ETV Bharat / state

ವೀರಭದ್ರೇಶ್ವರ ಜಾತ್ರೆಯಲ್ಲಿ ಭಕ್ತಿ ಪರಾಕಾಷ್ಠೆ - kannada news

ಕಣವಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮತ್ತು ಅಗ್ಗಿ ಉತ್ಸವ ಬಹಳ ಅದ್ದೂರಿಯಾಗಿ ಜರುಗಿತು.

ಅದ್ದೂರಿಯಾಗಿ ಜರುಗಿದ ಕಣವಿ ವೀರಭದ್ರೇಶ್ವರ ಜಾತ್ರೆ
author img

By

Published : Apr 8, 2019, 3:27 PM IST

ಬಾಗಲಕೋಟೆ: ಜಾಗೃತ ಹಾಗೂ ಉಗ್ರ ಸ್ವರೂಪ ದೇವರು ಎಂದು ಪ್ರಸಿದ್ಧಿ ಪಡೆದಿರುವ ಜಿಲ್ಲೆಯ ಕಣವಿ ವೀರಭದ್ರೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ಹಾಗೂ ಅಗ್ಗಿ ಉತ್ಸವ ಅದ್ದೂರಿಯಾಗಿ ಜರುಗಿತು.

ಪತ್ರಿ ವರ್ಷ ಯುಗಾದಿ ಪಾಡ್ಯದ ದಿನದಂದು ರಥೋತ್ಸವ ಜರುಗಲಿದ್ದು, ಮರು ದಿನ ಅಗ್ಗಿ ಉತ್ಸವ ನಡೆಯಲಿದೆ. ಈ ಉತ್ಸವದ ನಿಮಿತ್ತ ಭಕ್ತರು ಬೇಡಿಕೊಂಡ ಇಷ್ಟಾರ್ಥಗಳನ್ನು ದೇವರು ಪೂರೈಸುತ್ತಾನೆ ಎಂಬ ಪತ್ರೀತಿ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಆಗಮಿಸುವ ಭಕ್ತರು ದೇಹ ದಂಡನೆ ಮಾಡಿಕೊಂಡು ವೀರಭದ್ರೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ತುಟಿಯ ಮೇಲೆ ಕಬ್ಬಿಣದ ಸಲಾಕೆ ಹಾಕಿಕೊಂಡು ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ.

ಅದ್ದೂರಿಯಾಗಿ ಜರುಗಿದ ಕಣವಿ ವೀರಭದ್ರೇಶ್ವರ ಜಾತ್ರೆ

ಪುರುವಂತರು ವೀರಭದ್ರೇಶ್ವರ ದೇವರ ಕಡೆ ಕಡೆ ರುದ್ರ ಎಂಬ ನಾಮವಾಣಿ ಹೇಳುತ್ತಾ, ಉಗ್ರ ಅವತಾರ ತಾಳಿ ದೇಹ ದಂಡನೆ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಮಹಿಳೆಯರು, ಪುರುಷರು ಸಹ ತುಟಿ ಅಥವಾ ಗಲ್ಲದ ಮೇಲೆ ಚಿಕ್ಕ ಚಿಕ್ಕ ಕಬ್ಬಿಣದ ಸಲಾಕೆಯನ್ನಿಟ್ಟುಕೊಂಡು ಭಕ್ತಿ ಸಮರ್ಪಿಸುತ್ತಾರೆ.

ನಂತರ ದೇವಾಲಯದ ಮುಂದೆ ತೆಗೆದಿರುವ ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಪಲ್ಲಕ್ಕಿ ಸೇವೆ ಆದ ಬಳಿಕ‌ ಪಲ್ಲಕ್ಕಿ ತೆಗೆದುಕೊಂಡು ಅಗ್ನಿ ಹಾಯುವ ಮೂಲಕ ಅಗ್ಗಿ ಉತ್ಸವಕ್ಕೆ ಚಾಲನೆ ನೀಡುತ್ತಾರೆ. ಆಗ ಮಹಿಳೆಯರು, ಪುರುಷರು ಮಕ್ಕಳು ಎನ್ನದೇ ಎಲ್ಲರೂ ಕೆಂಡದಲ್ಲಿ ಹಾಯ್ದು ವೀರಭದ್ರೇಶ್ವರ ದೇವರಿಗೆ ದರುಶನ ಪಡೆದು ಪಾವನರಾಗುತ್ತಾರೆ.

ಪ್ರತಿ ವರ್ಷ ಅಗ್ನಿ ಕುಂಡದಲ್ಲಿ ಹಾಯುವುದಾಗಿ ಭಕ್ತರು ಬೇಡಿಕೊಂಡಿರುತ್ತಾರೆ. ತಮ್ಮ ಇಷ್ಟಾರ್ಥ ಪೂರೈಸುವ ಹಿನ್ನೆಲೆಯಲ್ಲಿ ಜಾಗೃತ ದೇವರು ವೀರಭದ್ರೇಶ್ವರನಿಗೆ ಪ್ರತಿ ವರ್ಷ ಅಗ್ನಿ ಕುಂಡದಲ್ಲಿ ಹಾಯ್ದು ಹರಕೆ ತೀರಿಸುವುದಾಗಿ ಭಕ್ತರು ತಿಳಿಸುತ್ತಾರೆ.

