ETV Bharat / state

ಜೀವಕ್ಕೆ ಕುತ್ತು ತಂದ ಕ್ರಿಕೆಟ್ ಬೆಟ್ಟಿಂಗ್.. ಸಾಲ ತೀರಿಸಲಾಗದೆ ಬಾಗಲಕೋಟೆಯಲ್ಲಿ ವ್ಯಕ್ತಿ ಆತ್ಮಹತ್ಯೆ - ಬಾಗಲಕೋಟೆ

ಕ್ರಿಕೆಟ್ ಬೆಟ್ಟಿಂಗ್​ಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ವ್ಯಕ್ತಿ ಸಾಲ ತೀರಿಸಲಾಗದೆ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಗ್ನಿಶಾಮಕ ದಳ ಸಿಬ್ಬಂದಿ ನದಿಯಲ್ಲಿ ಸತತ ಶೋಧ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.

man-commits-suicide-for-indebted-by-cricket-betting
ಕ್ರಿಕೆಟ್ ಬೆಟ್ಟಿಂಗ್​ಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ವ್ಯಕ್ತಿ ಆತ್ಮಹತ್ಯೆ
author img

By

Published : Oct 16, 2021, 6:55 AM IST

ಬಾಗಲಕೋಟೆ: ಕ್ರಿಕೆಟ್ ಬೆಟ್ಟಿಂಗ್​​​ಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ವ್ಯಕ್ತಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ನಡೆದಿದೆ.

ಕಲಾದಗಿಯಿಂದ‌ ಕಾತರಕಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೈಯದ್​ ವಾಳದ್ (34) ಮೃತ ವ್ಯಕ್ತಿ. ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಮೃತದೇಹವನ್ನ ಹೊರತೆಗೆದಿದ್ದಾರೆ.

ಸೈಯದ್​ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್​​​​ಗಾಗಿ ಊರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ‌ ಮಾಡಿದ್ದ ಎನ್ನಲಾಗ್ತಿದೆ. ಬಳಿಕ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಕಲಾದಗಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ಹೆಂಡತಿ, ಸಂಬಂಧಿಗೆ ಗುಂಡಿಕ್ಕಿ‌ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.