ಬಾಗಲಕೋಟೆ: ನಗರದ ಮೋಟಗಿ ಬಸವೇಶ್ವರ ದೇವಾಲಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.
ಮುಳಗಡೆ ಪ್ರದೇಶದಲ್ಲಿ ಇರುವ ಮೋಟಗಿ ಬಸವೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಭಾರತ ಹುಣ್ಣಿಮೆ ದಿನದಂದು ಜಾತ್ರೆಯ ಅಂಗವಾಗಿ ರಥೋತ್ಸವ ನಡೆಸಲಾಗುತ್ತದೆ. ಮುಳಗಡೆಯಿಂದಾಗಿ ಮನೆಗಳ ಸ್ಥಳಾಂತರ ಆಗಿದ್ದರೂ ಜಾತ್ರೆಗೆ ಮಾತ್ರ ಯಾವ ತೊಂದರೆಯೂ ಇಲ್ಲ.
ಈ ಜಾತ್ರಾ ಮಹೋತ್ಸವ ಅಂಗವಾಗಿ ಮೋಟಗಿ ಬಸವೇಶ್ವರ ದೇವರ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.