದ್ದಿಗೌಡರ ಸಂತ್ರಸ್ಥರನ್ನು‌ ಭೇಟ್ಟಿ ಯಾದ ಸಮಯದಲ್ಲಿ ಮಹಿಳೆಯೊರ್ವರು,ನಾವು ಇಲ್ಲಿ ಸಾಯುತ್ತಿದ್ದೇವೆ.ನೀರು ಹಾಕಲು ಬಂದಿದ್ದೀರಾ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ.ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಕದ್ದು ಮುಚ್ಚಿ ಹಣ,ಸೀರೆ,ಇತರ ಸಾಮಗ್ರಿಗಳನ್ನು ನೀಡುತ್ತೀರಿ.ಈಗ ಯಾರ ಬೇಕಾದರೂ ಧಾರವಾಳ ನೀಡಬಹುದು ಯಾವ ಅಧಿಕಾರಿಗಳು ಎನೂ ಮಾಡುವುದಿಲ್ಲ ಎಂದು ಪೊಸ್ಟ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.