ETV Bharat / state

ಆಗಸ್ಟ್ 1ರಂದು ವ್ಯಸನಮುಕ್ತ ದಿನಾಚರಣೆಗೆ ಆಗ್ರಹ - ಲಿಂಗೈಕ್ಯ ವಿಜಯ ಮಹಾಂತ ಶ್ರೀಗಳು

ದುಶ್ಚಟ ನಿವಾರಣೆ ಮಾಡಿ, ಸಮಾಜದಲ್ಲಿ ಕ್ರಾಂತಿ ಮಾಡಬೇಕು ಎಂಬ ಉದ್ದೇಶದಿಂದ ನಾಲ್ಕು ದಶಕಗಳಿಂದಲೂ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸಿದ್ದ ಇಳಕಲ್ಲದ ವಿಜಯ ಮಹಾಂತೇಶ್ವರ ಮಠದ ಲಿಂಗೈಕ್ಯ ಮಹಾಂತ ಶ್ರೀಗಳು ಹುಟ್ಟುಹಬ್ಬದಂದು ರಾಜ್ಯ ಮಟ್ಟದ ವ್ಯಸನ ಮುಕ್ತ ದಿನ ಆಚರಣೆ ಮುಂದುವರೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

sadd
ಆಗಸ್ಟ್ 1 ರಂದು ವ್ಯಸನಮುಕ್ತ ದಿನಾಚರಣೆ ಆಚರಿಸುವಂತೆ ಪ್ರಧಾನಿ,ಸಿಎಂಗೆ ಪತ್ರ
author img

By

Published : Jun 13, 2020, 2:16 AM IST

ಬಾಗಲಕೋಟೆ: ಆಗಸ್ಟ್​ 1ರಂದು ಲಿಂಗೈಕ್ಯ ವಿಜಯ ಮಹಾಂತ ಶ್ರೀಗಳ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ವ್ಯಸನಮುಕ್ತ ದಿನ ಆಚರಣೆ ಮಾಡುವುದು ಮುಂದುವರೆಯಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಿವೃತ್ತ ಅಧಿಕಾರಿ ಜಿ.ಎಸ್.ಗೌಡರ್ ಮನವಿ ಮಾಡಿದ್ದಾರೆ.

ಆಗಸ್ಟ್ 1 ರಂದು ವ್ಯಸನಮುಕ್ತ ದಿನಾಚರಣೆ ಆಚರಿಸುವಂತೆ ಪ್ರಧಾನಿ,ಸಿಎಂಗೆ ಪತ್ರ

ದುಶ್ಚಟ ನಿವಾರಣೆ ಮಾಡಿ, ಸಮಾಜದಲ್ಲಿ ಕ್ರಾಂತಿ ಮಾಡಬೇಕು ಎಂಬ ಉದ್ದೇಶದಿಂದ ನಾಲ್ಕು ದಶಕಗಳಿಂದಲೂ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸಿದ್ದ ಇಳಕಲ್ಲದ ವಿಜಯ ಮಹಾಂತೇಶ್ವರ ಮಠದ ಲಿಂಗೈಕ್ಯ ಮಹಾಂತ ಶ್ರೀಗಳು ಹುಟ್ಟುಹಬ್ಬದಂದು ರಾಜ್ಯ ಮಟ್ಟದ ವ್ಯಸನ ಮುಕ್ತ ದಿನ ಆಚರಣೆ ಮುಂದುವರೆಸಬೇಕು. ಎರಡು ವರ್ಷಗಳಿಂದ‌ ವ್ಯಸನ ಮುಕ್ತ ದಿನ ಆಚರಣೆ ಮಾಡಿ ನಂತರ ಸ್ಥಗಿತಗೊಳಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಜಾರಿ‌ ಇದ್ದ ದಿನಾಚರಣೆ ಬಿಜೆಪಿ ಸರ್ಕಾರದಲ್ಲಿ ಇಲ್ಲ ಎಂದು ಜಿ.ಎಸ್.ಗೌಡರ್ ಹೇಳಿದ್ದಾರೆ.

2017ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಸಮಯದಲ್ಲಿ ರಾಜ್ಯದ್ಯಂತ ವ್ಯಸನಮುಕ್ತ ದಿನಾಚರಣೆ ಆಚರಣೆ ಮಾಡಲಾಯಿತು. ನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಮಯದಲ್ಲಿ 69 ಲಕ್ಷ ರೂ. ಹಣವನ್ನು ಇದಕ್ಕಾಗಿ ಹಣವನ್ನು ಬಿಡುಗಡೆ ಮಾಡಿದರು. ಆದರೆ ಆರೋಗ್ಯ ಇಲಾಖೆ ವತಿಯಿಂದ ಆಚರಣೆ ಮಾಡಬೇಕು ಎಂಬ ಕಾರಣದಿಂದ ಬಿಡುಗಡೆ ಆದ ಹಣವನ್ನು ಆರೋಗ್ಯ ಇಲಾಖೆ ಸ್ವೀಕಾರ ಮಾಡದೆ ನೆನೆಗುದಿಗೆ ಬೀಳುವಂತಾಗಿದೆ. ಬಿಎಸ್​ವೈ ಸರ್ಕಾರದಿಂದ ಪುನಃ ವ್ಯಸನಮುಕ್ತ ದಿನ ಆಚರಣೆ ನಡೆಸುವಂತಾಗಬೇಕು ಎಂದು ಎಂದು ಜಿ.ಎಸ್.ಗೌಡರ್ ವಿಷಾದ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.