ಬಾಗಲಕೋಟೆ : ಹೆಂಡತಿ ಮತ್ತು ಮಗ ಸೇರಿ ಗಂಡನನ್ನು ಕೊಲೆ ಮಾಡಿರುವ ಘಟನೆ ಬಾದಾಮಿ ತಾಲೂಕಿನ ಗೋನಾಳ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಬಸಪ್ಪ ಹೊಸಗೌಡ್ರ (55) ಕೊಲೆಯಾದ ವ್ಯಕ್ತಿ. ಕುಡಿದು ಬಂದು ಮನೆಯಲ್ಲಿ ಪ್ರತಿ ನಿತ್ಯ ಗಲಾಟೆ ಮಾಡುತ್ತಿದ್ದ ತಂದೆಯನ್ನು ಇಟ್ಟಿಗೆಯಿಂದ ಹೊಡೆದು ಪತ್ನಿ ಹಾಗೂ ಮಗ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ಮಗ ಶಿವಾನಂದ ಹೊಸಗೌಡ್ರ ಹಾಗೂ ತಾಯಿ ಮಾಂತವ್ವ ಹೊಸಗೌಡ್ರ ಕೊಲೆ ಮಾಡಿದ ಆರೋಪಿಗಳು. ಬಸಪ್ಪ ಹೊಸಗೌಡ್ರ ಸದಾ ಕುಡಿದು ಬಂದು ಜಗಳ ತೆಗೆಯುತ್ತಿದ್ದನಂತೆ. ನಿನ್ನೆ ಕುರಿ ಮಾರಿ ಮದ್ಯ ಸೇವಿಸಿ ಬಂದ ಆತ ಮತ್ತೆ ಗಲಾಟೆ ಆರಂಭಿಸಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
![bagalkot](https://etvbharatimages.akamaized.net/etvbharat/prod-images/12402457_thum.jpg)
ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹಳೆಯ ವೈಷಮ್ಯದ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆ : ವ್ಯಕ್ತಿಯ ಸ್ಥಿತಿ ಗಂಭೀರ