Intro:Anchor

Body:ಜಾಗೃತ ಹಾಗೂ ಉಗ್ರ ಸ್ವರೂಪ ದೇವರು ಎಂದು ಪ್ರಸಿದ್ದ ಪಡೆದಿರುವ ಬಾಗಲಕೋಟೆ ಯ ಕಣವಿ ವೀರಭದ್ರೇಶ್ವರ ದೇವಾಲಯ ಜಾತ್ರಾ ಮಹೋತ್ಸವ ಹಾಗೂ ಅಗ್ಗಿ ಉತ್ಸವ ಅದ್ದೂರಿಯಾಗಿ ಜರುಗಿತು.
ಪತ್ರಿ ವರ್ಷ ಯುಗಾದಿ ಪಾಂಡ್ಯ ದಿನದಂದು ರಥೋತ್ಸವ ಜರುಗಲಿದ್ದು,ಮರು ದಿನ ಅಗ್ಗಿ ಉತ್ಸವ ನಡೆಯಲಿದೆ.ಈ ಅಗ್ಗಿ ಉತ್ಸವ ಅಂಗವಾಗಿ ಭಕ್ತರು ಬೇಡಿಕೊಂಡ ಇಷ್ಟಾರ್ಥಗಳನ್ನು ಪೂರೈಸುವ ದೇವರು ಎಂದು ಪತ್ರೀಕ ಇದೆ.ಈ ಹಿನ್ನೆಲೆಯಲ್ಲಿ ಇಲ್ಲಿ ಆಗಮಿಸುವ ಭಕ್ತರು ದೇಹ ದಂಡನೆ ಮಾಡಿಕೊಂಡು ವೀರಭದ್ರೇಶ್ವರ ದೇವರು ಪ್ರಾರ್ಥನೆ ಸಲ್ಲಿಸುತ್ತಾರೆ.
ತುಟಿಯ ಮೇಲೆ ಕಬ್ಬಿಣದ ಸಲಾಕೆಯನ್ನು ಹಾಕಿಕೊಂಡು ಭಕ್ತಿ ಯ ಪರಾಕಾಷ್ಠೆ ಮೆರಯುತ್ತಾರೆ.ಪುರುವಂತರು ವೀರಭದ್ರೇಶ್ವರ ದೇವರ ಕಡೆ ಕಡೆ ರುದ್ರ ಎಂಬ ನಾಮವಾಣಿ ಹೇಳುತ್ತಾ,ಉಗ್ರ ಅವತಾರ ತಾಳಿ ದೇಹ ದಂಡನೆ ಮಾಡಿಕೊಳ್ಳುತ್ತಾರೆ.ಈ ಸಂದರ್ಭದಲ್ಲಿ ಮಹಿಳೆಯರು, ಪುರುಷರು ಸಹ ತುಟಿ ಅಥವಾ ಗಲ್ಲದ ಮೇಲೆ ಚಿಕ್ಕ ಚಿಕ್ಕ ಕಬ್ಬಿಣದ ಸಲಾಕೆಯನ್ನು‌ ಹಾಕಿಕೊಂಡು‌ ಭಕ್ತಿಯ ಪರಾಕಾಷ್ಠೆ ಮೆರಯುತ್ತಾರೆ.
ನಂತರ ದೇವಾಲಯ ಮುಂದೆ ತೆಗೆದಿರುವ ಅಗ್ಗಿ‌ಕುಂಡಕ್ಕೆ ಪೂಜೆ ಪುರಸ್ಕಾರ ಸಲ್ಲಿಸುತ್ತಾರೆ.ಈ ಸಂದರ್ಭದಲ್ಲಿ ಪಾಲಕಿ ಸೇವೆ ಆದ ಬಳಿಕ‌ ಪಾಲಕಿ ತೆಗೆದುಕೊಂಡು ಅಗ್ಗಿ ಹಾಯುವ ಮೂಲಕ ಅಗ್ಗಿ ಉತ್ಸವಕ್ಕೆ ಚಾಲನೆ ನೀಡುತ್ತಾರೆ.ಆಗ ಮಹಿಳೆಯರು, ಪುರುಷರು ಮಕ್ಕಳು ಎನ್ನದೇ ಎಲ್ಲರೂ ಕೆಂಡದಲ್ಲಿ ಹಾಯ್ದು ವೀರಭದ್ರೇಶ್ವರ ದೇವರಿಗೆ ದರುಶ ಪಡೆದು ಪಾವನರಾಗುತ್ತಾರೆ.ಈ ಪ್ರತಿ ವರ್ಷ ಅಗ್ಗಿ ಕುಂಡದಲ್ಲಿ ಹಾಯುವದಾಗಿ ಭಕ್ತರು ಬೇಡಿಕೊಂಡಿರುತ್ತಾರೆ.ತಮ್ಮ ಇಷ್ಟಾರ್ಥ ವನ್ನು ಪೂರೈಸುವ ಹಿನ್ನಲೆ ಜಾಗೃತ ದೇವರು ವೀರಭದ್ರೇಶ್ವರ ನಿಗೆ ಪ್ರತಿ ವರ್ಷ ಅಗ್ಗಿ ಕುಂಡದಲ್ಲಿ ಹಾಯ್ದು ಹರಕೆ ತೀರಿಸುವುದಾಗಿ ಭಕ್ತರು ತಿಳಿಸುತ್ತಾರೆ.

Conclusion:ಆನಂದ
ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.