ಬಾಗಲಕೋಟೆ: ಹೊಲದಲ್ಲಿ ಕೀಟನಾಶಕ ಔಷಧ ಸಿಂಪಡಣೆ ಮಾಡಿದ್ದ ಬೆಳೆಗಳನ್ನು ತಿಂದು 20ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಜರುಗಿದೆ.
ಬೂದಿಗಡ ಗ್ರಾಮದ ಗ್ಯಾನಪ್ಪ ನಿಂಬಲಗುಂದಿ ಎಂಬುವವರಿಗೆ ಸೇರಿದ ಕುರಿಗಳು ಇವಾಗಿವೆ. ಸುಮಾರು 130 ಕುರಿಗಳು ಹೊಲದಲ್ಲಿ ಮೇಯಲು ಬಿಡಲಾಗಿತ್ತು. ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಿರುವ ಬಗ್ಗೆ ತಿಳಿಯದೇ ಕುರಿ ಮಾಲೀಕರು ಕುರಿಗಳನ್ನು ಮೇಯಿಸಲು ಹೊಲಕ್ಕೆ ಬಿಟ್ಟಿದ್ದರು. ಹೊಲದಲ್ಲಿ ಕೀಟನಾಶಕಯುಕ್ತ ಬೆಳೆ ಮೇಯುತ್ತಲೇ 20 ಕುರಿಗಳು ಮೃತಪಟ್ಟಿವೆ.
ಇನ್ನು 30ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿದ್ದು, ಪಶು ಸಂಗೋಪನೆ ಇಲಾಖೆ ವೈದ್ಯರು ಚಿಕಿತ್ಸೆ ನೀಡಿದ್ದರಿಂದ ಚೇತರಿಸಿಕೊಂಡಿವೆ ಎನ್ನಲಾಗುತ್ತಿದೆ. ಇದರಿಂದ 3 ಲಕ್ಷಕ್ಕೂ ಹೆಚ್ಚು ಹಾನಿ ಆಗಿದೆ ಎಂದು ಕುರಿಗಾಹಿ ಗ್ಯಾನಪ್ಪ ನಿಂಬಲಗುಂದಿ ಅಳಲು ತೋಡಿಕೊಂಡಿದ್ದಾರೆ.