ಬಾಗಲಕೋಟೆ : ಜಿಲ್ಲೆಯಲ್ಲಿ ಹರಿಯುತ್ತಿರುವ ಮಲ್ಲಪ್ರಭಾ ನದಿಯ ಪ್ರವಾಹದಿಂದ ಒಂದೆಡೆ ಐತಿಹಾಸಿಕ ಸ್ಮಾರಕಗಳು ಜಲಾವೃತಗೊಂಡು ನಡುಗಡ್ಡೆಯಂತಾಗಿದೆ. ಇನ್ನೊಂದೆಡೆ ಘಟಪ್ರಭಾ ಹಾಗು ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿರುವ 32 ಜನರನ್ನು ಜಿಲ್ಲಾಡಳಿತವು ರಕ್ಷಣೆ ಮಾಡಿದ್ದು, ಇನ್ನೂ ರಕ್ಷಣಾ ಕಾರ್ಯ ಮುಂದುವರೆಸಿದೆ.
ವಿಭೂತಿ ತಯಾರಿಸುವ ಕೇಂದ್ರ ಬಾದಾಮಿ ತಾಲೂಕಿನ ಶಿವಯೋಗ ಮಂದಿರ ಸಂಪೂರ್ಣ ಜಲಾವೃತಗೊಂಡಿದೆ. ಹಾನಗಲ್ಲಿನ ಕುಮಾರೇಶ್ವರ ಸ್ವಾಮಿಜಿ ಗದ್ದುಗೆ ಬಳಿ, ರಥ ಇಡುವ ಬೃಹತ್ ಕಟ್ಟಡದ ಒಳಗೆ ನೀರು ನುಗ್ಗಿದೆ. ಇದರಿಂದ ಗೋ ಶಾಲೆಯಲ್ಲಿರುವ ಸುಮಾರು 500 ಗೋವುಗಳಿಗೆ ತೊಂದರೆ ಆಗಿದ್ದು, ಗೋವುಗಳನ್ನು ಸ್ಥಳಾಂತರ ಮಾಡಲಾಗಿದೆ.
ವಿಶ್ವಸಂಸ್ಥೆ ಪಟ್ಟಿಯಲ್ಲಿ ಸೇರಿರುವ ಐತಿಹಾಸಿಕ ಸಮುಚ್ಚಯ ಸ್ಮಾರಕ ಆಗಿರುವ ಪಟ್ಟದಕಲ್ಲು ಸಂಪೂರ್ಣ ಜಲಾವೃತಗೊಂಡು ನಡುಗಡ್ಡೆಯಾಗಿದೆ. ಪಟ್ಟಣಕಲ್ಲಿನ ಸುತ್ತಲೂ ನೀರು ಆವರಿಸಿದ್ದು, ಸಂಚಾರ ಮಾಡಲು ಸಾಧ್ಯವಾಗದೇ ನೂರಾರು ಗ್ರಾಮಸ್ಥರು ಪರದಾಡುವಂತಾಗಿದೆ.
ಇನ್ನು ಘಟಪ್ರಭಾ ಹಾಗು ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿರುವ 32 ಜನರನ್ನು ಜಿಲ್ಲಾಡಳಿತವು ಹೆಲಿಕ್ಟಾಪ್ಟರ್, ಬೋಟ್ ವ್ಯವಸ್ಥೆ ಮೂಲಕ ರಕ್ಷಣೆ ಮಾಡಿದೆ. ಬೆಳಗಾವಿ ಇಂಡಿಯನ್ ಏರ್ ಫೋರ್ಸ್ ಹೆಲಿಕಾಫ್ಟರ್ ಮೂಲಕ ರಕ್ಷಣೆ ಕಾರ್ಯಚರಣೆ ಮುಂದುವರೆಸಲಾಗಿದೆ. ಏರ್ ಫೋರ್ಸ್ ಹೆಲಿಪ್ಯಾಡ್ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ರಕ್ಷಿತ ಜನತೆಗ ಆಹಾರ, ನೀರು, ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಲಾಗಿದೆ.